ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಯವರ ಜಯಂತಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವ ಕ್ಷೇತ್ರದ ಜನಪ್ರಿಯ ನಾಯಕಿ ಎಂ ಪಿ ವೀಣಾ ಮಹಾಂತೇಶ್!!
ಅಕ್ಟೋಬರ್ ೨ ಎಂದರೆ ಗಾಂಧೀಜಿ ಯವರು ಹುಟ್ಟಿದ ದಿನ, ಗಾಂಧೀಜಿ ಎಂದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ!!
ಆ ಮಹಾತ್ಮನ ಜಯಂತಿಯ ಪ್ರಯುಕ್ತ ಗಾಂಧೀಜಿಯವರ ಬದುಕನ್ನು ಮೈಗೂಡಿಸಿಕೊಂಡು ಹಳ್ಳಿಗಳ ಅಭಿವೃದ್ಧಿಗೆ ಪಣತೊಟ್ಟು ನಿಂತಿರುವ ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ ಪಿ ವೀಣಾ ಮಹಾಂತೇಶ್ ಅವರು ನಮ್ಮ ನೆಚ್ಚಿನ ನಾಯಕ, ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಎಂಪಿರವೀಂದ್ರ ಅವರ ಅವಧಿಯಲ್ಲಿ ಗಾಂಧಿಯವರು ತಂಗಿದ್ದ ಕೊಠಡಿಯನ್ನು ನವೀಕರಿಸಿ, ಅವರ ಬದುಕನ್ನು ಯಥಾವತ್ತಾಗಿ ಚಿತ್ರಿಸಿರುವ ಗಾಂಧಿ ಮೆಮೋರಿಯಲ್ ಹಾಲ್ ಗೆ ಭೇಟಿ ನೀಡಿ ಮಾಲಾರ್ಪಣೆಯೊಂದಿಗೆ ಗೌರವ ಸಲ್ಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಸ್ಮರಣೆಯ ಪ್ರಯುಕ್ತ ಕ್ಷೇತ್ರ ವ್ಯಾಪ್ತಿಯ ಚಿಗಟೇರಿ ಹೋಬಳಿಯ ಕಡಬಗೆರೆ ಗ್ರಾಮದಲ್ಲಿ ತುಳಸಿ ಮತ್ತು ಕಸ್ತೂರಬಾ ಎಂಬ ಎರಡು ಮಹಿಳಾ ಸಂಘಗಳನ್ನು ಲೋಕಾರ್ಪಣೆಗೊಳಿಸಿ ಶುಭಹಾರೈಸುವರು.
ಈ ಕಾರ್ಯಕ್ರಮಗಳಿಗೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಎಂಪಿಆರ್ ಅಭಿಮಾನಿ ಬಳಗ, ಎಂಪಿವಿ ಅಭಿಮಾನಿ ಬಳಗ ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
