ರಾಯಬಾಗ ತಾಲೂಕಿನ ಹಾರೂಗೇರಿ ಪುರಸಭೆಯ ಪುರಾಣ, ಕಣ್ಣಿದ್ದು ಕುರುಡಾದ ಅಧಿಕಾರಿಗಳು…!!!

ಬೆಳಗಾವಿ :-ರಾಯಬಾಗ ತಾಲೂಕಿನ ಹಾರೂಗೇರಿ ಪುರಸಭೆ ವ್ಯಾಪ್ತಿಯಲ್ಲಿ ದನಗರ ಪೋಳ ಪ್ಲಾಟ್ ದಲ್ಲಿ ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಶೌವ್ಯಾಪ್ತಿಯಲ್ಲಿಹಾರೂಗೇರಿ ಪುರಸಭೆ ಬರುವ ವಾರ್ಡ್ ನಂಬರ್ 5 ರಲ್ಲಿ ಶೌಚಾಲಯಗಳು ಸರಿಯಾದ ನಿರ್ವಹಣೆ ಇಲ್ಲದೆ ಒಂದೇ ವರ್ಷದಲ್ಲಿ ದುಸ್ಥಿತಿಗೆ ತಲುಪಿದೆ ಇಲ್ಲಿರುವ ನಳಗಳು ಕಿತ್ತುಹೋಗಿದ್ದು ನಿತ್ಯವೂ ಸಾಕಷ್ಟು ನೀರು ಪೋಲಾಗಿ ಹೋಗುತ್ತಿದೆ ಅಷ್ಟೇ ಅಲ್ಲದೆ ಎಲ್ಲ ಶೌಚಾಲಯಗಳು ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ.

ಇಲ್ಲಿ ಪುರಸಭೆ ಅಧಿಕಾರಿಗಳಿಂದ ಸ್ವಚ್ಛತೆಗಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿರುವು ದಾಗಿ ಹೇಳಿರುತ್ತಾರೆ, ಆದರೆ ಇದು ಕೇವಲ ಹೆಸರಿಗೆ ಮಾತ್ರ ಇದ್ದಂತೆ ಕಂಡು ಬರುತ್ತಿದೆ. ಕೋವಿಡ್-19 ಮಹಾಮಾರಿ ಇಂತಹ ಸಂದರ್ಭದಲ್ಲಿ ಸ್ವಚ್ಛತೆಯ ಕಡೆಗೆ ಗಮನ ಹರಿಸದಿದ್ದಲ್ಲಿ ಮುಂದೆ ಒಂದು ದೊಡ್ಡ ರೋಗ ರುಜಿನ ಗಳ ತಾಣ ಇದಾಗಲಿದೆ ಆದ್ದರಿಂದ ಪುರಸಭೆಯ ಅಧಿಕಾರಿಗಳು ಹಾಗೂ ವಾರ್ಡ್ ನಂಬರ್ 5,2 ಮತ್ತು 6 ರ ಚುನಾಯಿತ ಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಬೇಕಾಗಿದೆ. ಇಲ್ಲಿ ವಾಸವಿರುವ ಕುಟುಂಬಗಳ ಆರೋಗ್ಯದ ಹಿತದೃಷ್ಟಿಯಿಂದ ಅತೀ ಶೀಘ್ರವಾಗಿ ಯೋಗ್ಯ ಕ್ರಮವನ್ನು ಕೈಗೊಳ್ಳಬೇಕು. ಹೊಸದಾಗಿ ನಿರ್ಮಿಸಲಾದ ಶೌಚಾಲಯ ಕೇವಲ ಒಂದೇ ವರ್ಷದಲ್ಲಿ ದುಸ್ಥಿತಿಗೆ ತಲುಪಿರುವುದು ದುರಂತವೇ ಸರಿ… ಮಾನ್ಯರೇ…. ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವುದಲ್ಲದೆ ಇಲ್ಲಿ ಹಣ ಪಾವತಿಸಿ ಉಪಯೋಗಿಸುವ PAY & USE ವ್ಯವಸ್ಥೆ ಜಾರಿ ಮಾಡಿದಲ್ಲಿ ಇದರಿಂದ ಬಂದ ಹಣವನ್ನು ಇದರ ಸ್ವಚ್ಛತೆಗಾಗಿ ಈರ್ವರನ್ನು ನೇಮಿಸ ಬಹುದಾಗಿದೆ ಹೀಗೆ ಸ್ವಚ್ಛತೆಯ ಕಾಪಾಡುವುದಲ್ಲದೆ ಸುತ್ತಮುತ್ತಲಿನ ಕುಟುಂಬಗಳ ಆರೋಗ್ಯ ರಕ್ಷಣೆ ಮಾಡಿದಂತಾಗುತ್ತದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮೂರು ವಾರ್ಡಿನ ಚುನಾಯಿತ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿಸಲಾಗಿದೆ ಮಹೇಶ್ ಐಹೊಳೆ ಹಾರೂಗೇರಿ ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ ಇನ್ನಾದರೂ ಪುರಸಭೆ ಕಾರ್ಯಲಯದವರು ಇದರ ಗಮನ ಹರಿಸಿ ಎಂದು ಪತ್ರಿಕೆಯ ಆಶಯ.

 

ವರದಿ :-ಮಹಾಲಿಂಗ ಹ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend