ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಧಿಕಾರಿಗಳು ವಿಫಲ – ಗುನ್ನಳ್ಳಿ ರಾಘವೇಂದ್ರ.
ಕೂಡ್ಲಿಗಿ.:- ಗ್ರಾಮೀಣ ಹಾಗೂ ಪಟ್ಟಣದಲ್ಲಿ ದೀನದಲಿತರು ಹೆಚ್ಚಾಗಿ ಮದ್ಯವ್ಯಸನಿಗಳಾಗುತ್ತಿದ್ದು 24 ಕಿ ಮೀಟರ್ ದೂರದಲ್ಲಿರುವ ಕೊಟ್ಟೂರುನಿಂದ ಮದ್ಯೆರಾತ್ರಿ ಬಣವಿಕಲ್ಲು ಸುತ್ತ ಮುತ್ತ ಹಳ್ಳಿಗಳಿಗೆ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಮದ್ಯ ಮಾರಾಟ ಇದನ್ನು ಸಂಬಂದಿಸಿದ ಅಧಿಕಾರಿಗಳು ತಡೆಯುವಲ್ಲಿ ವಿಫಲರಾಗಿದ್ದಾರೆಂದು ಕೂಡ್ಲಿಗಿ ಸಿಐಟಿಯು ಸಂಘಟನೆಯ ತಾಲೂಕು ಸಂಚಾಲಕ ಗುನ್ನಳ್ಳಿ ರಾಘವೇಂದ್ರ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅವರು ತಾಲೂಕು ಕಚೇರಿ ಆವರಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಘಟಕದವತಿಯಿಂದ ಅಕ್ರಮ ಮದ್ಯ ತಡೆಯುವಂತೆ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸುವ ಮೊದಲು ಮಾತನಾಡುತ್ತ ಪಟ್ಟಣದಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಸಭೆಯಲ್ಲಿ ಮಾತನಾಡಿ ಈ ಅಕ್ರಮ ಮದ್ಯ ಕುರಿತು ವಿಷಯ ಪ್ರಸ್ತಾಪಿಸಿದರು ಯಾವುದೇ ಪ್ರಯೋಜನವಾಗಿಲ್ಲ ಬೊಲೆರೋ, ಬೈಕು, ಟಾಟಾ ಏಸಿಗಳಲ್ಲಿ ಎಗ್ಗಿಲ್ಲದೆ ಬಾಕ್ಸ್ ಗಳಲ್ಲಿ ಕಣ್ಣಮುಂದೆ ಹೋಗುತಿದ್ದರು ಅವುಗಳನ್ನು ಹಿಡಿಯದೇ ಮಾಸ್ಕ್ ಹಾಕದೆ ಇರುವವರನ್ನು ಮಾತ್ರ ಹಿಡಿಯುತಿದ್ದು ಎಗ್ಗಿಲ್ಲದೆ ಅಕ್ರಮ ಮದ್ಯ ಸಾಗಿಸುತ್ತಿರುವ ವಾಹನಗಳನ್ನು ಹಿಡಿದು ಅದರ ವಿರುದ್ದ ಪ್ರಕರಣ ದಾಖಲಿಸದೆ ಯಾವುದೋ ಸಣ್ಣಪುಟ್ಟ ಅಮಾಯಕರನ್ನು ಕರೆತಂದು ಪ್ರಕರಣ ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ ಸಂಬಂದಿಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಕ್ರಮ ಮದ್ಯ ತಡೆಯುವಲ್ಲಿ ವಿಫಲರಾಗಿದ್ದಾರೆಂದರು. ಅಕ್ರಮ ಮದ್ಯ ಮಾರಾಟದಿಂದ ಗ್ರಾಮೀಣ ಭಾಗದ ಜನತೆ ಹೆಚ್ಚಾಗಿ ಮದ್ಯವ್ಯಸನಿಗಳಾಗಿ ಯುವಕರು ಹಾದಿತಪ್ಪಿದ್ದಾರೆ ಯಾರೋ ಒಬ್ಬರು ಶ್ರೀಮಂತರಾಗಲು ಇಡೀ ಜನಸಮೂಹವನ್ನೇ ಬಲಿತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಅನೇಕ ಬಡ ಜನತೆ ಕುಟುಂಬಗಳು ಬೀದಿಗೆ ಬಂದಿವೆ ಅಕ್ರಮ ಮದ್ಯ ತಡೆಯದಿದ್ದರೆ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ….

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
