;

ಗುರುವಂದನಾ ಕಾರ್ಯಕ್ರಮ, ಅಕ್ಷರ ಕಲಿಸಿದ ಗುರುಗಳಿಗೆ…!!!

ಕಾಲೇಜಿನಲ್ಲಿ 20 ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದ ವಿದ್ಯಾರ್ಥಿಗಳು, ಇದೀಗ ನಾಡಿನ ನಾನಾ ಭಾಗದಲ್ಲಿ ತಮ್ಮ ಜೀವನದ ಹಾದಿಯಲ್ಲಿದ್ದಾರೆ. ಆದರೆ, ಅವರೆಲ್ಲರ ‘ಸ್ನೇಹ ಸಮ್ಮಿಲನ’ದಿಂದ ತಮಗೆ ವಿದ್ಯೆ ಕಲಿಸಿದ ಗುರುಗಳೆಲ್ಲರನ್ನೂ ಒಂದೇ ವೇದಿಕೆಗೆ ಕರೆಸಿ ಸನ್ಮಾನಿಸುವುದರ ಮೂಲಕ ಹೃದಯಸ್ಪರ್ಶಿ “ಗುರುವಂದನೆ”ಯೊಂದಿಗೆ ಧನ್ಯತೆ ಮೆರದ ಶಿಷ್ಯಮೆರೆದರು
.ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿಯ
ಕಾನಾಮಡುಗು ಗ್ರಾಮ ಶ್ರೀಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಲಿಂಗೈಕ್ಯೆ ಕೆ.ಎಂ.ಮಂಜುನಾಥ ಅವರ ವೇದಿಕೆಯಲ್ಲಿ 1999-2000ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಗುರುವಾರ ಅಯೋಜಿಸಿದ್ದ ‘’ಗುರುವಂದೆನೆ’’ ಹಾಗೂ ಸೇಹ್ನ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಶ್ರೀ ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಶ್ರೀ ಸಿದ್ಧಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ ಕೆ.ಎಂ.ಮಂಜುನಾಥ ಅವರು ದೈಹಿಕವಾಗಿ ಇಲ್ಲವಾದರೂ, ಪ್ರತಿ ವಿದ್ಯಾರ್ಥಿಗಳು ಮನದಲ್ಲಿ ನೆಲೆಸಿದ್ದಾರೆ. ವಿದ್ಯಾರ್ಥಿಗಳು ಯಾವ ಮಟ್ಟಕ್ಕೆ ಬೆಳೆದರೂ ತಮಗೆ ವಿದ್ಯೆ ಕಲಿಸಿದ ಗುರುಗಳು, ಜೀವನದ ಮಾರ್ಗದರ್ಶನ ತೋರಿದ , ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿದ ತಂದೆ, ತಾಯಿಯನ್ನುಮತ್ತು ಗುರುಗಳನ್ನು ಮರೆಯದೇ ಸ್ಮರಿಸುವುದು ಎಲ್ಲರ ಕರ್ತವ್ಯ. 1999-2000ನೇ ಸಾಲಿನ ವಿದ್ಯಾರ್ಥಿ ವೃಂದವು ತಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಒಂದೆಡೆ ಕರೆಸಿ ಅವರಿಗೆ ಸನ್ಮಾನಿಸುವ ಮೂಲಕ ಗುರು ವಂದನೆ ಸಲ್ಲಿಸಿರುವುದು ನಿಮ್ಮಲ್ಲಿರುವ ಗುರುಭಕ್ತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ಶ್ರೀ ದಾ.ಮ.ಐಮಡಿ ಶರಣಾರ್ಯರು ಮಾತನಾಡಿ, ಶಿಕ್ಷಣಕಾಶಿಯಾದ ಕಾನಮಡುಗು ನಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿಗಳು, ಅನೇಕ ಕ್ಷೇತ್ರದಲ್ಲಿ ಉದೋಗ್ಯದಲ್ಲಿ ಇದ್ದು . ತಮ್ಮ ನೆಚ್ಚಿನ ಗುರುಗಳಿಗೆ ಸನ್ಮಾನಿಸಿ ಗೌರವ ಸಲ್ಲಿಸುತ್ತಿರುವುದು .ಹೆಮ್ಮ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಾಲೇಜಿನ ಪ್ರಾಚಾರ್ಯ ನಾಗಲಿಂಗಪ್ಪ, ಮಂಜುಳಾ, ವಿಶ್ವನಾಥ ಗೌಡ, ಜಿ.ಜಿ.ನಾಗರಾಜ್, ಮಹ್ಮದ್ ಮೆಹಬೂಬ್, ಜಿ.ಪಿ.ರುದ್ರಮುನಿ, ಕೆ.ಮಲ್ಲೇಶಪ್ಪ, ಪದ್ಮನಾಭ ಕರಣಂ, ದಯಾನಂದ ಬಾಬು, ಜೆ.ಎಂ.ಸುಧಾಕರ್, ಜೆ.ಎಂ.ಗುರಮ್ಮ, ಡಾ.ಕೆ.ಸಿ.ಶರಣಪ್ಪ, ಪಿ.ಮಹಾಂತೇಶ್, ಸಿ.ಎಚ್.ಎಂ.ಚನ್ನಬಸಯ್ಯ, ಜಿ.ಜಗದೀಶ್, ಎಚ್.ಎಂ.ರಾಜೇಂದ್ರಸ್ವಾಮಿ, ಶ್ರೀನಿವಾಸ, ಈರಣ್ಣ, ಬಿ.ಆರ್.ಮಲ್ಲಿಕಾರ್ಜುನ, ಟಿ.ಎಸ್.ವೀರೇಶ್, ಡಿ.ನಾಗರಾಜ್ ಸೇರಿ ಇತರ ಗುರುಗಳಿಗೆ ಶಿಷ್ಯರು ಸನ್ಮಾನಿಸಿ ವಂದಿಸಿದರು.ಹಳೆಯ ವಿದ್ಯಾರ್ಥಿಗಲಾದ ಲಕ್ಷ್ಮಿ, ಮಾಲಾ, ಪ್ರಾರ್ಥನಾ ಸೇರಿ ಸಂಗಡಿಗರು ಪ್ರಾರ್ಥಿಸಿದರು. ತ್ರಿವೇಣಿ ಹಾಗೂ ಶರಣಬಸವ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿ ಬಿ.ಎಂ.ಬಸೆಟ್ಟೆಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಯ ವಿದ್ಯಾರ್ಥಿ, ಶಿಕ್ಷಕ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.
ಕಾಲೇಜು ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ
ಕಾನಮಡುಗು ಶ್ರೀ ಸಿದ್ಧಲಿಂಗೇಶ್ವರ ಪ.ಪೂ ಕಾಲೇಜಿನಲ್ಲಿ 1999-2000ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳು, ತಾವು ಕಲಿತ ಕಾಲೇಜಿನ ಗ್ರಂಥಾಲಯಕ್ಕೆ ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ವಿಷಯಗಳ ನೂರಾರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದು ವಿಶೇಷ. ಈ ಗ್ರಂಥಾಲಯವನ್ನು ದಾಸೋಹ ಮಠದ ಧರ್ಮಾಧಿಕಾರಿಗಳಾದ ಶ್ರೀ ದಾ.ಮ.ಐಮಡಿ ಶರಣಾರ್ಯರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿದ್ದರು…

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;