ಹಳೇನಿಂಗಾಪುರ ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ “ಮಹಾತ್ಮ ಗಾಂಧಿ ಜಯಂತಿ” ಪ್ರಯುಕ್ತ “ಉತ್ತಮ ಶಿಕ್ಷಕ ಅಭಿನಂದನ…!!!

ಕೊಪ್ಪಳ ಜಿಲ್ಲಾ, ಕೊಪ್ಪಳ ತಾಲೂಕಿನ 8ನೇ ವಾರ್ಡ್ ಹಳೇನಿಂಗಾಪುರ ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ “ಮಹಾತ್ಮ ಗಾಂಧಿ ಜಯಂತಿ” ಪ್ರಯುಕ್ತ  ನಿಸ್ವಾರ್ಥ ಸೇವೆಗೈಯುತ್ತಿರುವ ಇಲ್ಲಿನ ಮುಖ್ಯ ಉಪಾಧ್ಯಾಯರಾದ  ಶ್ರೀ ಸುರೇಶ್ ವಿರುಪಣ್ಣ ಬೇವಿನ ಹಳ್ಳಿ ಇವರಿಗೆ “ಉತ್ತಮ ಶಿಕ್ಷಕ ಅಭಿನಂದನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇವರ ಈ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀ ವಿರುಪಾಕ್ಷಪ್ಪ ಎಂ ಎಂ ಹಳ್ಳಿ, ಶ್ರೀಮತಿ ಅಕ್ಷತಾ ಸಂತೋಷ್ ಪಾಟೀಲ್ ಹಾಗೂ ಹುಲಿಗಿ ಗ್ರಾ. ಪ.ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಪರಮೇಶ್ವರಯ್ಯ, ನಿವೃತ ಶಿಕ್ಷಣ ಸಂಯೋಜಕರಾದ ಶ್ರೀ ಹನುಮಂತಪ್ಪ ನಾಯಕ್ ಹಳೇನಿಂಗಾಪುರ, ಶಿಕ್ಷಯೇತನ  ಮುಖ್ಯ ಉಪದ್ಯಾಯರಾದ ಶ್ರೀ ಮಂಜುನಾಥ್ ನಾಯಕ್,ಅಂಗನವಾಡಿ ಶಿಕ್ಷಕಿ ಶ್ರೀಮತಿ ಲಲಿತಾ ಎಂ ಎಂ ಹಳ್ಳಿ,ಇಲ್ಲಿನ ಗುರು ಹಿರಿಯರು,ಶಾಲಾ ಅಧ್ಯಕ್ಷರು, ಶಿಕ್ಷಕಿ ಶ್ರೀಮತಿ ಕುಸುಮ ಹಾಗೂ ಮುಂತಾದ ಪಂಚಾಯತಿ ಸಿಬ್ಬಂದಿ ವರ್ಗದವರು ಎಲ್ಲರೂ ಇವರಿಗೆ ಫಲ ಪುಷ್ಪಗಳನ್ನು ನೀಡುವುದರ ಮುಖಾಂತರ ಇವರನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಹಳೇ ನಿಂಗಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಉಪದ್ಯಾರಾದ ಶ್ರೀ ಸುರೇಶ್ ವಿರುಪಣ್ಣ ಬೇವಿನ ಹಳ್ಳಿ ಇವರು ಕಳೆದ ಸೆ 5 ರಂದು “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಪಾತ್ರರಾಗಿದ್ದು,2021 ಸಾಲಿನಲ್ಲಿ ಸಾರಕಾರಿ ಶಾಲೆಗೆ ದಾಖಲಾತಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಗಳಿಗೆ ತಮ್ಮ ಸ್ವಂತ ಹಣದಿಂದ ಪ್ರತಿಯೊಂದು ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿಗಳ ಬ್ಯಾಂಕಿನ ಖಾತೆಗೆ FD ಮಾಡಿರುತ್ತಾರೆ. ಹಾಗೇಯೆ ಈ ಶಾಲೆಗೆ 1 ಲಕ್ಷ 35 ಸಾವಿರ ರೂಪಾಯಿಗಳನ್ನು ಅನುಧಾನ ಕೊಡಿಸುವುದರ ಮುಖಾಂತರ ಈ ಶಾಲೆಯ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಶಾಲೆಯ ಆವರಣದಲ್ಲಿ ತಮ್ಮ ಸ್ವಂತ ಜೇಬಿನ ಹಣದಿಂದ ಗಿಡಮರಗಳ ಸಸಿಗಳನ್ನು ನೆಡುವುದು,ಹಾಗೆಯೇ ಅವುಗಳ ಸಂರಕ್ಷಣೆ ಮಾಡುವುದರ ಮುಖಾಂತರ ತಮ್ಮ ನಿಸವರ್ತ ಸೇವೆಗೈದಿದ್ದರೆ. ಮತ್ತು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಉತ್ತಮ ವಿದ್ಯಾಭ್ಯಾಸದ ದೃಷ್ಟಿಯಿಂದ  ವಿದ್ಯಾರ್ಥಿಗಳಿಗೆ ಪುಸ್ತಕಕಗಳನ್ನು ನೀಡುವುದರ ಮೂಲಕ ಈ ಕಾರ್ಯಕ್ರಮವನ್ನು ಮುಕ್ತಗೊಳಿಸಿದರು. ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಇಂತಹ ಗುರು ಇದ್ದರೆ ನಮ್ಮ  ದೇಶದ ಸರಕಾರಿ ಶಾಲೆಗಳು ಉತ್ತೇಜನ ಪಡೆಯುವುದರಲ್ಲಿ ಎರೆಡು ಮಾತಿಲ್ಲ. ಸರಕಾರಿ ಶಾಲೆಗಳಲ್ಲಿ ಇಂತಹ ನಿಸ್ವಾರ್ಥ ಸೇವೆಗೈಯುತ್ತಿರುವ ಪ್ರತಿಯೊಬ್ಬ ಶಿಕ್ಷಕ, ಶಿಕ್ಷಕಿಯರಿಗೆ ನಮ್ಮ ಎಚ್ಚರಿಕೆ ಪತ್ರಿಕಾ ಬಳಗದವರಿಂದ ಒಂದು ದೊಡ್ಡ ಸಲಾಂ🙏🏻……

 

ವರದಿ. ಉಮೇಶ್ ಕಂಪ್ಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend