ನರೇಗಾ ಯೋಜನೆಯಲ್ಲಿ ಸರ್ಕಾರದ ಅನುದಾನ ದುರುಪಯೋಗ, ಪಿಡಿಓ ಬಸಪ್ಪ ಕಾಂಬಳೆ ಅಮಾನತ್ತು…!!!

ಬೆಳಗಾವಿ :-ರಾಯಬಾಗ ತಾಲೂಕು ನಿಡಗುಂದಿ ಗ್ರಾಮ ಪಂಚಾಯತ ಪಿ ಡಿ ಓ, ಬಿ ಎಸ್, ಕಾಂಬಳೆ ಅಮಾನತ್ತು ಗೊಂಡಿದ್ದಾರೆ ಇವರು ಕರ್ತವ್ಯಚ್ಯುತಿ ಎಸಗಿರುವದರಿಂದ ಸೇವೆಯಿಂದ ಅಮಾನನತ್ತು ಗೊಂಡಿದ್ದಾರೆ.

ಬಸಪ್ಪ ಎಸ್ ಕಾಂಬಳೆ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ ನಿಡಗುಂದಿ ತಾ /ರಾಯಬಾಗ ಇವರು ನಿಡಗುಂದಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 01-09-2011ರಿಂದ 31-03-2017ರವರೆಗೆ ಮತ್ತು ದಿನಾಂಕ :14-11-2019ರಿಂದ 30-06-2020 ರವರೆಗೆ ಕಾರ್ಯನಿರ್ವಾಹಿಸುತ್ತಿದ್ದ ಅವಧಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ತೆಗೆದುಕೊಂಡು ಸದರಿ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ಅನರ್ಹ ವ್ಯಕ್ತಿಗಳ ಹೆಸರಿನಲ್ಲಿ ಜಾಬ್ ಕಾರ್ಡ್ ನೀಡಿ ಅಕ್ರಮ ಎಸಗಿ ಸರ್ಕಾರದ ಅನುದಾನ ದುರುಯೋಗ ಪಡಿಸಿಕೊಂಡಿದ್ದಾರೆ.
ಸುಮಾರು ಎಂಟು ಪಲಾನುಭವಿಗಳು ಬೇರೆ ಗ್ರಾಮ ಪಂಚಾಯತಿಯ ರಹವಾಸಿಗಳು, ಕಾಲೇಜು ವಿದ್ಯಾರ್ಥಿಗಳು, ಪ್ರೌಢಶಾಲೆ ವಿದ್ಯಾರ್ಥಿಗಳು, ಸರಕಾರಿ ನೌಕರರು, ಆರ್, ಎಂ, ಪಿ, ವೈದ್ಯರು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಆಗಿರುತ್ತಾರೆ.ಸದರಿಯವರುಗಳಿಗೆ ಸದರಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಇವರು ದಿನಾಂಕ 01-09-2011 ರಿಂದ 31-03-2017 ಮತ್ತು ದಿನಾಂಕ 14-11-2019 ರಿಂದ 30-06-2020 ರವರೆಗಿನ ಅವಧಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 08 ಅನರ್ಹ ಪಲಾನುಭವಿಗಳಿಗೆ ಉದ್ಯೋಗ ಚೀಟಿಗಳನ್ನು ವಿತರಿಸಿರುತ್ತಾರೆ.

238ಮಾನವ ದಿನಗಳು ಸೃಜನೆ ಯಾಗಿದ್ದು ಒಟ್ಟು ರೂಪಾಯಿ 47,060/-ಗಳ ಕೂಲಿ ಹಣ ಪಾವತಿಸಿ ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಂಡಿರುತ್ತಾರೆಂದು ತಿಳಿಸಿ ನೌಕರರ ಮೇಲೆ ಸೂಕ್ತ ಕ್ರಮ ಕೈಗೋಳಬೇಕೆಂದು ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಬಾಗ ಇವರಿಗೆ ವರದಿ ಸಲ್ಲಿಸಿರುತ್ತಾರೆ ನೌಕರರಿಗೆ ಕಾರಣ ಕೇಳುವ ನೋಟಿಸ್ ನೀಡಿ ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಿದರು ಸದರಿ ನೌಕರರು ಲಿಖಿತ ಹೇಳಿಕೆ ನೀಡದ ಕಾರಣ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ರಾಯಬಾಗ ಇವರ ವರದಿ ಆಧಾರದ ಸದರಿ ನೌಕರರ ಮೇಲೆ ಇಲಾಖಾ ತನಿಖೆ ಕಾಯ್ದಿರಿಸಿ ಸೇವೆಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಳಗಾವಿಯವರು ದಿನಾಂಕ 02-09-2021 ರಂದು ಅಮಾನತ್ತು ಗೊಳಿಸಿದ್ದಾರೆ.

ಹಾಗೇ ಮುಂದೆ ವರೆದು ಮಾಜಿ ಅಧ್ಯಕ್ಷೆ ಸುರೇಖಾ ಮುರಗೆಪ್ಪ ವನಜೊಳೆ ಇದೆ ಅವಧಿಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಜೊತೆ ಶಾಮೀಲು ಆಗಿ ಅಧಿಕಾರ ದುರುಪಯೋಗ ಪಡಿಸಿಕೊಂಡ್ಡಿದ್ದು ಈಗ ಮರು ಚುನಾವಣೆಯಲ್ಲಿ ಆಯ್ಕೆಗೊಂಡ ಸದಸ್ಯತ್ವ ರದ್ದು ಪಡಿಸಬೇಕು, ಮತ್ತು ವಿಠ್ಠಲ ಪ್ರಭು ಗೊಂಡೆ ಗ್ರಾಮ ಪಂಚಾಯಿತಿ ಸದಸ್ಯ ತನ್ನ ಬಾಲ ಕಾರ್ಮಿಕ ಮಕ್ಕಳ ಹೆಸರಿನಲ್ಲಿ (ಆದೇಶ ಪತ್ರದ SL NO. 05 ಮತ್ತು 06 ರಲ್ಲಿ ಉಲ್ಲೇಖಿಸಿದಂತೆ) ಹಣ ದುರುಪಯೋಗ ಪಡಿಸಿಕೊಂಡ ಕಾರಣ ಆತನ ಸದಸ್ಯತ್ವ ಕೂಡ ರದ್ದು ಪಡಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು..

 

ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend