;

ಸಿಂಗಟಲೂರು ಏತ ನೀರಾವರಿ ಯೋಜನೆಯ ಕೆರೆಗೆ ನೀರು ತುಂಬಿಸುವ ಕಾರ್ಯ ಶೀಘ್ರ ವಿಸ್ತರಣೆ!! ಪಿ.ಟಿ. ಪರಮೇಶ್ ನಾಯ್ಕ…!!!

ಸಿಂಗಟಲೂರು ಏತ ನೀರಾವರಿ ಯೋಜನೆಯ ಕೆರೆಗೆ ನೀರು ತುಂಬಿಸುವ ಕಾರ್ಯ ಶೀಘ್ರ ವಿಸ್ತರಣೆ!! ಪಿ.ಟಿ. ಪರಮೇಶ್ ನಾಯ್ಕ

ಹೂವಿನ ಹಡಗಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ವಿಸ್ತರಣೆ ಶೀಘ್ರದಲ್ಲಿ ಅರಂಭವಾಗಲಿದೆ ಎಂದು ಪಿ. ಟಿ ಪರಮೇಶ್ವರ ನಾಯ್ಕ್ ತಿಳಿಸಿದರು.

ಸಿಂಗಟಲೂರು ಏತ ನೀರಾವರಿ ಯೋಜನೆಯ ಆಧಿಕಾರಿಗಳ ಸಭೆಯಲ್ಲಿ ಮಾತನಾಡಿ
ಹೂವಿನ ಹಡಗಲಿ ವಿಧಾನ ಸಭಾ ವ್ಯಾಪ್ತಿಯಲ್ಲಿ 25 ಕೆರೆಗಳಿಗೆ ನೀರು ತುಂಬಿಸಲಾಗಿದ್ದು. ಇನ್ನೂ 3.32 ಕೋಟಿ ವೆಚ್ಚದಲ್ಲಿ ಇನ್ನೂ ಮೂರು ಕೆರೆಗಳಿಗೆ ನದಿಯಿಂದ ನೀರು ತುಂಬಿಸಲಾಗುವುದು.
ತಾಲೂಕಿನ ಕಗ್ಗಲಗಟ್ಟಿ ಕೆರೆಗೆ 1.31 ಕೋಟಿ ರೂಪಾಯಿ,ತುಂಬಿನಕೇರಿ ತಾಂಡಕ್ಕೆ 1.31 ಕೋಟಿ ರೂಪಾಯಿಗಳು, ಟಕ್ಕರಿಬೆನಕೆ ಹತ್ತಿರದ ಕೆರೆಗೆ 70 ಲಕ್ಷ ಸೇರಿ ಒಟ್ಟು 3.32 ಕೋಟಿ ವೆಚ್ಚದಲ್ಲಿ ಮೂರು ಕೆರೆಗೆ ನೀರು ತುಂಬಿಸು ಕಾರ್ಯ ಶೀಘ್ರದಲ್ಲೇ ಅರಂಭಮಾಡಲಾಗುವುದು,
ವ್ಯವಸಾಯ, ಗೃಹ ಬಳಕೆ ಮತ್ತು ಕುಡಿಯಲು ನೀರಿನ ಸೌಲಭ್ಯ ಒದಗಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯ, ಇದುವರೆಗೂ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಯೋಜನೆಯ ಸಫಲತೆಯನ್ನ ಕಂಡುಕೊಳ್ಳಲಾಗಿದೆ. ಈ ಸಂಧರ್ಭದಲ್ಲಿ ಸಿಂಗಟಲೂರು ಏತ ನೀರಾವರಿ ಯೋಜನೆಯ ಅಧಿಕಾರಿಗಳು ,ಕಾರ್ಯಕರ್ತರು, ಭಾಗವಹಿಸಿದ್ದ ಕಾರ್ಯ ಕ್ರಮದಲ್ಲಿ ಮಾನ್ಯ ಪಿ.ಟಿ. ಪರಮೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು.

ವರದಿ: ಅಜಯ.ಚ
ಹುಗಲೂರು
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;