ಮಾರಕ ಕೃಷಿ ಕಾಯ್ದೆ ವಿರೋಧಿಸಿ ಕಲ್ಬುರ್ಗಿಯಲ್ಲಿ ಬೆಳ್ಳಂಬೆಳಗ್ಗೆ ಪ್ರತಿಭಟನೆ:
ಕಲ್ಬುರ್ಗಿ: ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಸಂಪೂರ್ಣವಾಗಿ ಖಾಸಗೀಕರಣ ದತ್ತ ಮುಖ ಮಾಡಿರುವುದನ್ನು ವಿರೋಧಿಸಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಜೇವರ್ಗಿ ಹಾಗೂ ಯಡ್ರಾಮಿ ಆಳಂದ, ಭಾಗದ ರೈತರು ಹಾಗೂ ಕೃಷಿ ಕಾರ್ಮಿಕರು ಜಿಲ್ಲಾ ಅಧಿಕಾರಿಗಳ ಕಚೇರಿಗೆ ಬಂದು ಮನವಿ ಪತ್ರ ಸಲ್ಲಿಸಲಾಯಿತು ತಮಟೆ ಬಡಿಯುವ ಮೂಲಕ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.
ರೈತರಿಗೆ ಹಾಗೂ ದುಡಿಯುವ ವರ್ಗದವರಿಗೆ ಶಾಪ ವಾಗಿರುವ
ಕಾಯ್ದೆಗಳನ್ನು ಸರ್ಕಾರವು ಹಿಂದೆ ಪಡೆಯಲಿ ಮುಂದಿನ ದಿನಗಳಲ್ಲಿ ಇಡೀ ರಾಷ್ಟ್ರವನ್ನು ಆರ್ಥಿಕ ಅದಃಪತನಕ್ಕೆ ತಳ್ಳುತ್ತಿರುವ ಸರ್ಕಾರದ ಕಾನೂನುಗಳು ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಪ್ರತಿಭಟನೆಯಲ್ಲಿ ಭಾರತ ನೂರಾರು ಜನ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.ಈ ಹೋರಾಟದಲ್ಲಿ ಎಂ ಡಿ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಸಾಮೂಹಿಕ ಸಂಘಟನೆಗಳು ಭಾಗವಹಿಸಿವೆ. ಮಲ್ಲಿಕಾರ್ಜುನ ಗಂವಾರ ಜಿಲ್ಲಾಧ್ಯಕ್ಷರು ಕಲಬುರಗಿ ಹಾಗೂ ಪ್ರಶಾಂತ್ ಗೌಡ ಮಾಲಿ ಜೈನಪುರ್ ಹಾಗೂ ಸಂತೋಷ ಜೈನಪುರ್ ಹಾಗೂ ಗುರು ಜೈನಪುರ್ ಹಾಗೂ ಭೀಮರೆಡ್ಡಿ ಮಾರಡಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇನ್ನಿತರರು ಇದ್ದರು..

ವರದಿ. ಬಸವರಾಜ್, ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
