ಹೋರಾಟಗಾರರನ್ನು ಹತ್ತಿಕಲ್ಲು ಔರಾದ ತಾಲೂಕಿನಲ್ಲಿ ಹುಕುಂ ಶಾಹಿ
ಕಿಡಿಗೇಡಿಗಳಿಂದ ಮಾದಿಗ ದಂಡೋರ ಸಮಿತಿಯ ಯುವ ಘಟಕದ ಔರಾದ್ ತಾಲೂಕಾ ಅಧ್ಯಕ್ಷ ರತ್ನದೀಪ್ ಕಸ್ತೂರೆ ಮೇಲೆ ಹಲ್ಲೆ
ಮಾದಿಗ ದಂಡೋರ್ ಮೀಸಲಾತಿ ಹೋರಾಟ ಸಮಿತಿ ಔರಾದ್ ತಾಲೂಕಾ ಅಧ್ಯಕ್ಷರಾದ ರತ್ನದೀಪ ಕಸ್ತೂರೆ ಮೇಲೆ ಬೀದರನಿಂದ ಔರಾದಗೆ ಬರುವ ಸಮಯದಲ್ಲಿ ಮಾಮಣಕೇರಿ ರಸ್ತೆ ಮಧ್ಯದಲ್ಲಿ ತಡೆದು ಕಿಡಿಗೇಡಿಗಳಿಂದ ಹಲ್ಲೆಯಾಗಿದೆ, ಹಲ್ಲೆಕೊಳ್ಳಗಾದ ರತ್ನದೀಪರವರು ಹೇಳಿಕೆ ನೀಡಿದ್ದು ನಾನು ಮಾದಿಗ ದಂಡೋರ್ ಸಮಿತಿ ವತಿಯಿಂದ ಎ. ಜೆ. ಸದಾಶಿವ ಆಯೋಗದ ಅನುಷ್ಠಾನಕಾಗ್ಗಿ ಹೋರಾಟ ಮಾಡುತ್ತಿದ್ದು ಮೊನ್ನೆ ಬೀದರ್ ಬಂದ್ ಹಾಗೂ ಔರಾದನಲ್ಲಿ ನಡೆದ ಸದಾಶಿವ ಆಯೋಗದ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿರುವ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣರವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಹಾಗೂ ಆಯೋಗವನ್ನು ಅನುಷ್ಠಾನ ಮಾಡಬೇಕೆಂದು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಬಂಟಿ ದರ್ಬಾರೆರವರ ಜೊತೆಯಲ್ಲಿ ನಾನು ಮುಂಚೂಣಿಯಲ್ಲಿ ಇದ್ದ ಕಾರಣ ಸಚಿವ ಬೆಂಬಲಿತ ಕಿಡಿಗೇಡಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಬಂಟಿ ದರ್ಬಾರೆ ಹಾಗೂ ನನ್ನ ಮೇಲೆ ಸುಳ್ಳು ಪ್ರಕರಣ ದಾಗಲಾಗಿಸುತ್ತಿದ್ದು ಪೊಲೀಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ ನನಗೆ ನನ್ನ ಕುಟುಂಬದವರಿಗೆ ಏನೇ ಆದರೂ ಸಚಿವರೆ ಹೊಣೆಗಾರರು ಎಂದು ಆರೋಪಿಸಿದರು…

ವರದಿ.ಎಚ್ಚರಿಕೆ ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
