ಸಿಂಧನೂರು : ಬಿಜೆಪಿ ಮತ್ತು ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ…!!!

ಸಿಂಧನೂರು : ಬಿಜೆಪಿ ಮತ್ತು ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ.

ಇಂದು ಭಾರತೀಯ ಜನತಾ ಪಾರ್ಟಿ ಸಿಂಧನೂರು ಗ್ರಾಮೀಣ ಮಂಡಲ ಮತ್ತು ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಸಾಲಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಶಿಬಿರವನ್ನು ಬಳ್ಳಾರಿ ವಿಭಾಗ ಸಹ-ಪ್ರಭಾರಿ ಗಳಾದ ಶ್ರೀ ಚಂದ್ರಶೇಖರ್ ಪಾಟೀಲ್ ಹಲಗೇರಿ ಉದ್ಘಾಟಿಸಿ,ನರೆಂದ್ರ ಮೋದಿಜಿ ಅವರ ಸಾಧನೆ ಕುರಿತು ಮಾತನಾಡಿದರು, ಸಂಸದರಾದ ಕೆ.ವಿರುಪಾಕ್ಷಪ್ಪ,ಮಸ್ಕಿ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್, ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು , ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ 13 ವರ್ಷಪ್ರಧಾನಮಂತ್ರಿಯಾಗಿ ಏಳು ವರ್ಷ ಒಟ್ಟು ಇಪ್ಪತ್ತು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವ ಅಂಗವಾಗಿ ಇಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಇವತ್ತು ಎರಡು ಲಕ್ಷ ರೂಪಾಯಿಗೆ ಸಿಗಬೇಕಾದ ಚಿಕಿತ್ಸೆಯನ್ನು ಬಿಪಿಎಲ್ ಕಾರ್ಡುದಾರರಿಗೆ 45000 ರೂಪಾಯಿಗೆ ಸಿಗುತ್ತಿದೆ.138 ಕೋಟಿ ಇರುವ ಭಾರತ ದೇಶದಲ್ಲಿ ಉಚಿತವಾಗಿ ಸರಿಸುಮಾರು ಎಪ್ಪತ್ತು ಕೋಟಿ ಜನರಿಗೆ ಚಿಕಿತ್ಸೆ ದೊರಕಿದೆ. ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೀಡುವಾಗ ನರೇಂದ್ರಮೋದಿಯವರು ಮಾಡಿದ್ದಾರೆ ಎಂದು ಕೊಲ್ಲಾ ಶೇಷಗಿರಿರಾವ್ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆದಿಮನಿ ವೀರಲಕ್ಷ್ಮಿ, ಅಮರೇಗೌಡ ವಿರುಪಾಪುರ, ಎನ್.ಶಿವನಗೌಡ ಗೊರೆಬಾಳ, ಮಧ್ವರಾಜ್ ಆಚಾರ್ಯ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಎಂ.ದೊಡ್ಡ ಬಸವರಾಜ್ ನಗರ ಮಂಡಲ ಅಧ್ಯಕ್ಷರಾದ ಪ್ರೇಮಾ ಸಿದ್ಧಾಂತಿಮಠ, ಜಿಲ್ಲಾ ಕಾರ್ಯದರ್ಶಿಗಳಾದ ಶೈಲಜಾ ಷಡಕ್ಷರಪ್ಪ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ವೆಂಕನಗೌಡ ಸಾಸಲಮರಿ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಪಾಟೀಲ್ ಬಸಾಪುರ ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿಗಳು ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಮುಂತಾದವರು ಪಾಲ್ಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು …

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend