ಸಿಂಧನೂರು:ಗಾಂಧಿಜಯಂತಿಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯ ದಿನದಂದು ಕಾನೂನು ಅರಿವು ನೆರವು ಕಾರ್ಯಕ್ರಮ.
ನಗರದ ರುದ್ರಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ನ್ಯಾಯವಾದಿಗಳ ಸಂಘ ಜಂಟಿಯಾಗಿ ಭಾರತ್ ಕಾ ಅಮೃತ ಮಹೋತ್ಸವ ಅಂಗವಾಗಿ ಗಾಂಧಿ ಜಯಂತಿ ದಿನದಂದು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶೆ ದೀಪಾ.ಜಿ. ಮನೇರಕರ್ ಉದ್ಘಾಟಿಸಿದರು.
ನಂತರ ಮಾತನಾಡಿದ ನ್ಯಾಯಾಧೀಶೆ ದೀಪಾ.ಜಿ. ಮನೇರಕರ್ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅತ್ತೆಯಿಂದ ಸೊಸೆಗೆ ಗಂಡನಿಂದ ಹೆಂಡತಿಗೆ ಮಹಿಳೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಕಾನೂನು ಎಷ್ಟೇ ಬರ್ ಇಷ್ಟವಾಗಿದ್ದರು ಮಹಿಳೆಯರ ಮೇಲಿನ ದೌರ್ಜನ್ಯಗಳು ತಡೆಗಟ್ಟಲು ಮಹಿಳೆಯರು ಕಾನೂನು ಅರಿವು ನೆರವು ಪಡೆದುಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಹೆಚ್ಚು ಮಹಿಳಾ ವಿದ್ಯಾರ್ಥಿಗಳು ಭಾಗವಹಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಮರೇಗೌಡ ವಕೀಲರು ಫೋಕ್ಸ್ ಕಾಯ್ದೆ, ಶ್ರೀಮತಿ ಹೇಮಲತಾ ಜೋಳದರಾಶಿ ವಕೀಲರು ಮಾನವ ಕಳ್ಳಸಾಗಣಿಕೆ ತಡೆಗಟ್ಟುವುದು ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕಾಯ್ದೆ, ಶ್ರೀಮತಿ ಡಾ. ಮಧುಮತಿ ದೇಶಪಾಂಡೆ ಬೇಟಿ ಬಚಾವೋ ಬೇಟಿ ಪಡಾವೋ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ಪದ್ಮನಾಭ ಶರಣಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೇಯಾಸ ದೊಡ್ಮನಿ ಪ್ರಧಾನ ಸಿವಿಲ್ ನ್ಯಾಯಾಧೀಶರು, ಕೋಟೆಪ್ಪ ಕಾಂಟ್ಳೆ ಒಂದನೇ ಅಪರ ಸಿವಿಲ ನ್ಯಾಯಾಧೀಶರು ಜೆ.ಎಂ.ಎಫ್.ಸಿ, ಆನಂದಪ್ಪ ಎಂ, ಎರಡನೇ ಆಪರ ಸಿವಿಲ್ ನ್ಯಾಯಾಧೀಶರು ಜೆ.ಎಂ. ಎಪ್.ಸಿ, ತಹಸೀಲ್ದಾರ್ ಮಂಜುನಾಥ್ ಭೋಗಾವತಿ, ಸಹಾಯಕ ಸರಕಾರಿ ಅಭಿಯಂತರರು ನಾಗರಾಜ್ ಬಿ, ಸಹರಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಸವರಾಜ್, ಆರ್.ಜಿ.ಎಂ. ಶಾಲೆಯ ಮುಖ್ಯ ಶಿಕ್ಷಕರು ಪಾಂಡುರಂಗ ದೇಸಾಯಿ, ಎಸಿಡಿಪಿ ಲಿಂಗನಗೌಡ, ವೀರಭದ್ರಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವನಗೌಡ ಶಿಕ್ಷಕರು ನಿರೂಪಣೆ ಮಾಡಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
