ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ(SWFI) ದಿಂದ
ಸ್ಕೀಮ್ ವರ್ಕರ್ಸ್ ಗಳ ಅಖಿಲ ಭಾರತ ಮುಷ್ಕರದ ಅಂಗವಾಗಿ.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನೆಡಸಿ.ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರದಾನಿ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಕೆಳಕಂಡ ಬೇಡಿಕೆಗಳನ್ನು ಹಿಡೇರಿಸುವಂತೆ ಆಗ್ರಹಿಸಿ ಎ.ದೇವದಾಸ್ AIUTUC ಜಿಲ್ಲಾ ಕಾರ್ಯದರ್ಶಿ ಮಾತನಾಡಿದರು
1)ಆಶಾ-ಅಂಗನವಾಡಿ ,ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ,
2)ILC ಸಿಫಾರಸುಗಳನ್ನು ಅನುಷ್ಟಾನಗೊಳಿಸಿ .ಕನಿಷ್ಟ ರೂ. 21,000 ವೇತನ ಹಾಗೂ ರೂ.10,000 ಪಿಂಚಣಿ ಪಾವತಿಸಿ.
3)ಎಲ್ಲಾ ಸ್ಕೀಮ್ ವರ್ಕ್ಗಗಳಿಗೂ ಇ ಎಸ್ ಐ ಮತ್ತು ಪಿಎಫ್ ಒದಗಿಸಿ.
4)ಬಿಸಿಯೂಟ ಕಾರ್ಮಿಕರಿಗೆ ಬೇಸಿಗೆರಜೆಯೂ ಸೇರಿದಂತೆ ಶಾಲೆ ಮುಚ್ಚಿದ ಅವಧಿಯಲ್ಲೂ ಸಹ ಕನಿಷ್ಟ ವೇತನ ಪಾವತಿಸಬೇಕು.
5)ಸೇವಾವಧಿಯಲ್ಲಿ ಮೃತಪಟ್ಟ ಎಲ್ಲಾ ಫ್ರೆಂಟ್ ಲೈನ್ ನೌಕರರಿಗೆ 50 ಲಕ್ಷ ರೂಪಾಯಿಗಳ ವಿಮಾ ಸುರಕ್ಷೆ ಒದಗಿಸಬೇಕು.
6) ಹೆಚ್ಚು ವರಿಯಾಗಿ, ಕೋವಿಡ್- 19 ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಗುತ್ತಿಗೆ ನೌಕರರು ಮತ್ತು ಸ್ಕೀಮ್ ವರ್ಕರ್ಗಳಿಗೆ ಮಾಸಿಕ ರೂ.10,000 ಗಳ ಕೋವಿಡ್ ಅವಘಡ ಭತ್ಯೆ ಒದಗಿಸಿ.
7) ಸೇವಾ ಅವಧಿಯಲ್ಲಿ ಸೋಂಕಿತ ರಾದ ಪ್ರತಿಯೊಬ್ಬರಿಗೂ ಕನಿಷ್ಟ ಹತ್ತು ಲಕ್ಷ ರೂಪಾಯಿಗಳ ಪರಿಹಾರ ಒದಗಿಸಿ.
8) ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲಾ ಸ್ಕೀಂ ವರ್ಕರ್ಗಳನ್ನು ಫ್ರೆಂಟ್ ಲೈನ್ ನೌಕರರೆಂದು ಘೋಷಿಸಿ.
ಪ್ರತಿಭಟನೆ ಸಭೆಯ ಅಧ್ಯಕ್ಷತೆ ವಹಿಸಿ . ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾಕಾರರಾದ S.G ನಾಗರತ್ನ ರವರು.ಮಾತನಾಡಿದರು.ನಂತರ ಪ್ರತಿಭಟನೆಯಲ್ಲಿ ಆಶಾ ಸಂಘದ ಜಿಲ್ಲಾ ಕಾರ್ಯದರ್ಶಿ ಗೀತಾ,ಮತ್ತು ಅಂಬಿಕಾ, ರೇಷ್ಮಾ, ರಾಜೇಶ್ವರಿ,ರಾಮಕ್ಕ,ಲಕ್ಷ್ಮಿ ನಾಗರತ್ನ. ಇನ್ನಿತರರು ಬಾಗವಹಿಸಿದ್ದರು….

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ಉಪಸಂಪಾದಕರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
