ಸಿಂಧನೂರು : ಸಿಂಧನೂರು ಜಿಲ್ಲಾ ಕೇಂದ್ರ ಮಾಡಲು ಪಕ್ಷಾತೀತ ಹೋರಾಟಕ್ಕೆ ಕರೆ.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ ನಾರಾಯಣ ಗೌಡ ಬಣ ಸಿಂಧನೂರು ವತಿಯಿಂದ ಸಿಂಧನೂರು ಜಿಲ್ಲಾ ಹೋರಾಟಕ್ಕೆ ಬೇಕಾದಂತಹ ಎಲ್ಲಾ ಪಕ್ಷಾತೀತ ರಾಜಕೀಯ ನಾಯಕರುಗಳ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಮತ್ತು ಸಿರುಗುಪ್ಪ, ಕನಕಗಿರಿ, ಕಾರಟಗಿ , ಮಸ್ಕಿ , ಮಾನ್ವಿ , ಸಿಂಧನೂರು ಎಲ್ಲಾ ಕ್ಷೇತ್ರಗಳ ಪಕ್ಷಾತೀತ ರಾಜಕೀಯ ಮುಖಂಡರುಗಳು ಹಾಗೂ ಜನಪ್ರತಿನಿಧಿಗಳ ಎಲ್ಲಾ ಸಂಘ ಸಂಸ್ಥೆಗಳನ್ನು ಮನವೊಲಿಸಿ ಸಿಂಧನೂರನ್ನು ಜಿಲ್ಲೆಯನ್ನಾಗಿ ಮಾಡಿದರೆ ಎಲ್ಲಾ ತಾಲ್ಲೂಕುಗಳಿಗೆ ಅನುಕೂಲವಾಗುವುದು ಎನ್ನುವ ಹೋರಾಟದ ಕೂಗಿನ ಪ್ರತಿಧ್ವನಿಯನ್ನು ಎತ್ತುವುದಕ್ಕಾಗಿ ಪತ್ರಿಕಾ ಗೋಷ್ಠಿ ನೆಡಸಲಾಯಿತು.
ಈ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಶ್ರೀ ದೇವೇಂದ್ರಗೌಡ ಜಿಲ್ಲಾ ಉಪಾಧ್ಯಕ್ಷರು ಮಾತನಾಡಿ ಇಂದಿನಿಂದಲೇ ಸುತ್ತಮುತ್ತಲಿನ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸೇವಾ ಸಂಘ ಸಂಸ್ಥೆಗಳನ್ನು ಒಟ್ಟಾಗಿಸಿಕೊಂಡು ಹೋರಾಟ ನೆಡೆಸಲಾಗುವುದು ಎಂದು ತಿಳಿಸಿದರು.
ನಂತರ ಗಂಗಣ್ಣ ಡಿಶ್ ತಾಲೂಕ ಅಧ್ಯಕ್ಷರು ಮಾತನಾಡಿ ಇಂದಿನಿಂದಲೇ ಹೋರಾಟದ ರೂಪು ರೇಷಗಳನ್ನು ರೂಪಿಸಲಾಗುವುದು ಮತ್ತು ಸಿಂಧನೂರಿನ ಶಾಸಕರಾದ ನಾಡ ಗೌಡರಿಗೆ ಬೆಂಗಳೂರು ವಿಧಾನಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಹೋರಾಟದ ಧ್ವನಿ ಎತ್ತುವಂತೆ ಒತ್ತಡ ತರಲಾಗುವುದು ಎಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಲಕ್ಷ್ಮಣ ಬೋವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ,ಶ್ರೀ ಕಾಳಪ್ಪ ಮೇಸ್ತ್ರಿ ತಾಲೂಕ ಗೌರವ ಅಧ್ಯಕ್ಷರು, ಶ್ರೀ ರಫೀ ಕುನ್ನಟಗಿ ರೈತ ಘಟಕದ ಅಧ್ಯಕ್ಷರು, ಬಸವರಾಜ್ ಟೇಲರ್ ತಾಲೂಕು ಘಟಕದ ಕಾರ್ಯದರ್ಶಿಗಳು, ರಾಮಕೃಷ್ಣ ಭಜಂತ್ರಿ ಅಧ್ಯಕ್ಷರು ಯುವ ಘಟಕ, ಸೈಯದ್ ಭಾಷಾ ಮಿಟ್ಟಿಮನಿ ಕರವೇ ಮುಖಂಡರು, ಶರಣಬಸವ ಮಲ್ಲಾಪುರ ಕರವೇ ಮುಖಂಡರು, ಪರಶುರಾಮ್ ಭೋವಿ ಕರವೇ ಮುಖಂಡರು, ಸುರೇಶ ಗೊಬ್ಬರಕಲ್ ನಗರ ಘಟಕ ಅಧ್ಯಕ್ಷರು, ಭೀಮಣ್ಣ ಸಹ ಕಾರ್ಯದರ್ಶಿಗಳು ಹಾಗೂ ಅಪಾರ ಕರವೇ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಿದ್ದರು…
ವರದಿ, ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
