ಸಿಂಧನೂರು : ತುರುವಿಹಾಳ ಪಟ್ಟಣದ 2ನೇ ವಾರ್ಡಿನಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಲು ಮನವಿ…!!!

ಸಿಂಧನೂರು : ತುರುವಿಹಾಳ ಪಟ್ಟಣದ 2ನೇ ವಾರ್ಡಿನಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಲು ಮನವಿ.

ಶಂಕರಗೌಡ ಸ್ಮಾರಕ ಯುವಕ ಮಂಡಳಿ ವತಿಯಿಂದ ತುರುವಿಹಾಳ ಪಟ್ಟಣದ 2ನೇ ವಾರ್ಡಿನಲ್ಲಿ ಬರುವ ಸರ್ವೇ ನಂಬರ್ 548/* ಸರ್ಕಾರಿ ಭೂಮಿಯಲ್ಲಿ 30ವರ್ಷಗಳಿಂದ ವಾಸಮಾಡುತ್ತಿರುವ 47 ಮನೆಗಳ ಹಕ್ಕು ಪತ್ರ ಸರ್ಕಾರದ ನಿಯಮದ ಪ್ರಕಾರ ಎಲ್ಲಾ ಕಾರ್ಯಚಟುವಟಿಕೆಗಳು ಮುಗಿದು ಒಂದೂವರೆ ವರ್ಷಗಳು ಗತಿಸಿದರೂ ಸಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗಿರುವುದಿಲ್ಲ. ಒಂದು ವಾರದೊಳಗೆ ಹಕ್ಕುಪತ್ರಗಳನ್ನು ವಿತರಿಸಬೇಕು ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಹಸೀಲ್ದಾರ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಲ್ಲಪ್ಪ ಬಂಗಿ, ಉಪಾಧ್ಯಕ್ಷರಾದ ವೀರೇಶ್ ನವಲಹಳ್ಳಿ ,ಪ್ರಧಾನ ಕಾರ್ಯದರ್ಶಿ ಅಮರೇಶ ಗುಡುಗು, ಮಲ್ಲಪ್ಪ ವೀರೇಶ್ ಕುಂಬಾರ, ಖಾಸಿಂಸಾಬ್, ಗಂಗಮ್ಮ ಕಲ್ಮಂಗಿ,ಜಯಮ್ಮ , ನಿಂಗಪ್ಪ , ಹನುಮಂತ, ಯಂಕಪ್ಪ ,ಮರಿಯಪ್ಪ ,ಶಿವಣ್ಣ, ಬಸವರಾಜ್, ಇನ್ನೂ ಅನೇಕ ಫಲಾನುಭವಿಗಳು ಭಾಗವಹಿಸಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend