;

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕ್ಷೇತ್ರದ ಜನನಾಯಕಿ,!!!

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ ಇಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕ್ಷೇತ್ರದ ಜನನಾಯಕಿ,!!!!!!!!!!!
ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ ಮಹಾಂತೇಶ್ ಹಾಗೂ ಕೆಪಿಸಿಸಿ ವೈದ್ಯ ಘಟಕದ ಉಪಾಧ್ಯಕ್ಷರಾದ #ಡಾ_ಮಹಾಂತೇಶ್_ಚರಂತಿಮಠ

ದಿನೇದಿನೇ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ಇನ್ನಿತರ ದಿನಬಳಕೆ ವಸ್ತುಗಳ ಮೇಲೆ ಬೆಲೆ ಏರಿಸಿ ಬಡವರ, ಮಧ್ಯಮ ವರ್ಗದ ರಕ್ತ ಹೀರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯನ್ನು ಖಂಡಿಸಿ ಇತ್ತೀಚೆಗೆ #ಎತ್ತಿನ_ಬಂಡಿ ಏರಿ ವಿಧಾನಸೌಧ ಮುತ್ತಿಗೆ ಹಾಕಿದ್ದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಕಾರ್ಯಕರ್ತರ ಪಡೆ ಇಂದು ಮತ್ತದೇ ಬೆಲೆ ಏರಿಕೆ ಖಂಡಿಸಿ #ಕುದುರೆ_ಗಾಡಿ(ಜಟಕಾಬಂಡಿ)ಯಲ್ಲಿ ಕೆಪಿಸಿಸಿ ಕಛೇರಿಯಿಂದ ವಿಧಾನಸೌಧದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಕ್ಷದ ಸಿದ್ದಾಂತಕ್ಕೆ ಬದ್ದವಾಗಿ, ಪಕ್ಷ ಸೂಚಿಸುವ ಪ್ರತಿಯೊಂದು ಜವಾಬ್ದಾರಿಯನ್ನು ಚಾಚುತಪ್ಪದೇ ನಿರ್ವಹಿಸುವ #ಹರಪನಹಳ್ಳಿ ಕ್ಷೇತ್ರದ ಜನಪರ ದ್ವನಿ, ಸದಾ ಹಗಲಿರುಳು ಜನರಿಗಾಗಿ ಮಿಡಿಯುವ ಹೃದಯವಂತೆ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ಅವರು ಪಾಲ್ಗೊಂಡು ಬೆಲೆ ಏರಿಕೆ ನೀತಿಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಎಂ.ಪಿ.ವೀಣಾ ಅವರ ಬೆನ್ನಿಗೆ ಬೆನ್ನೆಲುಬಾಗಿ ನಿಂತು ಕ್ಷೇತ್ರದಲ್ಲಿ ಸದಾ ಪಕ್ಷದ ಕಾರ್ಯಚಟುವಟಿಕೆಗಳನ್ನು ಕೈಗೊಂಡು ಹರಪನಹಳ್ಳಿ ಕ್ಷೇತ್ರದ ಜನತೆಗೆ ಒಂದಿಲ್ಲೊಂದು ಸಹಾಯ ಮಾಡುತ್ತಾ ಜನಪರ ಕಾಳಜಿ ಹೊಂದಿರುವ ತಮ್ಮ ಪತಿ, ಕೆಪಿಸಿಸಿ ವೈದ್ಯ ವಿಭಾಗದ ರಾಜ್ಯ ಉಪಾಧ್ಯಕ್ಷರಾದ #ಡಾ_ಮಹಾಂತೇಶ್_ಚರಂತಿಮಠ ಅವರು ಕೂಡ ಪಾಲ್ಗೊಂಡು ಬೆಲೆ ಏರಿಕೆ ನೀತಿಯನ್ನು ಬಲವಾಗಿ ಖಂಡಿಸಿದರು….

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;