ಸಿಂಧನೂರು : ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಸೇವೆಯನ್ನು ದಿನಾಲು ಸಾಮಾಜಿಕ ಜಾಲತಾಣದಲ್ಲಿ ನೋಡಿ ಹಲವಾರು ಒಳ್ಳೆಯ ಅಭಿಪ್ರಾಯಗಳ ಪತ್ರವನ್ನು ಬರೆದ ಕಾರುಣ್ಯ ಅಭಿಮಾನಿಗಳು ಕಲಬುರ್ಗಿ ಜಿಲ್ಲೆಯಾದ್ಯಂತ ಕಾರುಣ್ಯ ಕುಟುಂಬದ ಸೇವೆಯನ್ನು ಬಿತ್ತರಿಸುತ್ತಿರುವ ಕಾರುಣ್ಯ ಕುಟುಂಬದ ಕಣ್ಮಣಿ ಗಳಾದ ಶ್ರೀನಿವಾಸ ಗುತ್ತೇದಾರ ಸಾ/ಹೇರೂರು (ಕೆ) ತಾ/ಕಾಳಗಿ ಜಿ/ಕಲಬುರ್ಗಿ ಇವರು ಕಾರುಣ್ಯ ಆಶ್ರಮದ ಎಲ್ಲಾರನ್ನು ಪರಿಚಯಿಸಿಕೊಂಡು ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿ ಆಶ್ರಮಕ್ಕೆ ದೊಡ್ಡಮಟ್ಟದ ಅಲಮಾರಿ ವಿತರಿಸಿ ಕಾರುಣ್ಯ ಆಶ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಡಳಿತಾಧಿಕಾರಿಗಳಾದ ಚನ್ನಬಸವಸ್ವಾಮಿ ಹಿರೇಮಠ, ಮುಖ್ಯ ಸೇವಾಕರ್ತರುಗಳಾದ ಮಹೇಶ ವಿಶ್ವಕರ್ಮ, ಅವರುಗಳಿಗೆ ಸನ್ಮಾನಿಸಿ ಗೌರವಿಸಿ ಅಭಿನಂದನೆಗಳನ್ನು ಕೋರಿದರು.
ಈ ಸಮಯದಲ್ಲಿ ಮಾತನಾಡಿದ ಶ್ರೀನಿವಾಸ್ ಕಾರುಣ್ಯ ಕುಟುಂಬ ಮಾಡುತ್ತಿರುವಂತಹ ಸೇವೆ ಅದ್ಭುತವಾದದ್ದು ಇಂದಿನ ಸಮಾಜದಲ್ಲಿ ಹಿರಿಯರನ್ನು ಗೌರವಿಸುವ ಮರ್ಯಾದೆ ಕೊಡುವ ಪಾಠವನ್ನು ಸಮಾಜಕ್ಕೆ ಕಳಿಸುತ್ತಿರುವ ಕಾರುಣ್ಯ ಸಂಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಿನಾಲು ವೀಕ್ಷಿಸುತ್ತಿರುವ ನಾನು ಎಷ್ಟೇ ದೂರದ ಒಳ್ಳೆಯ ಮನಸ್ಸುಗಳಿಗೆ ಸ್ಪಂದಿಸುವುದು ಮಾನವನ ಧರ್ಮ ಎನ್ನುವ ಯೋಚನೆಯನ್ನು ಮಾಡಿ ನಾನು ಭೇಟಿ ನೀಡಿ ,ಇಲ್ಲಿಯ ಸೇವೆ ಆತ್ಮೀಯತೆಗೆ ಮನಸೋತು ಬಿಟ್ಟಿದ್ದೇನೆ. ಇಂತಹ ವಯಸ್ಸಾದವರನ್ನು ಹಾಗೂ ವಯಸ್ಕರ ಬುದ್ದಿಮಾಂದ್ಯರನ್ನು ನೋಡಿಕೊಳ್ಳುವ ರೀತಿ ಭಾರತೀಯ ಸಂಪ್ರದಾಯವನ್ನು ಎತ್ತಿ ಹಿಡಿಯುತ್ತದೆ. ಪ್ರತಿಯೊಬ್ಬ ನಾಗರಿಕರು ಸಹಿತ ಈ ಸೇವೆಗೆ ಸಹಾಯ ಸಹಕಾರ ಮಾಡಿ ಇಲ್ಲಿ ಕರ್ತವ್ಯ ನಿರ್ವಹಿಸುವಂತಹ ಪ್ರತಿಯೊಬ್ಬರಿಗೂ ಕೂಡ ಧೈರ್ಯ ತುಂಬಿ, ಶಕ್ತಿ ನೀಡಿದಾಗ ಮಾತ್ರ ಒಬ್ಬ ಆದರ್ಶವ್ಯಕ್ತಿ ಆಗಲು ಸಾಧ್ಯ ಎಂದು ಮಾತನಾಡಿದರು.
