;

ಹರಪನಹಳ್ಳಿ:-ಗೃಹ ಸಚಿವ ಆರಗ,ಜ್ಞಾನೇಂದ್ರ ಅವರ ರಾಜೀನಾಮೆಗೆ ಒತ್ತಾಯ…!!!

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಬುದ್ಧತೆ ಹಾಗೂ ಅವೈಜ್ಞಾನಿಕವಾಗಿ ಹೇಳಿಕೆಗಳನ್ನು ನೀಡುತ್ತಿರುವ ಗೃಹ ಸಚಿವ ಆರಗ,ಜ್ಞಾನೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಕರೆಕಾನಹಳ್ಳಿ ಸರ್ವೆ ನಂ 1/27 ರಲ್ಲಿ ಕೆರೆ ಅಕ್ರಮ ದಾಖಲಾತಿಯನ್ನು ಬಳಸಿ ಒತ್ತುವರಿ, ಕೈಬರಹ ಪತ್ರದಂತೆ ಪಹಣಿಗೆ ಆದೇಶ ನೀಡಿದ್ದನ್ನು ಖಂಡಿಸಿ, ಸ್ಥಳ‌ ಪರರಿಶೀಲನೆ ನಡೆಸಿದ ತಹಶೀಲ್ದಾರ್ ರವರು ಅನೈತಿಕ ಮಾರ್ಗದಡಿ ಪಹಣಿಗೆ ಆದೇಶ ನೀಡಿರುವುದನ್ನು ಖಂಡಿಸಿ ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪನವರ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ, ಹರಪನಹಳ್ಳಿ ಕ್ಷೇತ್ರದ ಜನನಾಯಕಿ ಎಂ,ಪಿ,ವೀಣಾ_ಮಹಾಂತೇಶ್ ಹಾಗೂ ಕೆಪಿಸಿಸಿ ಮೂಲಭೂತ ಹಕ್ಕುಗಳ ಮಾಹಿತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದನಗೌಡ_ಕರೆಗೌಡ್ರು ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದರು.

ಈ ಕುರಿತು ಮಾತನಾಡಿದ ಎಂ.ಪಿ ವೀಣಾ ಮಹಾಂತೇಶ್ ಅವರು, ಅತ್ಯಾಚಾರ ಪ್ರಕರಣಗಳಲ್ಲಿ ಸರ್ಕಾರ ಆರೋಪಿಗಳ ಪರ ನಿಲ್ಲುತ್ತಿರುವುದು ಹಾಗೂ ಜವಾಬ್ದಾರಿ ಸ್ಥಾನದಲ್ಲಿರುವುದನ್ನು ಮರೆತು ಜನಪ್ರತಿನಿಧಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವುದು ಬಿಜೆಪಿಯವರ ದಿವಾಳಿತನಕ್ಕೆ ಸಾಕ್ಷಿ.
ಕರೆಕಾನಹಳ್ಳಿಯ ಕೆರೆಗೆ ಸಂಬಂಧಿಸಿದ ಜಮೀನನ್ನು ಶಾಸಕರು ಮುತುರ್ವಜಿ ವಹಿಸಿ ಅಕ್ರಮವನ್ನು ತಪ್ಪಿಸಲು ಆಗ್ರಹಿಸಿದರು.

ಸಿದ್ದಲಿಂಗನಗೌಡ ಕರೆಗೌಡ್ರು ಮಾತನಾಡಿ ಈ ಭೂಮಿಯ ನೆಲ,ಜಲ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಅಧಿಕಾರಿಗಳು ಈ ವಿಚಾರದಲ್ಲಿ ಉದಾಸೀನ ಭಾವ ತೋರುತ್ತಿರುವುದು ಬೇಸರದ ಸಂಗತಿ. ಈ ಕೂಡಲೇ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿಯಾದ ಕೆರೆಯ ಜಾಗವನ್ನು ವಶಪಡಿಸಿ ಕೆರೆಯನ್ನಾಗಿ ಪರಿವರ್ತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರ ಅಂಜಪ್ಪ ಕರೆಕಾನಹಳ್ಳಿ ಹಾಗೂ ತಾಂಡದ ಪ್ರಮುಖರಾದ ಗ್ರಾ.ಪಂ ಸದಸ್ಯರಾದ ಕೋಮಲಿಬಾಯಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿ.ಚಂದ್ರಪ್ಪ, ಪಿ.ನಾಗರಾಜ್, ವಿ.ಶಿವರಾಜ್, ಎಲ್.ಮಂಜಪ್ಪ, ಮಲ್ಲೇಶ್ ನಾಯ್ಕ್, ಅಂಜಿನಪ್ಪ, ಮಂಜಪ್ಪ, ಸುರೇಶ್, ಚಂದ್ರನಾಯ್ಕ್, ಜಾತಪ್ಪ, ಕರಿಯಪ್ಪ, ಲಾಲುನಾಯ್ಕ್, ನಾಗರಾಜ್, ಲಕ್ಷ್ಮಪ್ಪ, ತೋಪಣ್ಣ, ಮಂಜುನಾಥ್, ಮಾಗಳದ ಹನುಮಂತಪ್ಪ, ಎಂ.ರಮೇಶ್, ಬಳಿಗಾನೂರು ಕರೀಂಸಾಬ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್ ಮಕರಬ್ಬಿ, ಯುವ ಕಾಂಗ್ರೆಸ್ ನ ಮಂಜುನಾಥ್, ದೊರೆ, ಕೆ.ಹೆಚ್.ಎಂ ಗುರು, ಮದನ್ ಸ್ವಾನಿ ಹಾಗೂ ನೇತ್ರಾವತಿ ಉಪಸ್ಥಿತರಿದ್ದರು……

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;