;

ಮೊಳಕಾಲ್ಮೂರು: ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕಾರ್ಮಿಕ ಹಕ್ಕುಗಳನ್ನು ಕಾಪಾಡುವುದು ಅಗತ್ಯವಿದೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಗೌರಸಮುದ್ರ ಗ್ರಾಮದ ಮಾರಮ್ಮ ದೇವಿ ದೇವಾಲಯ ಬಳಿ ಮೊಳಕಾಲ್ಮುರು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಚಳ್ಳಕೆರೆ ತಾ.ಪಂ ೭೫ನೇ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಮಿಕ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಕಾರ್ಮಿಕ ಕಾನೂನುಗಳು ಉಲ್ಲಂಘನೆಯಾಗದಂತೆ ಕಾರ್ಮಿಕರ ಹಿತರಕ್ಷಣೆ ಕಾಡುವ ಮೂಲಕ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕಾರ್ಮಿಕ ಹಕ್ಕುಗಳನ್ನು ಕಾಪಾಡುವುದು ಅಗತ್ಯವಿದೆ ಎಂದು ಮೊಳಕಾಲ್ಮುರು ಸಿವಿಲ್ ನ್ಯಾಯಾಧೀಶೆ ಎಸ್. ನಿರ್ಮಲ ಹೇಳಿದರು. ಪ್ರತಿಯೊಬ್ಬ ಕಾರ್ಮಿಕರಿಗೆ ಕಾರ್ಮಿಕ ಕಾರ್ಡಗಳನ್ನು ಮಾಡಿಸಿ ಕೊಡುವುದು ಅಗತ್ಯವಿದೆ, ಕಾರಣ ಕೆಲಸ ಮಾಡುವಾಗ ಅವಘಡಗಳು ಸಂಭವಿಸಿದಾಗ ಅವರ ನೆರವಿಗೆ ಬರುವುದು ಮತ್ತು ಮಕ್ಕಳ ಶೈಕ್ಷಣಿಕ ಸೌಲಭ್ಯ ಪಡೆಯಲು, ವಸತಿ ನಿರ್ಮಿಸಿಕೊಳ್ಳಲು, ಮಕ್ಕಳ ವಿವಾಹ ಮಾಡಲು ಸೌಲಭ್ಯ ಪಡೆಯಲು ಅವಕಾಶವಾಗುವುದು ಎಂದು ತಿಳಿಸಿದರು, ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ೩ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಮತ್ತು ಕಾರ್ಮಿಕರ ಸುರಕ್ಷತೆ ಕಾಪಾಡಬೇಕು. ಕಾರ್ಮಿಕ ಹಕ್ಕುಗಳಂತೆ ಬೆಳಗ್ಗೆ ೮ರಿಂದ ಸಂಜೆ ೫ಗಂಟೆಯವರೆಗೆ ಕೆಲಸ ಮಾಡಿಸಬೇಕು, ಮಧ್ಯ ಒಂದು ಗಂಟೆ ವಿಶ್ರಾಂತಿ ನೀಡಬೇಕು ಎಂದು ತಿಳಿಸಿದರು, ವಕೀಲ ಎಂ.ಚಂದ್ರಣ್ಣಮಾತನಾಡಿ, ಪ್ರತಿಯೊಬ್ಬರು ಜನನ ಮತ್ತು ಮರಣ ದಾಖಲಿಸುವುದು ಅಗತ್ಯವಿದೆ. ರೈತನೊಬ್ಬ ಮೃತಪಟ್ಟಾಗ ಪೌತಿ ಖಾತೆ ಮಾಡಿಸಲು, ಪಿಂಚಣಿ ಸೌಲಭ್ಯ ಪಡೆಯಲು ಅಗತ್ಯವಾಗುವುದು ಮತ್ತು ಪ್ರತಿಯೊಬ್ಬರು ವಾಹನ ಲೈಸನ್ಸ್ ಮತ್ತು ವಿಮೆ ಹೊಂದಿರಬೇಕು. ಇಲ್ಲದಿದ್ದಲ್ಲಿ ಅಪಘಾತವಾದ ಸಮಯದಲ್ಲಿ ಪರಿಹಾರ ಪಡೆಯಲು ಬರುವುದಿಲ್ಲ ಎಂದು ತಿಳಿಸಿದರು. ಗ್ರಾ.ಪಂ ಉಪಾಧ್ಯಕ್ಷ ರಾಜಣ್ಣ, ವಕೀಲರ ಸಂಘದ ಅಧ್ಯಕ್ಷರು ಆನಂದ್, ಇತರರಿದ್ದರು…

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;