ನಂತರ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವ ಸ್ವಾಮಿ ಹಿರೇಮಠ ನಮ್ಮ ಸಿಂಧನೂರಿನ ಸಿಹಿ ಮನಸ್ಸುಗಳು ಮಾಡುತ್ತಿರುವಂತಹ ಸಹಕಾರ ಸೇವೆ ಇಂದು 250 ಕಿಲೋಮೀಟರ್ ದೂರದಲ್ಲಿನ ಮನಸ್ಸುಗಳನ್ನು ಇಂತಹ ಪುಣ್ಯಭೂಮಿಯ ಬರುವಂತೆ ಮಾಡಿದೆ. ಶರಣರ ನಾಡಾದ ಸಿಂಧನೂರು ಯಾವುದೇ ಜಾತಿ ಭೇದ ಇಲ್ಲದೆ ಹಲವಾರು ಅನಾಥರಿಗೆ ಆಸರೆ ನೀಡುವಂತಹ ಒಂದು ಪುಣ್ಯಭೂಮಿ ಇದಾಗಿದೆ. ಸರ್ಕಾರ ಏನಾದರೂ ಈ ಕಾರುಣ್ಯ ಆಶ್ರಮದ ಸೇವೆಗೆ ಸ್ಪಂದಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಯಾರು ಅನಾಥರಲ್ಲ ಎನ್ನುವ ಇತಿಹಾಸವನ್ನು ನಾವು ಸೃಷ್ಟಿಸಲು ಸಿದ್ದರಿದ್ದೇವೆ. ಇದೆಲ್ಲಾ ಭಗವಂತನ ಕೃಪೆ ನಾವು ಇಲ್ಲಿ ಕೆಲಸ ಮಾಡುವ ಕಾರ್ಮಿಕರಷ್ಟೇ ನಾವು ಇದು ಸರ್ವ ಸಮಾಜದ ಕುಟುಂಬ ಇಲ್ಲಿ ನಮ್ಮ ಕಾಯಕವನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವೆ, ಎನ್ನುವ ಆತ್ಮತೃಪ್ತಿ ನಮಗಿದೆ ಎಂದು ತಿಳಿಸಿದರು.
ನಂತರ ಶ್ರೀನಿವಾಸ್ ಗುತ್ತೇದಾರ ಅವರಿಗೆ ಸಿಂಧನೂರಿನ ಸಿಹಿ ಮನಸುಗಳ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನುನೀಡಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆ. ವಾಮದೇವ ಕುಂಬಾರ, ಹರೇಟನೂರು ಆಶ್ರಮದ ಮೇಲ್ವಿಚಾರಕರಾದ ಸುಜಾತ ಚನ್ನಬಸವಸ್ವಾಮಿ ಹಾಗೂ ಸಿಬ್ಬಂದಿಗಳಾದ ಪಂಪಯ್ಯ ಸ್ವಾಮಿ ಜವಳಗೇರಾ, ಮಲ್ಲಿಕಾರ್ಜುನ ಸ್ವಾಮಿ ಲಿಂಗಸುಗೂರು, ಪಂಪಯ್ಯ ಸ್ವಾಮಿ ಹಚ್ಚೋಳ್ಳಿ, ಗೀತಾ ಕುಲಕರ್ಣಿ ,ರೇಖಾ ಸುಕಾಲಪೇಟೆ ,ಸಂಗನಗೌಡ ಗೋನವಾರ ಇವರುಗಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
