ದಂಡ ಕಟ್ಟಿಸಿ ಮಾಸ್ಕ್ ಅರಿವು ಮೂಡಿಸಿದ ಕೂಡ್ಲಿಗಿ ತಹಸೀಲ್ದಾರ್. ಕೂಡ್ಲಿಗಿ :- ಕೊರೋನಾ ಮಹಾಮಾರಿಯ ಮೂರನೇ ಅಲೆ ಮುನ್ಸೂಚನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಜನರು ಆರೋಗ್ಯ ಕಾಪಾಡಿಕೊಳ್ಳುವಂತೆ ಮನವರಿಕೆ ಮಾಡಲು ತಾವೇ ರಸ್ತೆಗಿಳಿದು ಮಾಸ್ಕ್ ಹಾಕದ ವಾಹನಗಳನ್ನು ನಿಲ್ಲಿಸಿ ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ ದಂಡ ವಿಧಿಸಿ ಮಾಸ್ಕ್ ನ ಅರಿವು ಮೂಡಿಸಿದರು. ಕೂಡ್ಲಿಗಿಯಲ್ಲಿ ಪೊಲೀಸ್ ಠಾಣೆ ಎದುರಿಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಪಟ್ಟಣ ಪಂಚಾಯತಿ ಅಧ್ಯಕ್ಷರು ಸದಸ್ಯರಾದಿಯಾಗಿ ಮಾಸ್ಕ್ ಹಾಕಿಕೊಳ್ಳದ ರಸ್ತೆ ಸಂಚಾರಕರಿಗೆ ವಾಹನ ಸವಾರರಿಗೆ ಮಾಸ್ಕ್ ಹಾಕಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳುವ ಜೊತೆಗೆ ಮಾಸ್ಕ್ ಹಾಕಿಕೊಳ್ಳದ ಬೈಕ್ ಸವಾರರಿಗೆ ನೂರು ರೂಪಾಯಿ ದಂಡ ವಿಧಿಸುವಲ್ಲಿ ಮುಂದಾಗಿದ್ದರು ಆ ಸಂದರ್ಭದಲ್ಲಿ ಆ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ತಹಸೀಲ್ದಾರ್ ಬರೀ ಬೈಕ್ ಗಳಲ್ಲದೆ ಕಾರು, ಆಟೋಗಳಲ್ಲಿ ಸಂಚರಿಸುವ ಸವಾರರಿಗೂ ಪ್ರಯಾಣಿಕರಿಗೂ ಮಾಸ್ಕ್ ನ ಅರಿವು ಮೂಡಿಸಿದ್ದು ಕಂಡುಬಂದಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಕ್ರುದ್ದೀನ್, ಹಾಗೂ ಸಿಬ್ಬಂದಿಗಳು, ಕೂಡ್ಲಿಗಿ ಪಿಎಸ್ಐ ಶರತಕುಮಾರ, ಹಾಗೂ ಸಿಬ್ಬಂದಿ ಕಂದಾಯ ಇಲಾಖೆಯ ಆರ್ ಐ ಕುಮಾರಸ್ವಾಮಿ, ಭೀಮೇಶ್, ದುರುಗೇಶ್, ಬಾಸುನಾಯ್ಕ್, ಕಾಲ್ಚಾಟ್ಟಿ ಈಶಪ್ಪ, ರಾಘವೇಂದ್ರ, ಸಿರಿಬಿ ಮಂಜುನಾಥ ಹಾಗೂ ಇತರೆ ಸದಸ್ಯರು ಇದ್ದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
