;

ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಕೊಡಿಸಿದರೆ ಅರ್ಥಿಕವಾಗಿ ಬದುಕು ಸಬಲೀಕರಣ ವಾಗುತ್ತದೆ:ಎಂ ಡಿ ಮಂಜುನಾಥ್.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಇಂದು ಅಗಸ್ಟ್-29 ಡಿಕೆಆರ್ ಐಟಿಐ ಕಾಲೇಜಿನಲ್ಲಿ ಡಿಕೆಆರ್ ಗ್ರೂಪ್ ಮತ್ತು ನೀಡ್ಸ್ ಮ್ಯಾನ್ ಪವರ್ ಸಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಯವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಎಂ ಡಿ ಮಂಜುನಾಥ್ ರವರು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಕೂಡ ಯುವಕರಿಗೆ ಉದ್ಯೋಗದ ಸಮಸ್ಯೆ ಹೇರಳವಾಗಿ ಕಾಡುತ್ತಿದೆ ಮತ್ತು ಯಾವ ಯಾವ ಕಂಪನಿಗಳಲ್ಲಿ ಎನು ಕೆಲಸಗಳಿವೆ ಎನ್ನುವ ಮಾಹಿತಿಯ ಕೊರತೆ ಇಲ್ಲದಾಗಿದೆ ಲಾಕ್ಡೌನ್ ಸಂಧರ್ಭದಲ್ಲಿ ಯುವಕರಿಗೆ ಉದ್ಯೋಗವಿಲ್ಲದೆ ಸಾಕಷ್ಟು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಆರ್ಥಿಕ ಸೌಲಭ್ಯಗಳಿಲ್ಲದೆ ಮನೆಯಲ್ಲಿ ದಿನನಿತ್ಯದ ಬದುಕಿನಲ್ಲಿ ಬೇಕಾಗುವ ಪರಿಕರಗಳನ್ನು ತೆಗೆದುಕೊಳ್ಳದಂತಹ ವಿಪರೀತ ದುಸ್ಥಿತಿಯಲ್ಲಿ ಸಂಕಷ್ಟಗಳನ್ನು ಅನುಭವಿಸಿದ್ದಾರೆ ಆದ್ದರಿಂದ ರೀತಿಯ ಉದ್ಯೋಗ ಮೇಳಗಳಿಂದ ಉದ್ಯೋಗ ಕೊಡಿಸಿದರೆ ಆರ್ಥಿಕವಾಗಿ ಅವರವರ ಬದುಕು ಸಬಲೀಕರಣವಾಗುತ್ತದೆ ಹಾಗೂ ತಾಲೂಕಿನ ವಿವಿಧ ಕಡೆ ಉದ್ಯೋಗ ಮೇಳಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬ ನಿರುದ್ಯೋಗ ಯುವಕರಿಗೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಹ್ಯಾಲೀಸ್ ಬ್ಲೂವೆಲ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕರಾದ ಶಿವಮೂರ್ತಿ, ಹೂಂಡಾ ಕಂಪನಿಯ ಸಹದೇವ, ಮಧು, ಕಾತೀ ಮಾಸ್ಟರ್, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ಶಿಕ್ಷಕರಾದ ಮುಜಾಮಿಲ್, ವಕೀಲರಾದ ಬಸವರಾಜ, ಸರ್ಕಾರಿ ಕೈಗಾರಿಕಾ ಕೆಂದ್ರದ ವೆಂಕಟೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;