ಪೋಲೀಸ್ ಇಲಾಖೆಯಿಂದ ಗಣೇಶ ಚತುರ್ಥಿ ಕುರಿತಾಗಿ ಶಾಂತಿ ಸಭೆ.
ಹೂವಿನ ಹಡಗಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪೋಲೀಸ್ ಇಲಾಖೆ ಶಾಂತಿ ಸಭೆಯನ್ನ ಕರೆದಿತ್ತು. ಡಿ ವೈ ಎಸ್ ಪಿ ಹಾಲಮೂರ್ತಿ ರಾವ್ ,ಪಿ ಎಸ್ ,ಐ ರಮೇಶ ಕುಲಕರ್ಣಿ,ಬಿ.ಇ.ಒ. ಪ್ರಭು ರೆಡ್ಡಿ, ಅರೋಗ್ಯ ನಿರೀಕ್ಷಕರಾದ ಶ್ರೀನಿವಾಸ ಮುಂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪೋಲೀಸ್ ಇಲಾಖೆಯ ವತಿಯಿಂದ ಕಾರ್ಯ ಕ್ರಮ ನಡೆಯಿತು.
ಗಣೇಶ ಚತುರ್ಥಿ ಆಚರಣೆಯ ಮಾರ್ಗ ಸೂಚಿಗಳು
* ಸರಳ ಆಚರಣೆ.
* ಲಸಿಕೆ ಪಡೆದಿರಬೇಕು ಮತ್ತು ಕೋವ್ಯಾಕ್ಸಿನ್ ಪ್ರಮಾಣ ಪತ್ರ ಹೊಂದಿರಬೇಕು.
* ಗಣೇಶ ಇಡುವ ಕಡೆಯಲ್ಲಿ ಲಸಿಕಾ ಅಭಿಯಾನ ಮಾಡಬೇಕು.
* ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಡಿ ಜೆ. ನಿಷಿದ್ಧ.
* ಐದು ದಿನಗಳ ಕಾಲ ಆಚರಣೆ ಗೆ ಅವಕಾಶ.
* ಕೋವಿಡ್ ಮಾರ್ಗ ಸೂಚಿಯ ಕಟ್ಟು ನಿಟ್ಟಿನ ಪಾಲನೆ.
ತಾಲೂಕಿನ ಜೆ ಡಿ ಸ್ ಮುಖಂಡರಾದ ಪುತ್ರೇಶ್ ಕೆ. ತಾಲೂಕು ಪಂಚಾಯತಿಯ ಕೆ. ಶಿವರಾಮ್. ಪುರಸಭೆ ಮಾಜಿ ಅಧ್ಯಕ್ಷರು ವಿನ್ಸನ್ ಸ್ವಾಮಿ. ನಗರದ ಹಿಂದೂ ಮುಸ್ಲಿಂ ಮುಖಂಡರು. ಹಾಜರಿದ್ದರು.
ಡಿ ವೈ ಎಸ್ ಪಿ ಹಾಲಮೂರ್ತಿ ರಾವ್ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಬಾಲ ಗಂಗಾಧರ ತಿಲಕ್ ರು ಆಚರಿಸುತ್ತಿದ್ದ ರೀತಿಯಲ್ಲಿ ಶಾಂತಿಯುವವಾಗಿ ಆಚರಿಸಲು, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಕೋವಿಡ್ ನಿಯಮಾವಳಿಯನ್ನ ಪಾಲಿಸುವುದರ ಮೂಲಕ ಗಣೇಶ ಚತುರ್ಥಿ ಆಚರಿಸಲು ಕರೆ ನೀಡಿದರು..

ವರದಿ: ಅಜಯ. ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
