ಸಿಂಧನೂರು : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಶಾಸಕ ವೆಂಕಟರಾವ್ ನಾಡಗೌಡ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ ಈ ಸಮಾರಂಭದಲ್ಲಿ ನೆರೆದಿರುವ ಎಲ್ಲರೂ ನೋಡಿ ನನ್ನ ವಿದ್ಯಾರ್ಥಿ ಜೀವನದ ನೆನಪುಗಳು ನನಗೆ ಮರುಕಳಿಸಿದವು. ನಾವು ಕಲಿಯುವ ವಿದ್ಯೆ ಬದುಕಿಗೆ ಆಸರೆಯಾಗಬೇಕು.ಎಲ್ಲರಿಗೂ ಸರಕಾರಿ ಉದ್ಯೋಗಗಳು ಸಿಗುವುದಿಲ್ಲ.ಆದರೆ ಬದುಕು ಕಟ್ಟಿಕೊಳ್ಳಲು ಲೆಕ್ಕ ಬರೆಯುವುದಕ್ಕೆ ಆದರೂ ಬರಬೇಕು. ನೌಕರಿಗಾಗಿ ವಿದ್ಯಾಭ್ಯಾಸ ಮಾಡಬಾರದು. ಆತ್ಮವಿಶ್ವಾಸದಿಂದ ಇದ್ದರೆ ಮಾತ್ರ ಗುರಿತಲುಪಲು ಸಾಧ್ಯ. ಬಡವನಾಗಿ ಹುಟ್ಟುವುದು ನಮ್ಮ ತಪ್ಪಲ್ಲ, ಬಡವನಾಗಿ ಸಾಯುವುದು ನಮ್ಮ ತಪ್ಪು. ಸಿಕ್ಕಂತ ಅವಕಾಶಗಳನ್ನು ಬಳಸಿಕೊಳ್ಳಬೇಕು, ಆದರೆ ಓದಿನಲ್ಲಿ ಪರಿಪೂರ್ಣತೆ ಇರಬೇಕು. ವಿಶ್ವಾಸದ ಮೇಲೆ ಬದುಕು ನಿಂತಿದೆ ಆತ್ಮವಿಶ್ವಾಸ ಒಂದಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ. ವಿಶ್ವಾಸ ಕಳೆದುಕೊಳ್ಳಬಾರದು ಇನ್ನೊಬ್ಬರನ್ನು ಇಯಾಳಿಸುವುದನ್ನು ಬಿಡಬೇಕು, ನಾನು ಶುದ್ಧವಾದರೆ ಭಾರತ ದೇಶ ಶುದ್ದವಾಗಿರುತ್ತದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಸಂಸ್ಕಾರವನ್ನು ವಿದ್ಯಾರ್ಥಿನಿಯರು ಕಲಿತು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಶ್ರೀ ಕನಕದಾಸ ಕಲ್ಯಾಣ ಮಂಟಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಂಧನೂರು, ಡಾ.ಬಿ.ಆರ್ ಅಂಬೇಡ್ಕರ್ ಪದವಿ,ಪಿಯುಸಿ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳು ಹಮ್ಮಿಕೊಂಡ, ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪದವಿ ಅಂತಿಮ ಹಾಗೂ ದ್ವಿತೀಯ ಪಿಯುಸಿ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಮತ್ತು ಸಂವಿಧಾನ ಉಳಿವಿನಲ್ಲಿ ಯುವಜನತೆಯ ಪಾತ್ರ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ವೆಂಕಟರಾವ್ ನಾಡಗೌಡ ಶಾಸಕರು ಹಾಗೂ ಮಾಜಿ ಸಚಿವರು ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸನ್ಮಾನ್ಯ ಶ್ರೀ ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗಪ್ಪ ಇಂಗಳದಾಳ ಸಮಾಜ ಕಲ್ಯಾಣ ಅಧಿಕಾರಿಗಳು ವಹಿಸಿದ್ದರು.
ಮುಖ್ಯ ಭಾಷಣಕಾರರಾಗಿ ರಮೇಶ್ ಬಲ್ಲಿದ್ ವ್ಯಕ್ತಿತ್ವ ವಿಕಸನ ತರಬೇತುದಾರರು ದೇವದುರ್ಗ ರವರು ತಮ್ಮ ಜೀವನದಲ್ಲಿ ಅನುಭವಿಸಿದಂತ ನೋವು-ನಲಿವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ಮಾತನಾಡಿದ ಕೆ. ವಿರುಪಾಕ್ಷಪ್ಪ ಮಾಜಿ ಸಂಸದರು ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಜೀವನ ರೂಪಿಸಿಕೊಳ್ಳಬೇಕು, ಮೊದಲು ಇತಿಹಾಸ ತಿಳಿದುಕೊಳ್ಳಬೇಕು, ನಮ್ಮ ತಂದೆ ತಾಯಿಯರಂತೆ ನಾವ್ ಆಗಬಾರದು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ನೂರಾರು ಜಾತಿ-ಧರ್ಮಗಳನ್ನು ಹೊಂದಿದ್ದೇವೆ ಇದರ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ. ಮನುಷ್ಯನಿಗೆ ಗುರಿ ಇಲ್ಲದಿದ್ದರೆ ಗುಲಾಮರಂತೆ ಬದುಕಿ ದಂತಾಗುತ್ತದೆ. ಬಡತನದಲ್ಲಿ ಇರುವಂತ ಪ್ರತಿಭೆಗಳು ಶ್ರೀಮಂತರಲ್ಲಿ ಇರುವುದಿಲ್ಲ.ಉಚಿತವಾದ ಶಿಕ್ಷಣವನ್ನು ಪಡೆಯದಿದ್ದರೆ ನಮ್ಮ ತಂದೆ ತಾಯಿಗೆ ದ್ರೋಹ ಮಾಡಿದಂತಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಹೋರಾಟಕ್ಕೆ ಹೋಗಬೇಡಿ, ಶಿಕ್ಷಣದಿಂದ ವಂಚಿತರಾಗುತ್ತಿರಿ. ಅಂಬೇಡ್ಕರ್ ರವರು ನಮಗೆ ಸಂವಿಧಾನವನ್ನು ಕೊಟ್ಟಿದ್ದಾರೆ. ಆದರೂ ಶೋಷಣೆಗಳು, ಜಾತಿಯ ವ್ಯವಸ್ಥೆ ಕಡಿಮೆಯಾಗಿಲ್ಲ. ಎಲ್ಲಿಯವರೆಗೆ ಶಿಕ್ಷಣ ಪಡೆಯ ದಿಲ್ಲವೋ ಅಲ್ಲಿಯವರೆಗೆ ದೌರ್ಜನ್ಯಗಳು, ಜಾತಿ ವ್ಯವಸ್ಥೆ ನಡೆಯುತ್ತಿರುತ್ತವೆ. ಆದ್ದರಿಂದ ತಾವೆಲ್ಲರೂ ಉನ್ನತ ಶಿಕ್ಷಣವನ್ನು ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳಿರಿ ಎಂದು ತಿಳಿಸಿದರು.
ಬಸವನಗೌಡ ಬಾದರ್ಲಿ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನಕ್ಕೆ ಏನಾದರೂ ತೊಂದರೆಗಳು ಬಂದರೆ ನನ್ನ ಮನೆ ಬಾಗಿಲು ಯಾವಾಗಲೂ ತೆಗೆದಿರುತ್ತದೆ ಎಂದು ಹೇಳಿದಾಗ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ, ಸಿಳ್ಳೆ ಹೊಡೆದರು.
ಸಂವಿಧಾನ ಉಳಿವಿನಲ್ಲಿ ಯುವಜನತೆಯ ಪಾತ್ರದ ಬಗ್ಗೆ ಹುಸೇನಪ್ಪ ಅಮರಾಪುರ, ರಾಮಣ್ಣ ಹಿರೇಬೇರಗಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮಾನಪ್ಪ ಪರಿಶಿಷ್ಟ ಪಂಗಡ ಇಲಾಖೆ, ಯಲ್ಲಪ್ಪ ಗೋನಾವಾರ ಗ್ರಂಥಪಾಲಕರು, ಶ್ರೀ ಶೋಭಾ, ಮೌನೇಶ್, ಪ್ರಭುರಾಜ್, ಬಿ.ಆರ್. ಸಂಗಳ ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು…ಸಿಂಧನೂರು : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಶಾಸಕ ವೆಂಕಟರಾವ್ ನಾಡಗೌಡ.

ಈ ಸಂದರ್ಭದಲ್ಲಿ ಶಿವಮಾನಪ್ಪ ಪರಿಶಿಷ್ಟ ಪಂಗಡ ಇಲಾಖೆ, ಯಲ್ಲಪ್ಪ ಗೋನಾವಾರ ಗ್ರಂಥಪಾಲಕರು, ಶ್ರೀ ಶೋಭಾ, ಮೌನೇಶ್, ಪ್ರಭುರಾಜ್, ಬಿ.ಆರ್. ಸಂಗಳ ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು….

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030