ಓರ್ವ ನಿಷ್ಠಾವಂತ “ಕಾಂಮ್ರೇಡ್” ಓರ್ವ “ಶಾಸಕ”ಗೆ ಸಮ-ಕಾಂ”ಟಿ. ಪರಸಪ್ಪ
ವಿಜಿಯನಗರ ಜಿಲ್ಲೆ ಕೂಡ್ಲಿಗಿ,ನಿಷ್ಠಾವಂತ ಓರ್ವ ಕಾಂಮ್ರೇಡ್ ಓರ್ವ ಶಾಸಕ ಗೆ ಸಮ ಎಂದು, ಎಐಕೆಎಸ್ ಕೂಡ್ಲಿಗಿ ತಾಲೂಕು ನೂತನ ಅಧ್ಯಕ್ಷ ಕಾಂಮ್ರೇಡ್ ಟಿ.ಪರಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಜರುಗಿದ ಎಐಕೆಎಸ್ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತಿ ಮತ ಪಂಥಗಳೆಲ್ಲ ಸುಳ್ಳು, ಮಾನವೀಯ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು. ಸಮಾಜಕ್ಕಾಗಿ ಶೋಷಿತರ ಏಳ್ಗೆಗೆಗೆ ಶ್ರಮಿಕರ ರೈತರ ಹಿತಕ್ಕಾಗಿ ಹೋರಾಟ ಮಾಡಬೇಕಿದೆ,ಅದಕ್ಕಾಗಿ ಎಲ್ಲಾ ಪ್ರಜ್ಞಾವಂತರು ಸಂಘಟಿತರಾಗಬೇಕೆಂದರು. ಸಿಪಿಐ ಪಕ್ಷದ ರಾಜ್ಯ ಸಹಕಾರ್ಯದರ್ಶಿ ಡಾ” ಕೆ.ಜನಾರ್ಧನ್,ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್,ಪೆನ್ನಪ್ಪ ಸಿಪಿಐ ಪಕ್ಷದ ತಾಲೂಕು ಖಜಾಂಚಿ ಹಾಗೂ ಕಟ್ಟಡ ಕಾರ್ಮಿಕರ ಸಂಘ ತಾಲೂಕು ಅಧ್ಯಕ್ಷ ಯು.ಪೆನ್ನಪ್ಪ,ಎಐಟಿಯುಸಿ ಮುಖಂಡ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮೊರಬನಳ್ಳಿ ಕರಿಯಪ್ಪ,ಅಖಿಲ ಭಾರತ ಯುವಜನ ಫೆಡರೇಷನ್ ತಾಲೂಕ ಅಧ್ಯಕ್ಷ ಹೆಚ್.ರಾಜು ಗೌಡ, ಕೊಟ್ಟೂರು ಸಿಪಿಐ ಪಕ್ಷ ಮಹಿಳಾ ಕಾರ್ಯದರ್ಶಿ ಗಜಾಪುರ ರೇಣುಕಮ್ಮ, ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಆಂಜನೇಯ, ಅಖಿಲ ಭಾರತ ಕಿಸಾನ್ ಸಭಾ ಕಾರ್ಯದರ್ಶಿ ಸಿಡೆಗಲ್ಲು ನಾಗರಾಜ,ದಿಬ್ಬದಹಳ್ಳಿ ರಮೇಶ್ ಗೌಡ,ಸಿಡೇಗಲ್ಲು ಅಖಿಲ ಭಾರತ ಕಿಸಾನ್ ಸಭಾ ನಾಗರಾಜ, ಗಜಾಪುರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ಹನುಮಂತಪ್ಪ, ವೇದಿಕೆಯಲ್ಲಿದ್ದು ಮಾತನಾಡಿರು. ಸಿಪಿಐ ತಾಲೂಕು ಕಾರ್ಯದರ್ಶಿ ಹೆಚ್.ವೀರಣ್ಣ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿದರು.ಅಖಿಲ ಭಾರತ ಯೋಜನೆ ಫೆಡರೇಶನ್ ಮುಖಂಡ ಗಜಾಪುರ ವಿಠಲ ವಂದಿಸಿದರು.
*ಕೂಡ್ಲಿಗಿ ತಾಲೂಕು ಪದಾಧಿಕಾರಿಗಳ ಆಯ್ಕೆ*-
ತಾಲೂಕ ಅಧ್ಯಕ್ಷರಾಗಿ ವಕೀಲರಾದ ಟಿ.ಪರಸಪ್ಪ, ಉಪಾಧ್ಯಕ್ಷ ಸಿಡೇಗಲ್ಲು ಆಂಜನೇಯ,ಸಹ ಉಪಾಧ್ಯಕ್ಷರು ಕ್ಯಾಸನಕೇರಿ ಸಾಡಿ ದೊಡ್ಡಪ್ಪ,ಐಗಳಮಲ್ಲಾಪುರ ಓಬಳೇಶ್,ಪ್ರಧಾನ ಕಾರ್ಯದರ್ಶಿ ದಿಬ್ಬದಳ್ಳಿ ನಾಗರಾಜ,
ಸಹಕಾರ್ಯದರ್ಶಿ ಸಂಕಲ್ಪಾಪುರ ನಿಂಗನಳ್ಳಿ ಮಲ್ಲಿಕಾರ್ಜುನ,
ಖಜಾಂಚಿ ಸಿದ್ದಯ್ಯನ ಹಟ್ಟಿ ಚಿತ್ತಣ್ಣ.
ಕಾರ್ಯಕಾರಿ ಸಮಿತಿ ಸದಸ್ಯರು
ಗುಡೇಕೋಟೆ ಪಂಚಪ್ಪ,ಕ್ಯಾಸನಕೇರಿ ಕರಿಯಪ್ಪ, ನಾಗಲಾಪುರ ಕೆಂಚಣ್ಣ, ಸಿಡೇಗಲ್ಲು ರಮೇಶ್ ಗೌಡ, ಕೊಂಬಳಿ ನಾಗರಾಜ,ಗುಡೇಕೋಟೆ ತಿಪ್ಪೇಸ್ವಾಮಿ,ತುಪ್ಪಕನಳ್ಳಿ ಬಾಲರಾಜ್ ಆಯ್ಕೆಯಾಗಿದ್ದಾರೆ.ಇದೇ ಸಂದರ್ಭದಲ್ಲಿ ಆಯ್ಕೆಯಾದ ಪದಾಧಿಕಾರಿಗಳನ್ನ ವೇದಿಕೆಗೆ ಸ್ವಾಗತಿಸಿ ಅಭಿನಂದಿಸಲಾಯಿತು.
*ಸಮ್ಮೇಳನದ ಪ್ರಮುಖ ಹಕ್ಕೋತ್ತಾಯಗಳು*-ಸಮ್ಮೇಳನದಲ್ಲಿ ಪ್ರಮುಖ ಆರು ನಿರ್ಣಯಗಳನ್ನು ಕೈಗೊಂಡು,ಈಡೇರಿಸುವಂತೆ ಸರ್ಕಾರಕ್ಕೆ ಈ ಮೂಲಕ ಹಕ್ಕೋತ್ತಾಯ ಮಾಡಲಾಯಿತು. ಉತ್ತರ ಪ್ರದೇಶದಲ್ಲಿ ಜರುಗಿದ ರೈತರ ಹತ್ಯ ಪ್ರಕರಣದಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ಹಾಗೂ ಕೇಂದ್ರ ಮಂತ್ರಿಯನ್ನ ಉಛ್ಛಾಟಿಸಬೇಕು,ಕೂಡ್ಲಿಗಿ ತಾಲೂಕುನ್ನು ಸಮಘ್ರವಾಗಿ ಅಭಿವೃದ್ದಿ ಪಡಿಸಬೇಕಿದೆ. ನೀರಾವರಿಯನ್ನಾಗಿ ಅಭಿವೃದ್ಧಿ ಪಡಿಸಬೇಕು ಮತ್ತು ಕೆರೆಗಳಿಗೆ ನೀರು ಪೂರೈಸಬೇಕು, ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ಒದಗಿಸಬೇಕು ಹಾಗೂ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ನರೇಗಾದಲ್ಲಿ ಕಾರ್ಮಿಕರಿಗೆ 120ಕ್ಕೂ ಹೆಚ್ಚು ದಿನಗಳ ಕೂಲಿ ಕೆಲಸ ಹಾಗೂ ಕೂಲಿ ಹಣ ಸಮರ್ಪಕವಾಗಿ ಪೂರೈಸಬೇಕು, ರೈತರ ಹಾಗೂ ಕಾರ್ಮಿಕರ ಮೇಲಿನ ಖಾಸಗಿ ಪೈನಾನ್ಸ್ ಹಾಗೂ ಸ್ಥಳೀಯ ಬ್ಯಾಂಕ್, ಸೊಸೈಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಎಲ್ಲಾ ಸಾಲ ಮನ್ನಗೊಳಿಸಬೇಕೆಂದು.ಸರ್ಕಾರಕ್ಕೆ
ಅಖಿಲ ಭಾರತ ಕಿಸಾನ್ ಸಭಾದಿಂದ ಸಮ್ಮೇಳನದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು,
ಈ ಸಂದರ್ಭದಲ್ಲಿ ಎಐಕೆಎಸ್ ನ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಹೋರಾಟಗಾರರು ಉಪಸ್ಥಿತರಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
