;

40 ಕ್ಕು ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.!

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ತಮ್ಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋನಾಪುರ ಗ್ರಾಮದಲ್ಲಿ ಇಂದು ಆಗಸ್ಟ್-27 ನಡೆದ ಬೂತ್ ಅಧ್ಯಕ್ಷರ ಮನೆ ಮುಂಭಾಗದಲ್ಲಿ ಬೂತ್ ಅಧ್ಯಕ್ಷರ ನಾಮಫಲಕವನ್ನು ಅಳವಡಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಸಲಾಯಿತು. ಈ ಸಂದರ್ಭದಲ್ಲಿ ತಮ್ಮೇನಹಳ್ಳಿ ಶಕ್ತಿ ಕೇಂದ್ರದ ವ್ಯಾಪ್ತಿಯ ಶಿರೆಕೊಳ ಮತ್ತು ಬೊಮ್ಮಕ್ಕನಹಳ್ಳಿ ಗ್ರಾಮದ ಎಸಿ ಮತ್ತು ಎಸ್‌.ಟಿ ಕಾರ್ಯಕರ್ತರು ಸಾಮೂಹಿಕವಾಗಿ ನರೇಂದ್ರ ಮೋದಿಜಿ ಮತ್ತು ಬಸವರಾಜ್ ಬೊಮ್ಮಾಯಿ ಆಡಳಿತವನ್ನು ಮೆಚ್ಚಿ 40 ಕ್ಕು ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮೊಳಕಾಲ್ಮುರು ಮಂಡಲದ ಅಧ್ಯಕ್ಷರಾದ ಡಾ” ಮಂಜುನಾಥ ಪಿ.ಎಂ ಮಾತನಾಡಿ ಭಾರತೀಯ ಕಟ್ಟಕಡೆಯ ಕಾರ್ಯಕರ್ತನನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡುವ ಏಕೈಕ ಪಕ್ಷ ಅಂತ ಇದ್ದರೆ ಅದು ಬಿಜೆಪಿ ಪಕ್ಷ ಮಾತ್ರ ಎಂದು ನೂರಾರು ಕಾರ್ಯಕರ್ತರಿಗೆ ಹೇಳಿದರು.

ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮದಾಸ್ ಕೆ , ರಾಜ್ಯ ಸ್ಥಾಯಿ ಸಮಿತಿ ಸದಸ್ಯರಾದ ಜಿಂಕಲು ಬಸವರಾಜ್ , ಮಾಜಿ ಮಂಡಲ ಅಧ್ಯಕ್ಷರಾದ ಗಂಗಾಧರಪ್ಪ , ಯುವಮುಖಂಡರಾದ ಎನ್.ವೈ ಚೇತನ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೂರಮನಹಳ್ಳಿ ನಾಗರಾಜ , ಮೊಳಕಾಲ್ಮುರು ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ವರಪ್ಪ, ಮೊಳಕಾಲ್ಮುರು ನಗರಘಟಕದ ಅಧ್ಯಕ್ಷರಾದ ಕಿರಣ್ ಗಾಯಕವಾಡ್, ಯುವ ಮೋರ್ಚಾ ಅಧ್ಯಕ್ಷರಾದ ಹರೀಶ್ ಕಡೆತೋಟ , ತಮ್ಮೇನಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಗುರುಲಿಂಗಪ್ಪ , ಶಕ್ತಿ ಕೇಂದ್ರ ಪ್ರಮುಖರಾದ ಹನುಮಂತಪ್ಪ ಉಪ್ಪಾರ ಮತ್ತು ಗೋವಿಂದರಾಜು, ಯುವಮೋರ್ಚ್ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಬಿಜೆಪಿ ಹಿರಿಯ ಮುಖಂಡರಾದ ಸಿದ್ದನಾಯಕ, ಸಣ್ಣ ಮಾರಣ್ಣ , ನರಸಿಂಹರೆಡ್ಡಿ, ಕೆ.ಬಿ ಮಾರಣ್ಣ, ಶಿವರುದ್ರಪ್ಪ, ರಾಮಲಿಂಗಪ್ಪ , ಗವಿಸಿದ್ದಪ್ಪ, ಶನಾಗೇಂದ್ರಪ್ಪ , ಹೊನ್ನೂರಪ್ಪ, ಮೃತ್ಯುಂಜಯ ಮುರುಡಿ , ಬಂಡೆಪ್ಪ, ಭೀಮಣ್ಣ, ರಾಜಣ್ಣ, ಹೊನ್ನೂರಸ್ವಾಮಿ ಬೊಮ್ಮದೇವರಹಳ್ಳಿ , ಈಶ್ವರ, ನರಸಿಂಹಪ್ಪ ಕಣಕುಪ್ಪೆ, ಸಣ್ಣಪ್ಪ, ರಾಮಾಂಜಿನೇಯ, ಯುವಮುಖಂಡರಾದ ಕುಮಾರಸ್ವಾಮಿ, ಮಂಜುನಾಥ, ಆಂಜಿನೇಯ, ಅಮರೇಶ್, ಪೆನ್ನಯ್ಯ , ವಸಂತ, ಮಾರೇಶ್, ಹರೀಶ್ ರೆಡ್ಡಿ, ಹನುಮಂತಪ್ಪ, ಭೀಮಣ್ಣ, ಗಾದಿಲಿಂಗಪ್ಪ, ಮಹೇಶ್, ಹೊನ್ನೂರಸ್ವಾಮಿ, ಅಮೃತ, ಮುಕ್ಕಣ್ಣ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ. ಮಂಜುನಾಥ್, ಎಚ್

 

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;