ಸಿಂಧನೂರ: ಸಾಕ್ಷರತಾ ಪ್ರೇರಕ ಮತ್ತು ಸಂಯೋಜಕರನ್ನು ಪಡ್ನಾ ಲಿಕ್ನ ಅಭಿಯಾನ ಯೋಜನೆಯಲ್ಲಿ ಮುಂದುವರೆಸಲು ಸಿಐಟಿಯು ಒತ್ತಾಯ.
1991-92ರ ಸಾಲಿನಿಂದ ಪ್ರಾರಂಭವಾದ ಸಾಕ್ಷರತಾ ಆಂದೋಲನ ಕಾರ್ಯಕ್ರಮದ ವಿವಿಧ ಹಂತಗಳಾದ ಸಂಪೂರ್ಣ ಸಾಕ್ಷರತಾ ಆಂದೋಲನ,ನಿರಂತರ ಶಿಕ್ಷಣ, ಸಾಕ್ಷರ ಭಾರತ,ಹೀಗೆ ಇಡಿ ರಾಜ್ಯದ ಮತ್ತು ನಮ್ಮ ರಾಯಚೂರು ಜಿಲ್ಲೆಯ ಅನಕ್ಷರಸ್ಥರನ್ನು ಗುರುತಿಸಿ ಸಾಕ್ಷರರನ್ನಾಗಿ ಮಾಡುವಲ್ಲಿ ನಮ್ಮ ಪ್ರೇರಕ ಸಂಯೋಜಕ ಪಾತ್ರ ಬಹಳ ಮುಖ್ಯವಾಗಿದೆ .2011ರ ಸರ್ವೇ ಪ್ರಕಾರ ಜಿಲ್ಲೆಯ ಸಾಕ್ಷರತಾ ಪ್ರಮಾಣ 7.15 ಇದ್ದು ಇದರಲ್ಲಿ ಶೇ74% ರಷ್ಟು ಸಾಕ್ಷರ ಪ್ರಮಾಣ ಹೆಚ್ಚಳವಾಗಲಿಕ್ಕೆ ಪ್ರೇರಕ ಸಂಯೋಜಕರ ಕಾರಣರಾಗಿದ್ದಾರೆ.
ಸುಮಾರು 20 ವರ್ಷಗಳಿಂದ ಈ ಕಾರ್ಯಕ್ರಮಗಳಲ್ಲಿ ಕೆಲಸ ನಿರ್ವಹಿಸುತ್ತಾ ಸರ್ಕಾರ ನೀಡುವ ಅಲ್ಪ ಗೌರವಧನ ಆಧಾರದ ಮೇಲೆ ಕುಟುಂಬದ ಜೀವನ ನಿರ್ವಹಿಸಲಾಗಿದೆ. ನಮ್ಮ ಈ ಸೇವೆಯನ್ನು ಪರಿಗಣಿಸಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ‘ಡಿ’ ಗ್ರೂಪ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು 2020 ಏಪ್ರಿಲ್ ನಿಂದ ಪ್ರಾರಂಭವಾದ ‘ಪಡ್ನಾ ಲಿಕ್ನಾ’ಅಭಿಯಾನ ಯೋಜನೆಯಡಿಯಲ್ಲಿ ನಮ್ಮನ್ನು ಮುಂದುವರಿಸಬೇಕು ಎಂದು ಮಾನ್ಯ ತಶಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸುಂದರ ಕಪ್ಪಗಲ್, ಪ್ರೇಮ ಲಲಿತಾ ತಾಲೂಕು ಸಂಯೋಜಕರು, ಕೆ.ಜಿ ವೀರೇಶ್ ಜಿಲ್ಲಾ ಗೌರವಧ್ಯಕ್ಷರು, ನಾಗರಾಜ ಪೂಜಾರಿ ಆರ್. ವೈ. ಎಸ್. ರಾಜ್ಯ ಸಂಚಾಲಕರು, ದಾವಲ್ ಸಾಬ್, ಬುಡ್ಡಪ್ಪ,ದೊಡ್ಡ ಹನುಮಂತ,ಸಮಿರ್, ನೀಲಮ್ಮ, ಲಕ್ಷ್ಮಿ, ರತ್ನಮ್ಮ ,ಶಾಂತಮ್ಮ ,ಗಂಗಮ್ಮ ,ಹನುಮಂತಪ್ಪ ಬಸವರಾಜ್ ಕಲ್ಯಾಣಿ ,ಮಲ್ಲನಗೌಡ, ಹನುಮಂತ ಇನ್ನು ಮುಂತಾದವರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
