*ಹೆಣ್ಣು ಶಿಕ್ಷಣ ಹೊಂದಿದಲ್ಲಿ ಕುಟುಂಬವೇ ಶಿಕ್ಷಣ ಹೊಂದಿದಂತೆ- ಶಿಕ್ಷಕ ಈಶ್ವರಪ್ಪ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುರುಳಿಹಾಳು ಗಾಮದಲ್ಲಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹುರುಳಿಹಾಳು ವಲಯದ ಕುಮತಿ ಕಾರ್ಯಕ್ಷೇತ್ರದಲ್ಲಿ.ಸಂಸ್ಥೆವತಿಯಿಂದ ಮಹಿಳಾ ವಿಕಾಸ ಯೋಜನೆಯಡಿಯಲ್ಲಿ, ನೂತನ “ರ್ಶ್ರೀಗಂಧ”ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಿಹಿಸಿದ್ದ ಶಿಕ್ಷಕರಾದ ಈಶ್ವರಪ್ಪ ಮಾತನಾಡಿ, ಪ್ರತಿ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಹಾಗೂ ಉತ್ತಮ ಉನ್ನತ ಶಿಕ್ಷಣ ನೀಡುವಂತೆ ಅವರು ಕರೆ ನೀಡಿದರು,ಹೆಣ್ಣೊಂದು ಶಿಕ್ತಣ ಕಲಿತರೆ ಕುಟುಂಬವೇ ಶಿಕ್ಷಣ ಕಲಿತಂತೆ. ಹೆಣ್ಣು ಮಕ್ಕಳಿಗೆ ಉತ್ತಮ ಹಾಗೂ ಉನ್ನತವಾದ ಶಿಕ್ಷಣ ನೀಡಿದಲ್ಲಿ,ಇಡೀ ಕುಟುಂಬವೇ ಶಿಕ್ಷಣ ಪಡೆದಂತಾಗುತ್ತದೆ ಮತ್ತು ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಆಭಿಪ್ರಾಯ ವ್ಯಕ್ತಪಡಿಸಿದರು.ಇತ್ತೀಚಿನ ದಿನಗಳಲ್ಲಿ ಕೊರೊನಾ ಭಯ ಹಾಗೂ ಮೊಬೈಲ್ ಹಾವಳಿ ಯಿಂದಾಗಿ ಮಕ್ಕಳ ಶಿಕ್ಷಣ ಕುಂಠಿತವಾಗಿರವುದು ವಿಷಾದದ ಸಂಗತಿಯಾಗಿದೆ, ಇಂದಿನಿಂದ ಶಾಲೆಗಳು ತರೆದಿದ್ದು ಪೋಷರೆಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಕೋರಿದರು. ಮಾತೃಶ್ರೀ ರವರ ಮಹತ್ವಪೂರ್ಣ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ಜರುಗಿದ್ದು ಹೆಮ್ಮಪಡುವ ಸಂಗತಿಯಾಗಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಕುಟುಂಬದಲ್ಲಿ ಅನುಷ್ಠಾನ ಮಾಡಬೇಕೆಂದರು. ಕಾರ್ಯಕ್ರಮ ಅಯೋಜಿಸಿರುವ ಗಣ್ಯಮಾನ್ಯರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು. ವೈದ್ಯರಾದ ಬಸನಗೌಡ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಗಂಗಮ್ಮ, ಒಕ್ಕೂಟದ ಅಧ್ಯಕ್ಷೆ ಜಲಜಾಕ್ಷಿ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಮನ್ವಯಾಧಿಕಾರಿ ಶ್ರೀಮತಿ ಮಂಜುಳ.ಕೂಡ್ಲಿಗಿ ವಲಯದ ಮೇಲ್ವಿಚಾರಕರು ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು,ಕೇಂದ್ರದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
