ಮಧುರಖಂಡಿ ಗ್ರಾಮದ ನಾಲ್ವರು ಸಹೋದರರ ಬರ್ಬರ ಹತ್ಯೆ; 9ಆರೋಪಿಗಳ ಬಂಧನ
12 ಆರೋಪಿಗಳ ಹೆಸರು.
ಬಾಗಲಕೋಟೆ: ಮಧುರಖಂಡಿ ಗ್ರಾಮದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದ್ದ 9 ಆರೋಪಿಗಳನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಧುರಕಂಡಿಯಲ್ಲಿ ನಿನ್ನೆ ಹೊಲಕ್ಕೆ ತೆರಳಿದ್ದ ಮುದರಡ್ಡಿ ಕುಟುಂಬದ ಓರ್ವ ಸದಸ್ಯನ ಮೇಲೆ ಪುಟಾಣಿ ಕುಟುಂಬದವರು ಹಲ್ಲೆ ನಡೆಸಿ ಗಲಾಟೆ ಆರಂಭಿಸಿದ್ದರು. ವಿಷಯ ತಿಳಿಯುತ್ತುದ್ದಂತೆ ಸ್ಥಳಕ್ಕೆ ಧಾವಿಸಿದ ಮೂವರು ಸಹೋದರರನ್ನು ಒಬ್ಬೊಬ್ಬರನ್ನಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಒಟ್ಟು ನಾಲ್ವರು ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಕೇವಲ 21 ಗುಂಟೆ ಜಾಗದ ವಿಚಾರವಾಗಿ ಮುದರಡ್ಡಿ ಹಾಗೂ ಪುಟಾಣಿ ಎಂಬ ಎರಡು ಕುಟುಂಬಗಳ ನಡುವೆ ಜಗಳವಾಗಿ ಕೊಲೆಯಲ್ಲಿ ಪ್ರಕರಣ ಅಂತ್ಯವಾಗಿದೆ. ನಾಲ್ವರು ಸಹೋದರರ ಹತ್ಯೆ ಪ್ರಕರಣ ಸಂಬಂಧ ಇದೀಗ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ 12 ಮಂದಿ ಕೃತ್ಯವೆಸಗಿದ್ದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ…
ವರದಿ. ಮಹಾಲಿಂಗ ಗಗ್ಗರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
