;

ಸ್ವಾತಂತ್ರ ಬಂದ 75 ವರ್ಷಗಳು ಕಳೆದರೂ ಬಸ್ ಕಾಣದ ಊರಿಗೆ, ಬಸ್ ಸೌಲಭ್ಯ ಕಲ್ಪಿಸಿ ಇತಿಹಾಸ ಬರೆದ ಸಚಿವ ಬಿ ಶ್ರೀರಾಮುಲು.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಳ್ಳಕೆರೆ ತಾಲೂಕಿನಲ್ಲಿ (ಸೆಪ್ಟೆಂಬರ್-1) ಇಂದು ಚಿಕ್ಕ ಉಳ್ಳಾರ್ತಿ (ಬಂಗೇರಹಟ್ಟಿ) ಗ್ರಾಮಿಣ ಜನರು ಸ್ವಾತಂತ್ರ ಬಂದ 75 ವರ್ಷಗಳು ಕಳೆದರೂ ಸಹ ಬಸ್ ಸೌಲಭ್ಯ ಕಾಣದ ಊರಿಗೆ ಇಂದು ಬಸ್ ಸೌಲಭ್ಯ ಕಲ್ಪಿಸಿ ಇತಿಹಾಸ ಬರೆದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಸಚಿವರದ ಬಿ ಶ್ರೀರಾಮುಲ ಅವರು ಇದನ್ನು ಗಮನಿಸಿದ್ದರು. ಮತ್ತು ಅಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಬೆಳವಣಿಗೆಗೆ ಸಹ ಇದು ತೊಡಕಾಗಿತ್ತು. ಸಾಕಷ್ಟು ಮಕ್ಕಳು ನಡೆದುಕೊಂಡು ಹೋಗಲು ಆಗದೆ ಶಾಲಾ ಕಾಲೇಜುಗಳನ್ನು ಕೈಬಿಟ್ಟ ಸಾಕಷ್ಟು ನಿದರ್ಶನಗಳಿದ್ದವು. ಇಂತಹ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಎಲ್ಲಾವನ್ನು ದೃಷ್ಟಿಯಲ್ಲಿಟ್ಟುಕೊಂಡ ಚಿಕ್ಕ ಉಳ್ಳಾರ್ತಿ ಗ್ರಾಮಕ್ಕೆ ಇಂದು ಮಕ್ಕಳ ಮೂಲಕ ಹೊಸ ಬಸ್ ಮಾರ್ಗದ ಸೌಲಭ್ಯಕ್ಕೆ ಚಾಲನೆ ಕೊಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರ ಅಪ್ತ ಸಹಾಯಕ ಪಾಪೇಶ್ ನಾಯಕ ಮಾತನಾಡಿ ಅನೇಕ ಜನರು ಉದ್ಯೋಗಕ್ಕೆ ಮತ್ತು ಶಾಲಾ ಕಾಲೇಜುಗಳಿಗೆ ತೆರಳಲು ಸಾಕಷ್ಟು ಕಷ್ಟ ಆಗುತ್ತಿತ್ತು. ಇದನ್ನು ಗಮನಿಸಿ ಸಚಿವರು ಬಸ್ ಸೌಲಭ್ಯ ಕಲ್ಪಿಸದ್ದಾರೆ. ಅವರ ಆಶಯದಂತೆ ಇಂದು ಬಸ್ ಮಕ್ಕಳ ಇದ ಚಾಲನೆ ನೀಡಲಾಯಿತು. ಎಲ್ಲಾರೂ ಸಹ ಬಸ್ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ಸಚಿವ ಆಸೆಯಾಗಿದೆ ಎಂದರು. ಗ್ರಾ.ಪಂ ಉಪಾಧ್ಯಕ್ಷೆ ಬೋರಮ್ಮ, ಬಿಜೆಪಿ ಮುಖಂಡರಾದ ಜಯಪಾಲಯ್ಯ, ರಾಮರೆಡ್ಡಿ, ಚನಗನಲ್ಲಿ ಮಲ್ಲೇಶ್, ಚಿತ್ತಯ್ಯ ದಡ್ಡಿ ಬೋರಯ್ಯ, ಸಣ್ಣ ತಿಪ್ಪಯ್ಯ, ಜಯಣ್ಣ ಮತ್ತು ಗ್ರಾಮದ ಮುಖಂಡರು ಮತ್ತು ಮಕ್ಕಳು, ಯುವಕರು ಭಾಗವಹಿಸಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;