;

ಕೂಡ್ಲಿಗಿ:-ಪ್ರಗತಿ ಕೇಂದ್ರಗಳ ಕಲಿಕಾ ಸಾಮಗ್ರಿ ವಿತರಣೆ…!!!

ಪ್ರಗತಿ ಕೇಂದ್ರಗಳ ಕಲಿಕಾ ಸಾಮಗ್ರಿ ವಿತರಣೆ

ಕೂಡ್ಲಿಗಿ:ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮತ್ತು ವಾಹಿನಿ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೂಡ್ಲಿಗಿ ತಾಲೂಕಿನ ಒಟ್ಟು 142 ಪ್ರಗತಿ ಕೇಂದ್ರದ ಗುರುಮಾತೆಯರಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುಮೂರ್ತಿ ಇವರು ಸುಧೀರ್ಘವಾಗಿ ಮಾತನಾಡಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಘನತೆವೆತ್ತ ಅಧ್ಯಕ್ಷರು ಹಾಗೂ ಈ ಭಾಗದ ಧೀಮಂತ ವ್ಯಕ್ತಿಯಾಗಿರುವ  ಶ್ರೀ ಬಸವರಾಜ್ ಪಾಟೀಲ್ ಸೇಡಂ ಮತ್ತು ನಿರ್ದೇಶಕರಾದ ಬಾಬು ಲಾಲ್ ಜೈನ್  ಅವರ  ದೂರದೃಷ್ಟಿಯ ಈ ಕಾರ್ಯಗಳು ಅತ್ಯಂತ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಇಂದಿನ ಶಿಕ್ಷಣ ಪದ್ಧತಿ, ಮಕ್ಕಳನ್ನು ನಾಡಿನ ಆಸ್ತಿಯನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ, ಸಂಬಂಧಗಳ ಅರಿವು, ಹಾಗೂ ಪ್ರಗತಿ ಕೇಂದ್ರದ ನಿರ್ವಾಹಣೆ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಪ್ರತೀ ಮಗುವಿಗೂ  ತಾಯಿಯೇ ಮೊದಲ ಗುರು ಆಗಿರುತ್ತಾಳೆ, ಹಾಗಾಗಿ ಆ ತಾಯಿಯ  ಸಂಸ್ಕಾರಭರಿತ ಜೀವನವೇ ಆ ಮಗು ಕಲಿಯುವ ಮೊದಲ ಪಾಠವಾಗಿರುತ್ತದೆ. ಮಗು ನಿಸರ್ಗದಲ್ಲಿ ಬೆರೆತು ಕಲಿತಾಗ ಮಾತ್ರ ಸಂಬಂಧಗಳ ಮಧುರತೆಯನ್ನು ಅರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಕಾರಮಾಲ ಎಂಬ ಪುಸ್ತಕದಲ್ಲಿ ಮಹಿಳೆಯರು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳುವ ವಿಚಾರಗಳು ತುಂಬಾ ಇವೆ ಎಂದರು. ಜಿಲ್ಲಾ ಸಂಚಾಲಕರಾದ..

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;