ಸಿಂಧನೂರು :ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ವಿಭಿನ್ನ ರೀತಿಯಲ್ಲಿ ಆಚರಣೆ.
ಇಂದು ಬಿಜೆಪಿ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜಯಂತಿಯನ್ನು ಆಚರಿಸಲಾಯಿತು. ನಂತರ ನಗರದ ಗಾಂಧಿ ವೃತ್ತದಲ್ಲಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸೇವೆ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ಸ್ವಾಸ್ಥ ರೈತ ಉತ್ಪಾದಕರ ಕಂಪನಿಯಲ್ಲಿ ಸಾವಯವ ಪದ್ಧತಿಯಲ್ಲಿ ಗಾಣದ ಎಣ್ಣೆ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ, ಸಾವಯವ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಿ ಅದರ ಮುಖ್ಯಸ್ಥರಿಗೆ ಸನ್ಮಾನಿಸಲಾಯಿತು,
ಮುಳ್ಳೂರು ಗ್ರಾಮದ ಮಡಿಕೆ ತಯಾರಿಕೆಯ ಕುಂಬಾರರ ಮಡಿಕೆಗಳನ್ನು ಖರೀದಿಸಿ, ಚಮ್ಮಾರ ಮತ್ತು ಕಮ್ಮಾರ, ಗುಡಿ ಕೈಗಾರಿಕೆ, ಬುಟ್ಟಿತಯಾರಿಕೆ ಮಾಡುವ ಮ್ಯಾದಾರರಿಂದ ಬುಟ್ಟಿ ಕರಿದಿಸಿ, ಸ್ವದೇಶಿ ಉತ್ಪನ್ನ ಮಾರಾಟ ಮಳಿಗೆ ಖಾದಿ ಬಂಡಾರಕ್ಕೆ ಭೇಟಿ ನೀಡಿ ಖಾದಿ ಬಟ್ಟೆ ಖರೀದಿಸಿ ಎಲ್ಲಾ ಮಾಲೀಕರಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್,ಎನ್.ಶಿವನಗೌಡ ಗೊರೆಬಾಳ್,ಮಧ್ವರಾಜ್ ಆಚಾರ್ಯ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ, ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿಮಠ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಬಸಾಪುರ, ಜಿಲ್ಲಾ ಕಾರ್ಯದರ್ಶಿ ಶೈಲಜಾ ಷಡಕ್ಷರಪ್ಪ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವೆಂಕನಗೌಡ ಸಾಸಲಮರಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಮಮತಾ ಹಿರೇಮಠ, ಶಿವ ಬಸನಗೌಡ ಗೋರೆಬಾಳ, ಲಿಂಗರಾಜ್ ಹಲಗಿ, ಟಿ. ಸುಬ್ಬರಾವ್, ಈಶ್ವರಯ್ಯ ಸ್ವಾಮಿ,ಬಸವರಾಜ ಹಳೆಮನೆ, ತಿಮ್ಮರೆಡ್ಡಿ ಹುಡಾ, ಹನುಮಂತರೆಡ್ಡಿ ಹುಡಾ, ಮೈಬೂಬ್ ಸಾಬ್ ಬೂತಲದಿನ್ನಿ,ಟಿ.ವಿಶ್ವೇಶ್ವರ ರಾವ್. ಎಂ ರಾಮಕೃಷ್ಣ , ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಟಗಲ್, ನಿರುಪಾದಿ ಸುಕಾಲಪೇಟೆ, ಸಿದ್ದು ಹೂಗಾರ್, ರವಿಕುಮಾರ್, ಕೃಷ್ಣಪ್ಪ ರಾಥೋಡ್, ಸಿರಾಜ್ ಪಾಷಾ,ಶರಣು ಗೊರೆಬಾಳ್, ಶಾರದಮ್ಮ ಅಡಿವಪ್ಪ, ನೀಲಮ್ಮ ಅಲಬನೂರ, ಜಯಶ್ರೀ ರೆಡ್ಡಿ, ರಾಮಕೃಷ್ಣ ಉಪ್ಪಾರ್ ಅಬ್ದುಲ್ ಸಾಬ್ ನಾಗರಾಜ್ ಗುಡಿ ಮಲ್ಲಿಕಾರ್ಜುನ,ವಿನಯಕುಮಾರ ಶ್ರೀಮತಿ ರಾದ,ಶ್ರೀ ಸುಧಾ ಪಾಟೀಲ್,ಶ್ರೀಮತಿ ಲೀಲಾ ಮುಂತಾದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
