ಬೆಲೆ ಏರಿಕೆ ಬೆನ್ನಲ್ಲೇ ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಗ್ಯಾಸ್ ಸಿಲಿಂಡರ್ ಗಳು!
gas cylinder,,,,,,,,””””””::::::!?
ಭೋಪಾಲ್: ಬಿಜೆಪಿ ಸರ್ಕಾರ ಇರುವ ಮಧ್ಯಪ್ರದೇಶ ರಾಜ್ಯದಲ್ಲಿ ಎಲ್ ಪಿಜಿ ಸಿಲಿಂಡರ್ ಗಳು ಗುಜರಿ ಅಂಗಡಿಯಲ್ಲಿ ರಾಶಿ ರಾಶಿಯಾಗಿ ಬೀಳುತ್ತಿದ್ದು, ಗ್ಯಾಸ್ ಬೆಲೆ ಗಗನಕ್ಕೆ ಏರಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಚಿತ್ರವು ಭಿಂಡ್ ಜಿಲ್ಲೆಯ ಗುಜರಿ ಅಂಗಡಿದ್ದು ಎಂದು ಹೇಳಲಾಗಿದೆ. ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳು ರಾಶಿ ಬಿದ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇಲ್ಲಿ ಕಾಣುತ್ತಿರುವ ಸಿಲಿಂಡರ್ ಗಳು ನರೇಂದ್ರ ಮೋದಿ ಆಡಳಿತದಲ್ಲಿ ನಿಯಂತ್ರಣವಿಲ್ಲದ ಹಣದುಬ್ಬರವನ್ನು ಸಾರಿ ಹೇಳುತ್ತಿದೆ ಎಂದು ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ.
ಜಬಲ್ಪುರದಲ್ಲಿ ಉಜ್ವಲ ಯೋಜನೆಯನ್ನು ಎರಡನೇ ಹಂತದಲ್ಲಿ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ ಬೆನ್ನಲ್ಲೇ , ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ಯಾಸ್ ಬೆಲೆ ಏರಿಕೆಯಿಂದ ಜನರು ಮತ್ತೆ ಸೌದೆ ಒಲೆಯ ಬಗ್ಗೆ ಯೋಚಿಸುವಂತಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
