;

*ಚಿಕ್ಕಪೇಪರ್ ಬಂಡೆಲ್ 100ರೂ ಬಸ್ ಚಾಲಕನ ಬೇಡಿಕೆ*-

*ಚಿಕ್ಕಪೇಪರ್ ಬಂಡೆಲ್ 100ರೂ ಬಸ್ ಚಾಲಕನ ಬೇಡಿಕೆ*- ಬಳ್ಳಾರಿ ಜಿಲ್ಲೆ ಸಂಡೂರು ಬಸ್ ಡಿಪೋ ಚಾಲಕ,ತಾನು ಚಲಾಯಿಸಿಕೊಂಡುಬಂದ “ಶಿವಮೊಗ್ಗ ಭದ್ರಾವತಿ ಸಂಡೂರು” ಫಲಕವಿರುವ ಬಸ್ ನಲ್ಲಿದ್ದ ಪತ್ರಿಕೆ ಬಂಡಲ್ ಗೆ ಚಾಲಕ.ಭದ್ರಾವತಿ ಯಿಂದ ಕಳುಹಿಸಿದ್ದ ಚಿಕ್ಕ ಪತ್ರಿಕಾ ಬಂಡೆಲ್ ನ್ನು ನೀಡಲು. ಕೂಡ್ಲಿಗಿ ಯಲ್ಲಿ ಪತ್ರಿಕಾ ವಿತರಕರಿಗೆ ಬಸ್ ಚಾಲಕ 100ರೂ ಬೇಡಿಕೆ ಇಟ್ಟಿದ್ದಾನೆ, ಭದ್ರಾವತಿ ಯಿಂದ ಹಾಕಿರುವ 20ಪತ್ರಿಕೆಗಳಿರುವ ಚಿಕ್ಕ ಬಂಡೆಲ್ ನ್ನು ಪಡೆಯಲು ಬಂದ ಪತ್ರಿಕಾ ವಿತರಕರಿಗೆ ಬಸ್ ಚಾಲಕ ಇಟ್ಟ ಬೇಡಿಕೆ ಇದಾಗಿದೆ.ಈ ಸಂದರ್ಭದಲ್ಲಿ ಹಣ ಕಡಿಮೆ ಇದೆ ಎಂದು ವಿತರಕರು ಹೇಳಿ ತಮ್ಮಲ್ಲಿರುವ ಹಣವನ್ನು ನೀಡಲು ಮುಂದಾಗಿದ್ದಾರೆ,ಚಾಲಕ ಆ ಹಣ ಪಡೆಯದೇ ಪೇಪರ್ ಬಂಡೆಲ್ ನೀಡಲು ನಿರಾಕರಿಸಿದ್ದಾನೆ.ಇದು ಉದಾ ಹರಣೆ ಮಾತ್ರ ಇದು ಸಾಮಾನ್ಯವಂತೆ,ಹೀಗೆ ಕೆಲವು ನವರು ಬೇಕಾ ಬಿಟ್ಟಿಯಾಗಿ ಹಣ ಪಡೆಯುತ್ತಾರೆಂದು ಬಸ್ ಮೂಲಕ ಬೇರೆಡೆಯಿಂದ ಪಾರ್ಸೆಲ್ ತರಿಸುವವರು ತಿಳಿಸಿದ್ದಾರೆ.ಚಾಲಕರು ತರುವ ಬಹಿತೇಕ ಪಾರ್ಸೆಲ್ ಗಳಿಗೆ ಯಾವುದೇ ದಾಖಲುಗಳಿರುವುದಿಲ್ಲ,ಆದ್ರೆ ಪಾರ್ಸೆಲ್ ಹಾಕುವರಿಂದಲೋ ಅಥವಾ ಪಾರ್ಸೆಲ್ ಪಡೆಯುವರಿಂದಲೋ ಬೇಕಾಬಿಟ್ಟಿಯಾಗಿ ಹಣದ ಬೇಡಿಕೆ ಇಟ್ಟು ಪಡೆಯುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.ಇದಕ್ಕೆಲ್ಲ ಸಂಬಂದಿಸಿದ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ,ಪಾರ್ಸೆಲ್ ಗಳನ್ನು ತರುವಲ್ಲಿ ಸೂಕ್ತ ನಿಯಮ ಹಾಗೂ ಕನಿಷ್ಠ ದರ ನಿಗಧಿಗೊಳಿಸಿ ರಸೀದಿ ಖಡ್ಡಾಯಗೊಳಿಸಿ ಕ್ರಮ ಜರುಗಿಸಬೇಕು ಎನ್ನುತ್ತಾರೆ ಪತ್ರಿಕಾ ವಿತರಕರು….

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;