ಸಿಂಧನೂರು : ಕಾರುಣ್ಯಾ ನೆಲೆ ವ್ರದ್ದಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ.
ನಗರ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಆಶ್ರಮದಲ್ಲಿ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ “ಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕ ಸಾರ್ವಜನಿಕ ಆಸ್ಪತ್ರೆಯ ಸ್ಥಳೀಯ ತಾಲೂಕ ಆರೋಗ್ಯಾಧಿಕಾರಿಗಳಾದ ಶ್ರೀ ಡಾ. ಅಯ್ಯನಗೌಡ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ನಾವು ವಿದ್ಯಾವಂತರಾಗಿರುವುದು ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು, ಹಿರಿಯರ ಸೇವೆ ಮಾಡಿದಾಗ ಮಾತ್ರ ನಮ್ಮ ಕರ್ತವ್ಯಕ್ಕೆ ಒಂದು ಅರ್ಥ ಸಿಗುತ್ತದೆ. ಹಿರಿಯರು ನಮಗೋಸ್ಕರ ತಮ್ಮ ಜೀವನವನ್ನೇ ತ್ಯಾಗ ಮಾಡಿ ನಮ್ಮನ್ನು ದೊಡ್ಡವರನ್ನಾಗಿ ಮಾಡಿರುತ್ತಾರೆ ಅವರಿಗೆ ನಾವು ಉಸಿರಿರುವರೆಗೆ ಅವರ ಸೇವೆ ಮಾಡಿದಾಗ ಮಾತ್ರ ಮಾನವನಾಗಿ ಹುಟ್ಟಿದ್ದು ಸಾರ್ಥಕ ಎನ್ನುವ ಭಾವುಕ ನುಡಿಗಳನ್ನಾಡಿದರು.
ಈ ಸಮಯದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಇಂದು ರಾಯಚೂರಿನಲ್ಲಿ ಕೂಡ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದಿರುವ ಹಿರಿಯ ನಾಗರಿಕ ದಿನಾಚರಣೆ ಯಲ್ಲಿ ಕೂಡ ನಾವು ಭಾಗವಹಿಸಿದ್ದೆವು. ಆದರೆ ನಮ್ಮ ಸೇವೆಯು ಜಿಲ್ಲಾಡಳಿತಕ್ಕೆ ತಿಳಿಯಲಿಲ್ಲ.ಅಲ್ಲಿನ ನಮಗೆ ಸಂಬಂಧಪಟ್ಟಂತಹ ಅಧಿಕಾರಿಗಳು ನಮ್ಮ ಸೇವೆಯನ್ನು ಕಡೆಗಣಿಸಿದರು, ನಾವೆಲ್ಲ ಮಾಡುತ್ತಿರುವುದು ಸಿಂಧನೂರಿನ ಸಿಹಿ ಮನಸುಗಳ ಕೀರ್ತಿಯನ್ನು ತರುವುದಕ್ಕಾಗಿ. ಒಬ್ಬ ಜಂಗಮನಾಗಿ ಜೋಳಿಗೆ ಹಾಕಿ ಅನಾಥ ಜೀವಿಗಳ ಜೊತೆ ನಾನು ಕೂಡ ಪ್ರಸಾದವನ್ನು ಸ್ವೀಕರಿಸಿ ಜೀವನ ನಡೆಸುತ್ತಿದ್ದೇನೆ ಅಷ್ಟೇ. ಇದರಲ್ಲಿ ಯಾವುದೇ ಸಾರ್ಥಕತೆ ಇಲ್ಲ, ಇದು ಈಗಾಗಲೇ ನಮ್ಮ ಕರುನಾಡಿನ ಜನತೆಗೆ ತಿಳಿದಿದೆ. ಮುಂದಿನ ದಿನಮಾನಗಳಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಯಾವುದೇ ಒಬ್ಬ ಅನಾಥ ಹಿರಿಯರು ಕಷ್ಟಕ್ಕೋಳಗಾಗದದಂತೆ ನೋಡಿಕೊಳ್ಳುವುದು ಕಾರುಣ್ಯ ಕುಟುಂಬದ ಜವಾಬ್ದಾರಿ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರೇಶ ಗಡ್ಡಿ, ಕಾರುಣ್ಯ ಆಶ್ರಮದ ಸೇವಾ ಕರ್ತೃಗಳಾದ ಮಹೇಶ ವಿಶ್ವಕರ್ಮ, ಪಂಪಯ್ಯ ಜವಳಗೇರಾ,ಸುರೇಶ ಸಿಂಧನೂರು, ಗೀತಾ ಕುಲಕರ್ಣಿ, ಪಂಪಯ್ಯ ಸ್ವಾಮಿ ಹಚ್ಚೋಳ್ಳಿ ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
