ಕೊರೊನಾದಿಂದ ಮೃತಪಟ್ಟ BPL ಕುಟುಂಬಕ್ಕೆ 1.5 ಲಕ್ಷ ರೂ. ಉಳಿದವರಿಗೆ 50 ಸಾವಿರ ರೂ. ಪರಿಹಾರ.
ರಾಜ್ಯ ಸರ್ಕಾರದಿಂದ ಹೊಸ ಆದೇಶ
ಕೊರೊನಾದಿಂದ ಮೃತಪಟ್ಟ BPL ಕುಟುಂಬಕ್ಕೆ 1.5 ಲಕ್ಷ ರೂ. ಉಳಿದವರಿಗೆ 50 ಸಾವಿರ ರೂ. ಪರಿಹಾರ : ರಾಜ್ಯ ಸರ್ಕಾರದಿಂದ ಹೊಸ ಆದೇಶ
ಬೆಂಗಳೂರು : ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಟುಂಬಗಳಿಗೆ ರಾಜ್ಯ ಸರ್ಕಾರ ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಬದಲಿಗೆ 1.5 ಲಕ್ಷ ರೂ. ಹಾಗೂ ಬಿಪಿಎಲ್ ಯೇತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡಲು ಸರ್ಕಾರ ಆದೇಶ ಹೊಸದಾಗಿ ಹೊರಡಿಸಿದೆ.
ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂ. ಮತ್ತು ಎಸ್ ಡಿ ಆರ್ ಎಫ್ ನಿಂದ 50 ಸಾವಿರ ರೂ. ಸೇರಿ 1.50 ಲಕ್ಷ ರೂ. ನೀಡಲಾಗುತ್ತದೆ. ಬಿಪಿಎಲ್ ಕುಟುಂಬದ 1 ಕ್ಕಿಂತ ಹೆಚ್ಚು ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದರೆ ಆಗ ಮೊದಲ ವ್ಯಕ್ತಿಗೆ 1.50 ಲಕ್ಷ ರೂ. ಹಾಗೂ ಉಳಿದವರಿಗೆ 50 ಸಾವಿರ ರೂ. ಪರಿಹಾರ ದೊರೆಯಲಿದೆ.
ಬಿಪಿಎಲ್ ಯೇತರ ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಮೃತಪಟ್ಟಿದ್ದರೆ ಎಸ್ ಡಿಆರ್ ಎಫ್ ಅಡಿ ಮೃತ ಸಂಖ್ಯೆಗನುಗುಣವಾಗಿ ತಲಾ 50 ಸಾವಿರ ರೂ. ಪಾವತಿಸಲಾಗುತ್ತದೆ. ಎಲ್ಲಾ ತಾಲೂಕು ಕಚೇರಿ, ನಾಡ ಕಚೇರಿ ಮತ್ತು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
