;

ಮೊಳಕಾಲ್ಮೂರು ತಾಲೂಕಿನ ಜನರು ‘ನೀವು ಏನೇ ಹೇಳಿದರೂ ನಾವು ಲಸಿಕೆ ಹಾಕಿಸಿಕೊಳ್ಳುವುದಿಲ್ಲ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಹಾಕಲು ಹೋಗುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಎದುರಿಸುತ್ತಿರುವ ಪ್ರಶ್ನೆಗಳು.! ‘ನಾವು ಚೆನ್ನಾಗಿಯೇ ಇದ್ದೇವೆ, ನಮಗೇನೂ ಆಗಿಲ್ಲ. ನೀವು ಏನೇ ಹೇಳಿದರೂ ನಾವು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನಮಗೆ ಏನಾದರೂ ಆದರೆ ಯಾರು ಹೊಣೆ? ತೊಂದರೆಯಾದಲ್ಲಿ ಪರಿಹಾರ ಕೊಡುತ್ತೇವೆ ಎಂದು ಲಿಖತವಾಗಿ ಬರೆದು ಕೊಡಿ. ಆಗ ಹಾಕಿಸಿಕೊಳ್ಳುತ್ತೇವೆ. ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಸಂಜೀವಿನಿ ಎಂದು ಗುರುತಿಸಿಕೊಂಡಿರುವ ಕೋವಿಡ್ ಲಸಿಕೆ ಅಭಿಯಾನ ತಾಲ್ಲೂಕಿನಲ್ಲಿ ತೀವ್ರ ಕುಂಟುತ್ತ ಸಾಗಿದೆ.

ಜಿಲ್ಲೆಯ 6 ತಾಲ್ಲೂಕುಗಳ ಪೈಕಿ ಮೊಳಕಾಲ್ಮುರು ಕೊನೆಯ ಸ್ಥಾನದಲ್ಲಿದೆ. ಜನರನ್ನು ಓಲೈಸಲು ಅಧಿಕಾರಿಗಳು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದರೂ ಪ್ರಗತಿಯಾಗುತ್ತಿಲ್ಲ ಎನ್ನಲಾಗಿದೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶೇ 26ರಷ್ಟು ಮಾತ್ರ ಪ್ರಗತಿಯಾಗಿದೆ. ಇದರಲ್ಲಿ ತಾಲ್ಲೂಕಿನ ಆಂಧ್ರ ಗಡಿಭಾಗದ ಗ್ರಾಮಗಳಲ್ಲಿ ಹಾಗೂ ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡ ಜನರು ಇರುವ ಕಡೆ ಅತ್ಯಂತ ಕಡಿಮೆ ಪ್ರಗತಿ ಕಂಡುಬಂದಿದೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ 1,57,509 ಜನರಿಗೆ ಲಸಿಕೆ ಹಾಕುವ ಗುರಿಯಿದೆ. ಇದರಲ್ಲಿ 18ರಿಂದ 44ರವರೆಗಿನ ವಯಸ್ಸಿನ 69,302 ಜನರಿದ್ದು, 18,287 ಜನರಿಗೆ ಲಸಿಕೆ ಹಾಕಲಾಗಿದೆ. 45-59 ವಯಸ್ಸಿನ 45,941 ಜನರಿದ್ದು, ಇವರಲ್ಲಿ 11,656 ಜನರಿಗೆ ಲಸಿಕೆ ಹಾಕಲಾಗಿದೆ. 60 ವರ್ಷಕ್ಕೂ ಮೇಲಿನ 18,152 ಜನರಲ್ಲಿ 9,272 ಮಂದಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ಒಟ್ಟು ಗುರಿಯಲ್ಲಿ 39,212 ಮಂದಿಗೆ ಮಾತ್ರ ಲಸಿಕೆ ಹಾಕಿದ್ದು, ಶೇ 26.7 ಸಾಧನೆ ಮಾಡಲಾಗಿದೆ ಎಂದರು…

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;