ಬಾಲಕಿಯರ ವಸತಿ ನಿಲಯ ಕಟ್ಟಡ ಉದ್ಘಾಟಿಸಿದ ಸಚಿವರು…!!!

ಸಿಂಧನೂರು : ತಾಲೂಕಿನ ಶಿವಜ್ಯೋತಿ ನಗರದಲ್ಲಿ 2.90ಲಕ್ಷ ರೂ.ವೆಚ್ಚದಲ್ಲಿ ಪರಿಶಿಷ್ಟ ವರ್ಗದ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ಉದ್ಘಾಟಿಸಿದ ಸಚಿವರು ನೇರವಾಗಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ವಿಧ್ಯಾರ್ಥಿನಿಯರ ಅಹವಾಲು ಸ್ವೀಕರಿಸಿದರು.ನಗರದಿಂದ ದೂರವಿರುವ ಹಾಗೂ ನಿರ್ಜನ ಪ್ರದೇಶದಲ್ಲಿ ವಸತಿ ನಿಲಯ ಇರುವುದರಿಂದ ಇಲ್ಲಿ ವಾಸಿಸಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಸಚಿವರ ಗಮನಕ್ಕೆ ತಂದರು.ಬಸ್ಸಿನ ಸೌಕರ್ಯ, ವಸತಿ ನಿಲಯಕ್ಕೆ ಪೊಲೀಸ್ ಭದ್ರತೆ, ಸಿಸಿ ಕ್ಯಾಮರ್, ಗ್ರಂಥಾಲಯಕ್ಕೆ ಪುಸ್ತಕ, ಶುದ್ಧ ಕುಡಿಯುವ ನೀರು ಆದಷ್ಟು ಬೇಗ ಒದಗಿಸುವಂತೆ ಸ್ಥಳದಲ್ಲಿದ್ದ ಪರಿಶಿಷ್ಟ ವರ್ಗದ ನಿದೇರ್ಶಕರಾದ ಕಾಂತರಾಜ್‌ಗೆ ಸಚಿವರು ಆದೇಶ ನೀಡಿದರು.

ವಸತಿ ನಿಲಯದಿಂದ ಶಾಲಾ-ಕಾಲೇಜ್‌ಗೆ ೫ಕೀಮಿ ದೂರವಿರುವುದರಿಂದ ಬಸ್‌ನ ವ್ಯವಸ್ಥೆಮಾಡುವಂತೆ ವಿಧ್ಯಾರ್ಥಿ ನಿಯರು ಮನವಿ ಮಾಡಿದಾಗ, ನಾಳೆಯಿಂದ ವಿದ್ಯಾರ್ಥಿನಿಯರಿಗೆ ಸಿಟಿಬಸ್‌ನ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಎನ್‌ಈಕೆಆರ್‌ಟಿಸಿ ಡಿಸಿ ವೆಂಕಟೇಶಗೆ ಸಚಿವ ರಾಮುಲು ಸೂಚನೆ ನೀಡಿದರು. ರಾತ್ರಿ ಸಮಯದಲ್ಲಿ ಪೋಲಿಸ್ ಭದ್ರತೆ ವ್ಯವಸ್ಥೆ ಮಾಡುವಂತೆ ನಗರ ಠಾಣೆ ಪಿಎಸ್‌ಐ ಸೌಮ್ಯಗೆ ಸೂಚನೆ ನೀಡಿದರು. ಸಚಿವರು ಸಾಮಾನ್ಯರಂತೆ ವಸತಿ ನಿಲಯದ ವಿದ್ಯಾರ್ಥಿನಿಗಳು ಸೆಲ್ಫಿ ಫೋಟೊ ತೆಗೆಸಿಕೊಳ್ಳಲು ಬಂದಾಗ ತಾವೇ ವಿದ್ಯಾರ್ಥಿನಿಯರ ಮೊಬೈಲ್ ತೆಗೆದುಕೊಂಡು ಪೋಟೊ ತೆಗೆದು ವಿಧ್ಯಾರ್ಥಿಗಳ ಜೊತೆ ಸಂತೋಷ ಹಚ್ಚಿಕೊಂಡರು.
ವಿಧ್ಯಾರ್ಥಿನಿಯರು ಸರ್ಕಾರದ ಸೌಲಭ್ಯ ಪಡೆದುಕೊಂಡು ಉತ್ತಮವಾಗಿ ಅಭ್ಯಾಸ ಮಾಡಬೇಕು,ನಿಮಗೆ ಯಾವುದೇ ರೀತಿ ತೊಂದರೆಯಾಗದಂತೆ ವಸತಿ ನಿಲಯಕ್ಕೆ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವೀರೂಪಾಪುರ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬಸವರಾಜ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಶರಣಪ್ಪ ವಕೀಲ ಉಮಲೂಟಿ, ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಚಿದಾನಂದ, ತಾಲೂಕಾ ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಶಿವಮಾನಪ್ಪ, ಡಿಡಿಗಳಾದ ರಾಜಶೇಖರ, ರಾಜಕುಮಾರ ಸೇರಿದಂತೆ ಇತರೆ ಅಧಿಕಾರಿಗಳು, ಜೆಡಿಎಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend