ರಾಂಪುರ: ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಡೆಂಗ್ಯೂ ತಡೆಗಟ್ಟಲು ಬೀದಿ ಬದಿಯಲ್ಲಿ ವಿದ್ಯಾರ್ಥಿಗಳಿಂದ ಜಾತಾ ಕಾರ್ಯಕ್ರಮ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ಹಾಗೂ ಸಮುದಾಯದ ಅರೋಗ್ಯ ಇಲಾಖೆಯಿಂದ ರಾಂಪುರ, ಕೆರೆ ಕೊಂಡಾಪುರ ಹಾಗೂ ವಡೇರಹಳ್ಳಿ ಗ್ರಾಮಗಳಲ್ಲಿ ಜನಜಾಗೃತಿ ಬೀದಿ ಬದಿಯಲ್ಲಿ ವಿದ್ಯಾರ್ಥಿಗಳಿಂದ ಜಾತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜನರಿಗೆ ಜಾಗೃತಿ ತಿಳಿಹೇಳಿದರು ಮಳೆಗಾಲದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಮನೆಯನ್ನು ಕಾಡುವಂತಹ ಸಮಸ್ಯೆಯೆಂದರೆ ಅದು ಜ್ವರ. ಅದರಲ್ಲೂ ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಡೆಂಗ್ಯೂ ಈ ಸಮಯದಲ್ಲಿ ಅತಿಯಾಗಿ ಕಾಡುವುದು. ಇದಕ್ಕೆ ಮುಖ್ಯ ಕಾರಣ ಮಳೆ ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಮೊಟ್ಟೆಯನ್ನಿಡುವುದು. ಅವುಗಳ ಸಂತಾನಾಭಿವೃದ್ಧಿಯು ಆಗುವ ಜತೆಗೆ ಕೆಲವು ಮಾರಕ ಜ್ವರಗಳನ್ನು ಕೂಡ ಹರಡುವುದು. ಒಂದೊಂದು ರೀತಿಯ ಜ್ವರು ವಿವಿಧ ಬಗೆಯ ಸೊಳ್ಳೆಯಿಂದ ಹರಡುವುದು. ಹೀಗಾಗಿ ಜ್ವರ ಬಂದ ಬಳಿಕ ಅದರ ಬಗ್ಗೆ ಕಡೆಗಣಿಸದೆ, ಎಚ್ಚರ ವಹಿಸಬೇಕು. ಹಾಗೂ ಕೋರೋನ 3ನೇ ಹೆಚ್ಚಾಗುವ ಸಾಧ್ಯತೆ ಇದೆ ಅದಕ್ಕಾಗಿ ನಾವೆಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳ ಬೇಕು ಎಂದು ಜನರಿಗೆ ಜಾಗೃತಿ ತಿಳಿಸಿದರು. ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ರಾಂಪುರ ಅಭಿವೃದ್ಧಿ ಅಧಿಕಾರಿಗಳಾದ ಎನ್ ಗುಡ್ಡಪ್ಪ, ಹಾಗೂ ಅಧ್ಯಕ್ಷರಾದ ಎಲ್ ಪರಮೇಶ್ವರಪ್ಪ, ಉಪಾಧ್ಯಕ್ಷರು ಟಿ ನಾಗವೇಣಿ, ಸೇರಿದಂತೆ ಸರ್ವ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯವರು, ಶಿಕ್ಷಕರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend