ಮೊಳಕಾಲ್ಮೂರು ಪಟ್ಟಣದ ಕೋಟೆ ಬಡಾವಣೆ ನಿವಾಸಿಗಳಿಗೆ ಕಸ ಸಂಗ್ರಹಣೆ ಬುಟ್ಟಿಗಳು ವಿತರಣೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ. ಲಕ್ಷ್ಮಣ ಅವರು ಇಂದು ಕೋಟೆ ಬಡಾವಣೆ ನಿವಾಸಿಗಳಿಗೆ ಕಸ ಸಂಗ್ರಹಣೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ಉಚಿತವಾಗಿ ವಿತರಿಸಿದರು. ಕಸ ಸಂಗ್ರಹಿಸಿಡಲು ಪ್ರತಿ ಮನೆಗೆ ಎರಡು ಪ್ಲಾಸ್ಟಿಕ್ ಬುಟ್ಟಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ. ಕಾಂತರಾಜು ಮಾತನಾಡಿ ಪಟ್ಟಣದ ಸಂಪೂರ್ಣ ನೈರ್ಮಲ್ಯಕ್ಕಾಗಿ 15ನೇ ಹಣಕಾಸು ಯೋಜನೆಯಡಿ 12 ಲಕ್ಷ ರೂ ವೆಚ್ಚದಲ್ಲಿ 6, 300 ಬುಟ್ಟಿಗಳನ್ನು ಖರೀದಿಸಲಾಗಿದೆ. 2ನೇ ಹಂತವಾಗಿ 8 ವಾರಗಳ ನಿವಾಸಿಗಳ ಪ್ರತಿ ಮನೆಗೆ 2 ಬುಟ್ಟಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶುಭಾ, ಸ್ಥಾಯಿಸಮಿತಿ ಅಧ್ಯಕ್ಷೆ ಸವಿತಾ, ಸದಸ್ಯರಾದ ಟಿ. ರವಿಕುಮಾರ, ತಿಪ್ಪೇಸ್ವಾಮಿ, ಮಂಜುನಾಥ, ಭಾಗ್ಯಮ್ಮ, ವಿಜಯಮ್ಮ, ಲಕ್ಷ್ಮೀದೇವಮ್ಮ, ರೂಪ, ಸಿಬ್ಬಂದಿ ಶ್ರೀನಿವಾಸ್, ಇತರರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend