ನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೈರ್ಮಲ್ಯದ ಕೊರತೆ!!
ಮೌನಮುರಿಯದ ಪಂಚಾಯತಿ!!
ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಗಲೂರು ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಮೌನ ಮುರಿಯದ ಗ್ರಾಮ ಪಂಚಾಯತಿ!!
ಗ್ರಾಮದ ಹರಿಜನಕೇರಿಯ ಬಳಿ ದೊಡ್ಡ ಗುಂಡಿ ಮತ್ತು ತಿಪ್ಪೆಗಳಿದ್ದು, ಅಲ್ಲಿಗೆ ಮಳೆ ನೀರು ಮತ್ತು ಚರಂಡಿಯ ನೀರು ಹರಿದು ಹೋಗಿ ನೀರು ನಿಂತು ಸೊಳ್ಳೆಗಳ ಅವಾಸಸ್ಥಾನವಾಗಿದ್ದು ಅಕ್ಕ ಪಕ್ಕದ ಮನೆಯಲ್ಲಿ ಮಕ್ಕಳು ಸೇರಿದಂತೆ ಅನೇಕ ಜನರಿಗೆ ಅನಾರೋಗ್ಯಕ್ಕೆ ಆ ಗುಂಡಿ ಕಾರಣವಾಗಿದೆ .ಜೊತೆಗೆ ಮಕ್ಕಳು ಅಲ್ಲೆ ಓಡಾಡುವ ಆಟವಾಡುವ ಜಾಗವು ಅದಾಗಿದ್ದು. ಹಾವು,ಚೇಳು ಸೇರಿದಂತೆ ಹಲಾವಾರು ರೀತಿಯ ವಿಷಜಂತುಗಳು ಸಾಕಷ್ಟು ಇದಾವೆ ಈ ಕುರಿತು ಗ್ರಾಮಸ್ಥರು ದಿನಾಂಕ 22/02/2021 ಮತ್ತು 26/07/2021 ರಂದು ಎರಡು ಭಾರಿ ಅರ್ಜಿ ಸಲ್ಲಿಸಿದರೂ ತಿಪ್ಪೆಗಳ ವಿಲೇವಾರಿಗೆ ನೋಟಿಸ್ ನೀಡುವುದಾಗಲಿ, ನೈರ್ಮಲ್ಯ ಕುರಿತು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಈ ಕುರಿತು ಮೌನ ಮುರಿಯುತ್ತಿಲ್ಲ. ಅಲ್ಲದೆ ಈಗ ಗ್ರಾಮ ಪಂಚಾಯತಿ ಕಳೆದ ಅವಧಿಯಲ್ಲಿ ಒಬ್ಬ ಸದಸ್ಯರು ಈ ಹರಿಜನ ಕೇರಿಯ ಭಾಗದವರಿದ್ದರೂ ,ಈ ಅವಧಿಯಲ್ಲಿ ಅಧ್ಯಕ್ಷ ಸ್ಥಾನವೂ ಈ ಭಾಗದಲ್ಲಿಯೇ ಅದರೂ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಗ್ರಾಮದಲ್ಲಿ ದಿನೇ ದಿನೇ ಅರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದರೂ ಈ ನಿರ್ಲಕ್ಷ್ಯ ದೋರಣೆ ಸರಿ ಅಲ್ಲ. ಮುಂದೆ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಅರೋಗ್ಯವೇ ಭಾಗ್ಯ ಅದಕ್ಕೆ ಗ್ರಾಮದಲ್ಲಿ ಸ್ವಚ್ಚತೆ ನೈರ್ಮಲ್ಯ ಆಗತ್ಯ.ಮತ್ತು ಹಲವು ಬಾರಿ ಇಂತಹ ಕೊಳಕು ನೈರ್ಮಲ್ಯವನ್ನು ಎತ್ತಿ ತೋರಿಸಿದರು ಸಹ ಕ್ರಮವನ್ನು ತೆಗೆದುಕೊಳ್ಳದ ಗ್ರಾಮಪಂಚಾಯಿತಿ ಆಡಳಿತ ವರ್ಗ ಇಲ್ಲಿ ಎಷ್ಟರಮಟ್ಟಿಗೆ ಕೆಲಸವನ್ನು ನಿರ್ವಹಿಸುತ್ತಿದೆ ಎನ್ನುವುದು ಇದನ್ನು ನೋಡಿದರೆ ಕಾಣುತ್ತಿದೆ, ಇದು ಒಂದೇ ಅಲ್ಲ ಈ ತಾಲೂಕಿನಲ್ಲಿರುವ ಗ್ರಾಮಪಂಚಾಯಿತಿ ಮಟ್ಟದ ಸಮಸ್ಯೆ ಇಲ್ಲಿನ ಹಲವು ಗ್ರಾಮಪಂಚಾಯಿತಿಯಲ್ಲಿ ಇದೆ ಗೋಳು ಸರ್ ಅನ್ನುತ್ತಾರೆ ಇಲ್ಲಿನ ಸಾರ್ವಜನಿಕರು ಕಾದು ನೋಡೋಣ ಇನ್ನಾದರೂ ಬದಲಾವಣೆಗೆ ಇಲ್ಲಿನ ತಾಲೋಕು ಆಡಳಿತ ಮಂಡಳಿ ಕ್ರಮವನ್ನು ತೆಗೆದುಕೊಳ್ಳುದೆಂದು…ಎಚ್ಚರಿಕೆ
ವರದಿ: – ಅಜಯ.ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
