ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನಾನಾ ಕಡೆ ಶೇಂಗಾ ಬೆಳೆಗೆ ಕಂಬಳಿಹುಳುಗಳ ಕಾಟ ಕಂಡುಬಂದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೀಡಾಗಿದ್ದಾರೆ. ಹೌದು… ಕಸಬಾ ವ್ಯಾಪ್ತಿಯ ಪಟ್ಟಣದ ರೈಲ್ವೆ ಸ್ಟೇಷನ್ ಸಮೀಪ ಹಾನಗಲ್ ರಸ್ತೆ ಕೋನಸಾಗರ, ಸೋಮನಹಳ್ಳಿ, ಸೋಲೆ ನಹಳ್ಳಿ, ಹಾಗೂ ಇತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆದಿರುವ ಶೇಂಗಾ ಬೆಳೆಗಳಿಗೆ ಕಂಬಳಿ ಹುಳುಗಳು ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ಶೇಂಗಾ ಬೆಳೆ ಪ್ರಧಾನ ಬೆಳೆಯಾಗಿದ್ದು ಕೃಷಿ ಇಲಾಖೆ 28 ಸಾವಿರ ಎಕ್ಕರೆ ಪ್ರದೇಶದಲ್ಲಿ ಗುರಿ ಹೊಂದಿತ್ತು ಇದರಲ್ಲಿ ಈ ವರ್ಷ 26.800 ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ರೈತರು ಹೆಚ್ಚಿನ ಪ್ರದೇಶದಲ್ಲಿ ಶೇಂಗಾ ವನ್ನು ಬೆಳೆದಿದ್ದಾರೆ. ಶೇಂಗಾ ಗಿಡಗಳು ಈಗಾಗಲೇ ಹೂ ಬಿಡುವ ಅಂತ ಮುಗಿಸಿ ಹೂಡುಇಳಿಯುವ ಹಂತಕ್ಕೆ ತಲುಪಿದೆ. ಈ ಸಮಯಕ್ಕೆ ಸರಿಯಾಗಿ ಕಸಬಾ ಹೋಬಳಿಯ ಕೆಲವು ಕಡೆ ಶೇಂಗಾ ಗಿಡಗಳಲ್ಲಿ ಕಂಬಳಿ ಹುಳುಗಳು ಕಾಣಿಸಿಕೊಂಡು ರೈತರನ್ನು ಚಿಂತೆಗೀಡು ಮಾಡಿದೆ. ಕಂಬಳಿ ಹುಳುಗಳು ಶೇಂಗಾ ಬೆಳೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತ ಎಲೆಗಳನ್ನು ತಿಂದು ಗಿಡಗಳಿಗೆ ಹಾನಿ ಮಾಡುತ್ತವೆ. ಈ ಕಂಬಳಿಹುಳುಗಳ ಬಾಧೆಯಿಂದ ಶೇಂಗಾ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದೆ. ಕಂಬಳಿ ಹುಳುಗಳು ಬಾಧೆಯಿಂದ ರೈತರಲ್ಲಿ ಆತಂಕ ಮನೆಮಾಡಿದೆ ಕೃಷಿ ಸಹಾಯಕ ನಿರ್ದೇಶಕರು ಉಮೇಶ್ ಮಾತನಾಡಿ ತಾಲೂಕಿನ ಕೋನಸಾಗರ, ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡಗಳಿಗೆ ಕಂಬಳಿಹುಳು ಬಾದೆ ಕಾಣಿಸಿಕೊಂಡಿದ್ದು ರೈತರು ಇಲಾಖೆ ಮಾರ್ಗದರ್ಶನದಂತೆ ಕೀಟನಾಶಕ ಸಿಂಪಡಿಸುವ ಕ್ರಮಗಳನ್ನು ಕೈಗೊಳ್ಳುವುದು ಎಂದರು…

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
