ವಂಶ ವೃಕ್ಷದ ಬೇರುಗಳನ್ನು ಕಿರಿಯರೊಂದಿಗೆ ಬೆಸಯುವ ಹಿರಿಯರ ಹಬ್ಬ.
ಹಿರಿಯರಿಲ್ಲದ ಮನೆ..ಗುರುಗಳಿಲ್ಲದ ಮಠ…
ಇವೆರೆಡೂ ಶೂನ್ಯ ವಂತೆ.
ಹಾಗೆಂದು ಹಿಂದೂ ಜಾನಪದ ಸಾಹಿತ್ಯ ಸಾರಿ ಸಾರಿ ಹೇಳುತ್ತಿದೆ.
ಅಂತೆಯೇ ಮನೆಯ ಹಿರಿಯರು ಕಾಲವಾದಾಗ ಅವರು ತಮ್ಮೊಂದಿಗೆ ಸದಾ ಇದ್ದಾರೆಂದು ಭಾವಿಸಿ,
ಅಗಲಿದವರ ಇರುವಿಕೆಯನ್ನು ಪುಷ್ಠೀಕರಿಸಿಕೊಳ್ಳುವ ಸಲುವಾಗಿ ಅವರು ತಮ್ಮನ್ನು ಸದಾ ಬೆನ್ನಿಗಿದ್ದಾರೆ ಎಂಬ ಭಾವನೆಯೊಂದಿಗೆ. ಮನೆತದ ಮೂಲ ಬೇರುಗಳನ್ನು ಕೃತಜ್ಞ ಪೂರ್ವಕವಾಗಿ ಸ್ಥುತಿಸಿ,ಅಗಲಿದವರ ಆತ್ಮಕ್ಕೆ ಸಂಪ್ರೀತಿಗೊಳಿಸುವ ಸಾಂಪ್ರದಾಯಿಕ ಹಬ್ಬ ಹಿರಿಯರ ಹಬ್ಬ. ಹಿಂದೂ ಧಾರ್ಮಿಕ ಆಚರಣೆಗಳು ವಿಶಿಷ್ಟವಾಗಿರುತ್ತವೆ,ಅದಕ್ಕೆ ಸಾಕ್ಷಿ ಹಿರಿಯರ ಹಬ್ಬ ಇದೊಂದು ಸಾಂಪ್ರದಾಯಿಕ ಆಚರಣೆಯಾಗಿದೆ.
ಬನ್ನಿ ಮುಡಿಯುವ ದಿನದಂದು ಪ್ರಥಮವಾಗಿ ಮನೆತನದ ಹಿರಿಯರನ್ನು ಆರಾಧಿಸುತ್ತಾರೆ, ಮನೆತನದ ಪೂರ್ವಜರಿಂದ ಈವರೆಗೆ ಕಾಲವಾದ ವರನ್ನು ಸ್ಮರಿಸಿ ಅವರಿಗೆ ಸಿಹಿಖಾಧ್ಯದ ಎಡೆಯನ್ನ ಮಾಡುತ್ತಾರೆ.ಕೆಲವೆಡೆ ಮನೆತನದ ಪೂರ್ವಜರ ಭಾವಚಿತ್ರ ಗದ್ದಿಗೆಯಲ್ಲಿರಿಸಿ ಪೂಜಿಸುತ್ತಾರೆ, ಹಲವೆಡೆಗಳಲ್ಲಿ ಪೂರ್ವಜರ ಸಂಕೇತವಾಗಿ ತುಂಬು ಕುಂಬಗಳನ್ನು ಗದ್ದಿಗೆಯ ಮೇಲಿರಿಸಿ ಆರಾಧಿಸಲಾಗುತ್ತೆ.ಈ ಮೂಲಕ ಹಿರಿಯರ ಹಬ್ಬ ಆಚರಿಸುವ ಸಂಪ್ರದಾಯವಿದ್ದು,ಹಿರಿಯರನ್ನು ಗೌರವಿಸುವ ಸ್ಥುತಿಸುವ ಧಾರ್ಮಿಕ ಕೈಂಕರ್ಯವಾಗಿದೆ.ಕಾಲವಾದವರ ಅಥವಾ ದೈವದೀನರಾದ ಹಿರಿಯರ ಅಭಿರುಚಿಯ
ಹೊಚ್ಚ ಹೊಸ ಬಟ್ಟೆಗಳನ್ನು ಗದ್ದುಗೆಯಲ್ಲಿಡಲಾಗುವುದು,ಅವರ ಅಭಿರುಚಿಯ ಖಾಧ್ಯಗಳನ್ನು ಆಹಾರ ಫಲಹಾರ ಅಡಿಗೆ ಮಾಡಿ ಎಡೆಮಾಡಲಾಗುವುದು.
ಹಿರಿಯರ ಗದ್ದುಗೆಯಲ್ಲಿರಿಸಿರುವ ಬಟ್ಟೆಗಳನ್ನು ಕೆಲವೆಡೆ ಮನೆತನದ ಪೌರೋಹೊತರಿಗೆ ದಾನವಾಗಿ ನೀಡಯವ ನಿಯಮವಿದ್ದು,ಕೆಲವೆಡೆ ಅವುಗಳನ್ನು ಕಡು ಬಡವರಿಗೆ ನಿಯಮದಂತೆ ನೀಡಲಾಗುವುದು. ಮತ್ತೆಡೆಗಳಲ್ಲಿ ಪ್ರೀತಿ ಪಾತ್ರರು ಉಡುತ್ತಾರೆ ಅಥವಾ ಮನೆಯ ಸದಸ್ಯರು ಉಟ್ಟು ಸಂಭ್ರಮಿಸುತ್ತಾರೆ. ನಾಡಿನ ಬಹುತೇಕ ಕಡೆಗಳಲ್ಲಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಆಚರಿಸಲಾಗುವುದು, ನಾಡಿನ ಹಲವು ಭಾಗಗಳಲ್ಲಿ ಅತ್ಯಲ್ಪ ವ್ಯತ್ಯಾಸಗಳೊಂದಿಗೆ ಹಿರಿಯರ ಹಬ್ಬ ರೂಡಿಯಲ್ಲಿದೆ.ಇದು ಮನೆತನದ ಬೇರುಗಳನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ ಧಾರ್ಮಿಕ ಶ್ರದ್ಧಾಚರಣೆಯಾಗಿದೆ, ಹಿರಿಯ ಕಿರಿಯರೆನ್ನದೆ ಲಿಂಗಬೇಧವಿಲ್ಲದೇ ಎಲ್ಲರನ್ನೂ ಸ್ಥುತಿಸುವ ಹಿರಿಯರ ಹಬ್ಬ ಸರ್ವಕಾಲಕ್ಕೂ ಮನ್ನಣೆ ಪಡೆದಿದೆ.ಹಿರಿಯರ ಹಬ್ಬ ವಂಶ ವೃಕ್ಷದ ಬೇರುಗಳನ್ನು ಸಂಪ್ರದಾಯಿಕ ಆಚರಣೆ ಮೂಲಕ,ಕಿರಿಯರಿಗೆ ಹಾಗೂ ಯುವಪೀಳಿಗೆಗೆ ಪರಿಚಯಿಸುವ ಅವರ ಮಹತ್ವ ಸಾರುವ ಮಹತ್ತರವಾದ ಹಬ್ಬವಾಗಿದೆ….

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
