;

ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭ!!!!!

ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭ!!!!!

ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭ
ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭಿಸಿ ಜೀತ ವಿಮುಕ್ತಿ ಕರ್ನಾಟಕ ಜೀವಿಕ ಹೆಸರಲ್ಲಿ 1993ರಿಂದ ರಾಜ್ಯಾದ್ಯಂತ ಅದು ವಿಸ್ತಾರಗೊಂಡಿತು. 1988 ರಿಂದ 1990ರ ತನಕ ಆನೇಕಲ್ ತಾಲೂಕಿನಲ್ಲಿ ವೈಜ್ಞಾನಿಕವಾಗಿ ಕೈಗೊಂಡ ಸಮೀಕ್ಷೆಯಿಂದ ಗುರುತಿಸಲಾದ ಸುಮಾರು ಸುಮಾರು 700 ಮಂದಿ ಜೀತದಾಳುಗಳ ಸ್ಥಿತಿಗತಿಗಳ ವಿಶ್ಲೇಷಣೆಯನ್ನು ಡಾ. ಸಿದ್ದಲಿಂಗಯ್ಯ ರವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಚರ್ಚಿಸಿದ್ದರ ಪರಿಣಾಮವಾಗಿ 1980 ರಿಂದ ಇಡೀ ರಾಜ್ಯದಲ್ಲಿ ಜೀತಪದ್ಧತಿಯನ್ನು ನಿರ್ಮೂಲನೆ ಮಾಡಿ ದ್ದೇವೆ ಎಂಬ ಕರ್ನಾಟಕ ಸರ್ಕಾರದ ಅಧಿಕೃತ ಹೇಳಿಕೆ ಯನ್ನು ಬದಲಾ ಯಿಸಿ 1976ರ ಜೀತ ಕಾನೂನನ್ನು ಪುನಹ: ಅನುಷ್ಠಾನಗೊಳಿಸಲು ಅಧಿಕಾರಿ ಗಳು ಕಾರ್ಯ ಪ್ರವೃತ್ತ ರಾಗುವಂತೆ ಜೀವಿಕವೂ ಯಶಸ್ವಿಯಾಗಿ ದೆ. ತದನಂತರ 1993ರಿಂದ1995ರ ತನಕ ರಾಜ್ಯದ 15 ಜಿಲ್ಲೆಗಳ 48 ತಾಲೂಕು ಗಳಲ್ಲಿ ಯ ಎಲ್ಲಾ ಹಳ್ಳಿಗಳಲ್ಲಿ ಜೀತ ಸರ್ವೆ ಮಾಡಿ ಸುಮಾರು 20 ಸಾವಿರ ಜೀತದಾಳುಗಳನ್ನು ಗುರುತಿಸಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡ ಲಾಗಿದೆ

 

11 ಜಿಲ್ಲೆಗಳ 20-22 ತಾಲೂಕುಗಳಲ್ಲಿ 1995ರಿಂದ ಜೀತದಾ ಳುಗಳ ಜಾಗೃತಿ ಮತ್ತು ಸಂಘಟನೆಗೆ ಜೀವಿ ಕವು ವಿವಿಧ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ. ಈ ತಾಲೂಕುಗಳ ಕಾರ್ಯಕರ್ತರು ಈಗಿನ ಒಟ್ಟು 31 ಜಿಲ್ಲೆಗ ಳಲ್ಲಿ ಉಳಿದ 20 ಜಿಲ್ಲೆಗಳಲ್ಲಿಯೂ ಜೀತ ಕಾನೂನನ್ನು ಅನು ಷ್ಠಾನ ಗೊಳಿಸುವ ಕೆಲಸವನ್ನು 2006ರಿಂದ ಮಾಡುತ್ತಾ ಬಂದಿ ದ್ದಾರೆ. ಜೀತ ಕಾನೂನನ್ನು 1990ರಿಂದ ರಾಜ್ಯಾದ್ಯಂತ ಮರು ಅನುಷ್ಠಾನಗೊಳಿಸಿದ್ದೇ ಜೀವಿಕದ ಮೊದಲ ಸಾಧನೆ. ದೇಶದ ಮುಟ್ಟಿಗೂ ಆ ಕಾನೂನನ್ನು ಬೇರೆ ಬೇರೆ ರಾಜ್ಯಗಳಲ್ಲಿ ಅನು ಷ್ಠಾನಗೊಳಿಸುವಲ್ಲಿ ಜೀವಿಕದ ಮಹತ್ತರ ಪಾತ್ರವಿದೆ. ರಾಜ್ಯ ದಲ್ಲಿ ಈ ತನಕ ಸುಮಾರು 7,000 ಮಂದಿ ಜೀತದಾಳುಗಳಿಗೆ ಬಿಡುಗಡೆ ಪತ್ರ ಹಾಗೂ ಪುನರ್ವಸತಿ ಸೌಲಭ್ಯ ಸಿಕ್ಕಿದ್ದು ಸುಮಾರು 30,000 ಮಂದಿ ಸಂಘಟನೆಯ ಬೆಂಬಲದಿಂದ ತಾವಾಗಿಯೇ ಜೀತದಿಂದ ಹೊರಬಂದು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಮತ್ತು ಜೀವಿಕ ವೂ ಆನೇಕಲ್ ಪಟ್ಟಣದಲ್ಲಿ ನಡೆಸುತ್ತಿದ್ದ ಸೇತುಬಂಧ ಶಾಲೆಯಲ್ಲಿ ಸುಮಾರು ಸಾವಿರಾರು ಬಾಲ ಜೀತದಾಳುಗಳು ಜೀತದಿಂದ ವಿಮುಕ್ತಿ ಪಡೆದು,ಅಕ್ಷರ ಕಲಿತು ಸಮಾಜದಲ್ಲಿ ಉತ್ತಮವಾದ ಜೀವನವನ್ನು ನಡೆಸು ತ್ತಿದ್ದಾರೆ. ಇಂತಹ ಸಾಧನೆಯನ್ನು ಮಾಡಿರುವಂತಹ ಜೀವಿಕ ಸಂಸ್ಥಾಪಕರಾದ ಡಾ.ಕಿರಣ ಕಮಲ ಪ್ರಸಾದ ರವರ ಸೇವೆ ಮತ್ತು ಕೊಡುಗೆ ಶೋಷಿತ ಸಮುದಾಯಕ್ಕೆ ಅಪಾರವಾದದ್ದು, ಆನೇಕಲ್ ತಾಲ್ಲೂಕು ಜೀವಿಕ ಸಂಘಟನೆಯ ವತಿಯಿಂದ ಡಾ, ಕಿರಣ ಕಮಲ ಪ್ರಸಾದ ರವರ ಮಾರ್ಗ ದರ್ಶನದಲ್ಲಿ ಜೀವಿಕಾ ದಿನಾಚರಣೆಯನ್ನು ಗುಡ್ಡಹಟ್ಟಿಯ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

