ಸಿಂಧನೂರು : ಬಸನಗೌಡ ಬಾದರ್ಲಿ ನಾಯಕತ್ವ ಮೆಚ್ಚಿ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆ.
ನಿನ್ನೆ ಪಿ.ಡಬ್ಲ್ಯೂ.ಡಿ ಕ್ಯಾಂಪಿನ್ ಎ. ಪಿ. ಜಿ. ಅಬ್ದುಲ್ ಕಲಾಂ ಸರ್ಕಲ್ ನಲ್ಲಿ ನಡೆದ ನೆಚ್ಚಿನ ನಾಯಕರಾದ ಬಸನಗೌಡ ಬಾದರ್ಲಿ ಅವರ ನೈತೃತ್ವದಲ್ಲಿ ಸಿಂಧನೂರು ನಗರದಲ್ಲಿನ ವಾರ್ಡ್ ನಂಬರ್ 29,30,31, ರ ಜೆಡಿಎಸ್ ಪಕ್ಷವನ್ನು ತೊರೆದು ನೂರಾರು ಹಿರಿಯರು, ಯುವಕರು, ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಮತ್ತು ಬಸನಗೌಡ ಬಾದರ್ಲಿ ಅವರ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಅವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಬಸನಗೌಡ ಬಾದರ್ಲಿ ಅವರು ಕಾಂಗ್ರೆಸ್ ನಾ ಇತಿಹಾಸ ಈ ದೇಶದ ಇತಿಹಾಸ ಎಂದು ಹೇಳಿದರು .ಕೆಪಿಸಿಸಿ ಅಧ್ಯಕ್ಷರಾದ ಡಿಕೆ.ಶಿವಕುಮಾರ್ ಹಾಗೂ CLP ನಾಯಕರಾದ ಸಿದ್ಧರಾಮಯ್ಯ ನವರ ನಾಯಕತ್ವದಲ್ಲಿ ಪಕ್ಷವನ್ನು ಬಲ ಪಡಿಸುವಂತಹ ಕೆಲಸ ಮಾಡಲಾಗುತ್ತಿದೆ ಬಿಜೆಪಿಯ ಸರ್ಕಾರದಿಂದ ಜನ ಬೇಷತ್ತಿದ್ದಾರೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಹೀಗೆ ದಿನ ನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೆರಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಸನಗೌಡ ಬಾದರ್ಲಿ ಅವರಿಗೆ ರೈತನ ಬೆನ್ನೆಲುಬಾದ ನೇಗಿಲನ್ನು ನೀಡುವುದರ ಮೂಲಕ ರೈತರ ಪರವಾದ ನಾಯಕನಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆಪಿಸಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ , ಹಿರಿಯರಾದ ಎಚ್. ಎನ್. ಬಡಿಗೇರ ಶಿವಕುಮಾರ ಜವಳಿ, ಖಾಜಾಹುಸೇನ್, ಮಹಿಬೂಬ್ ,ಬುಡ್ಡಸಾಬ, ಯುವ ಕಾಂಗ್ರೆಸ್ ಅಧ್ಯಕ್ಷ ಹಬೀಭ್ ಖಾಜಿ, ಯುವಕರು, ಹಾಗೂ ವಾರ್ಡಿನ ನಿವಾಸಿಗಳು, ಕಾರ್ಯಕರ್ತರು, ಭಾಗವಹಿಸಿದ್ದರು ….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
