;

ಸಿಂಧನೂರು :ಆಸ್ಸಾಂ ಹೋರಾಟಗಾರರ ಮೇಲೆ ಪೋಲಿಸರ ಗುಂಡಿನ ದಾಳಿ ಖಂಡಿಸಿ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಪ್ರತಿಭಟನೆ…!!!

ಸಿಂಧನೂರು : ಅಸ್ಸಾಮಿನ ಅಮಾಯಕ ನಾಗರಿಕರ ಮೇಲೆ ಪೊಲೀಸ್ ದಾಳಿ ಖಂಡಿಸಿ ಇಂದು ಸಿಂಧನೂರಿನಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು, ಆಸಾಂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಮಾಡುವ ಮೂಲಕ ಮಾನ್ಯ ತಹಸಿಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಅಸ್ಸಾಮಿನ ರಾಜ್ಯ ಸರ್ಕಾರವು ಬಲವಂತವಾಗಿ ನಾಗರಿಕರನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಮುಂದಾದ ಪರಿಣಾಮ ಅಮಾಯಕ ಇಬ್ಬರು ನಾಗರಿಕರು ಹತ್ತೆಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ಕೃತ್ಯವಾಗಿದ್ದು, ಜನಾಂಗೀಯ ಮತ್ತು ಕೋಮು ವಿಭಜನೆಯ ಲಾಭವನ್ನು ಪಡೆಯಲು ಯತ್ನಿಸುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ರಾಜೀನಾಮೆ ನೀಡಬೇಕು, ತಪ್ಪಿತಸ್ಥರ ವಿರುದ್ಧ ಶೀಘ್ರ ನ್ಯಾಯಾಂಗ ತನಿಖೆ ಆಗಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಅಧ್ಯಕ್ಷ ವಸೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಾಗರಾಜ್ ಪೂಜಾರ್ ಬಿಜೆಪಿಯ ನರೇಂದ್ರ ಮೋದಿ ಸರ್ಕಾರದಲ್ಲಿ ದಲಿತರಿಗೆ, ಮುಸ್ಲಿಮರಿಗೆ,ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದರು.

ಯಾವುದೇ ಪುನರ್ವಸತಿ ಯೋಜನೆಯನ್ನು ಕಲ್ಪಿಸದೆ ಸುಮಾರು 900ಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸಿ ಕನಿಷ್ಠ 20 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ದರಾಂಗ್ ಜಿಲ್ಲೆಯ ಗೊರುಖುಟಿ, ಸಿಪಾಜಪುರ ಪ್ರದೇಶಗಳಲ್ಲಿ ಒಕ್ಕಲೆಬ್ಬಿಸಿ ಸುಮಾರು 77000 ಬಿಘಾ ಭೂಮಿಯನ್ನು ಕೃಷಿಗಾಗಿ ಬಳಸಿಕೊಳ್ಳುವುದೆಂದು ಸರ್ಕಾರ ಹೇಳುತ್ತಿದೆ. ಸ್ಥಳೀಯ ಜನರನ್ನು ಒಕ್ಕಲೆಬ್ಬಿಸಿ ಯಾವ ಅಭಿವೃದ್ಧಿಯನ್ನು ಆಸ್ಸಾಮ ಸರ್ಕಾರ ಮಾಡಲು ಹೊರಟಿದೆ ? ಈ ತೆರುವು ಕಾರ್ಯಚರಣೆಯನ್ನು ಕೂಡಲೇ ನಿಲ್ಲಿಸಬೇಕು ಗುಂಡೇಟಿಗೆ ಬಲಿಯಾದ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ಕೊಡಬೇಕು ಹಾಗೂ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕು ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಒತ್ತಾಯಿಸಿದರು .

ಈ ಸಂದರ್ಭದಲ್ಲಿ ಶೇಕ್ಷಾಖಾದ್ರಿ ,ಎಸ್ ದೇವೇಂದ್ರಗೌಡ, ಮಹಮದ್ ಮಿಕದಾದ, ಅಬ್ದುಲ್ ಸಮದ್ ಚೌದ್ರಿ, ಮೋದಿನ್ ಪಾಷಾ, ಸೈಯದ್ ಹಮೀದ್ ಮುಲ್ಲಾ, ಹುಸೇನ್ ಸಾಬ್, ಇನ್ನೂ ಅನೇಕ ಪ್ರಗತಿಪರ ಮುಖಂಡರು ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;