ಚಿತ್ರದುರ್ಗ: ಅ,23 ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದ ಶ್ರೀ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳಿಗೆ ಪರಿಸರ ಪ್ರೇಮಿ ವೈ ರಾಘವೇಂದ್ರ ರವರು ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗ್ರಾ.ಪಂ. ಉಪಾಧ್ಯಕ್ಷರಾದ ಶ್ರಿ ಪಿ.ಪಾಲಯ್ಯ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಮತ್ತು ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕು. ‘’ಮನೆಗೊಂದು ಮರ ಊರಿಗೊಂದು ವನ ಅನ್ನುವ ಹಾಗೆ ಹೆಚ್ಚು ಹೆಚ್ಚು ಹಸಿರು ಮುಕ್ತ ವಾತಾವರಣ ಸೃಷ್ಟಿಸಬೇಕು. ವಿಜ್ಞಾನಿಗಳು ಹೇಳುವ ಹಾಗೆ ಇತ್ತೀಚಿನ ದಿನಗಳಲ್ಲಿ ಓಝೋನ್ ಪದರವು ಕ್ಷೀಣಿಸುತ್ತಿದೆ ಇದರಿಂದ ಮುಂದೆ ದೊಡ್ಡ ಅನಾಹುತ ಕಾದಿದೆ ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ನಾವು ಮರಗಳನ್ನು ಸ್ವಂತ ಮಗನಂತೆ ನೋಡಿಕೊಂಡು ದಟ್ಟವಾದ ಕಾಡು ಬೆಳೆಸಬೇಕು ಎಂದು ತಿಳಿಸಿದರು. ಮಕ್ಕಳಿಗೆ ಗಿಡಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಹಂತೇಶ್ ಸಹ ಶಿಕ್ಷಕರಾದ ರಾಜಶೇಖರ್ ಲಕ್ಷ್ಮಿಕಾಂತ ಚಾರಿ ಕೃಷ್ಣಮೂರ್ತಿ ಧರ್ಶನ್ ಚೇತನ್ ವೆಂಕಟೇಶ್ ಮತ್ತು ಗ್ರಾ.ಪಂ ಸದಸ್ಯರು ಗ್ರಾಮದ ಯುವ ಮುಖಂಡರಾದ ಪಿ.ನಾಗೇಂದ್ರ ಕೆ.ಪಿ ಶಿವು, ಸೋಮಶೇಖರ್, ಗ್ರಾ.ಪಂ.ಗಣಕಯಂತ್ರ ನಿರ್ವಾಹಕರಾದ ಯರಿಸ್ವಾಮಿ ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