 

ಕಾರ್ಯಕ್ರಮದಲ್ಲಿ ಜೀವಿಕಾ ರಾಜ್ಯ ಮುಖಂಡರಾದ ರಾಮಸ್ವಾಮಿ ಯವರು, ಜೀವಿಕಾ ತಿರುಳು ಗುಂಪಿನ ಸದಸ್ಯರಾದ ವಕೀಲ ರಾಮ ಕೃಷ್ಣ,ವಿಶ್ವಶಾಂತಿ ಮಹಾಬೋಧಿ ಬುದ್ಧ ವಿಹಾರ ಟ್ರಸ್ಟ್ ನ ಅಧ್ಯಕ್ಷರಾದ ರಾವಣ, ಜೀವಿಕ ಹಿರಿಯ ಮುಖಂಡರು ಹಾಗೂ ಬಳ್ಳೂರು ಗ್ರಾಮ ಪಂಚಾ ಯಿತಿ ಸದಸ್ಯರಾದ ಮಧುಕುಮಾರ್,ಜೀವಿಕ ಹಿರಿಯ ಮುಖಂಡರು ಹಾಗೂ ನೆರಳೂರು ಗ್ರಾಮ ಪಂಚಾಯತಿ ಸದಸ್ಯರಾದ ಮಂಜುಳ, ರಾಮಕೃಷ್ಣ, ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆಯ) ರಾಜ್ಯ ಮುಖಂಡರಾದ ಗುಳಿಮಂಗಲ ನಾಗಪ್ಪ,ಜೀವಿಕ ಹಿರಿಯ ಮುಖಂಡರಾದ ಪೂರ್ಣಿಮಾ ಕುಮಾರ್, ವಾರ್ತಾಭಾರತಿ ವರದಿಗಾರರಾದ ಮುನಿರಾಜು ರವರು,ಜೈ ಕರ್ನಾಟಕ ಸಂಘಟನೆಯ ಮುಖಂಡರಾದ ಹಾರೋಹಳ್ಳಿ ವೆಂಕಟರಮಣ,ದಲಿತ ಚಳುವಳಿಯ ಮುಖಂಡರಾದ ದೊಡ್ಡ ಹಾಗಡೆ ಕೃಷ್ಣಪ್ಪ, ಜೀವಿಕ ಸಂಘಟನೆಯ ಗುಡ್ಡಹಟ್ಟಿ ಗೋಪಿ, ಶಾಕ್ಯ ವಂಶಿ ಬುದ್ಧವಿಹಾರ ಟ್ರಸ್ಟ್ ಅಧ್ಯಕ್ಷರಾದ ಅಡಿಗಾರ ಕಲ್ಲಹಳ್ಳಿ ನಾರಾಯಣಸ್ವಾಮಿ,(ಕಾನಿಷ್ಕ) ಗುಡ್ಡಹಟ್ಟಿ ಯುವ ಮುಖಂಡ ರಾದ ಪ್ರಸಾದ್, ಸುರೇಶ್,ವಾಸು,ಸುಹಾಸ್, ಹರೀಶ್, ಗುಡ್ಡಹಟ್ಟಿ ಶೋಭಾ, ಜೀವಿಕಾ ತಾಲೂಕು ಸಂಚಾಲಕರಾದ ನಂಜೇಶ್ ಪ್ರಭುದ್ಧ,ಜೀವಿಕಾ ವಿದ್ಯಾರ್ಥಿ ಸಂಘದ ಮುಖಂಡ ರಾದ ಹರಪನಹಳ್ಳಿ ಕೃಷ್ಣಾರೆಡ್ಡಿ, ಬಿದರಗುಪ್ಪೆ ಶ್ರೀನಿವಾಸ್, ಲೋಕೇಶ್ ಬಹುಜನ ಎಲೆಕ್ಟ್ರಾನಿಕ್ ಸಿಟಿ,ಚಂದನ್ ಜಿಗಣಿ,ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;