;

ಪುಟ್ ಪಾತ್ ಮೇಲೆ ಬೈಕ್ ಪಾರ್ಕಿಂಗ್ ಸಂಕಷ್ಟದಲ್ಲಿ ಪಾದಚಾರಿಗಳು…!!!

ಪುಟ್ ಪಾತ್ ಮೇಲೆ ಬೈಕ್ ಪಾರ್ಕಿಂಗ್ ಸಂಕಷ್ಟದಲ್ಲಿ ಪಾದಚಾರಿಗಳು..
ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನಗಳು ನೋ ಪಾರ್ಕಿಂಗ್ ಸ್ಥಳಗಳಲ್ಲಿ ಸ್ವಲ್ಪ ಹೊತ್ತು 2 ನಿಮಿಷ ನಿಲ್ಲಿಸಿ ಆಚೆ ಎಲ್ಲಾದ್ರೂ ಹೋದ್ರೆ ಸಾಕು ಅವನ ಜೇಬಿಗೆ 1000 ಕತ್ತರಿ ಬೀಳೋದು ಪಕ್ಕ ಆದ್ರೆ ಇಲ್ಲಿ ಸುಮಾರು ವರ್ಷಗಳಿಂದ ಪುಟ್ ಪಾತ ನಲ್ಲಿ ದ್ವಿ ಚಕ್ರವಾಹನಗಳು ನಿಂತು ಪಾದಚಾರಿಗಳಿಗೆ ತಿರುಗಾಡಲು ದಾರಿ ಇಲ್ಲ ಇಲ್ಲಿ ಬಂದಾಗ ಎಲ್ಲರೂ ರಸ್ತೆ ಮೇಲೆ ಪುಟ್ ಪಾತ್ ಬಿಟ್ಟು ರಸ್ತೆ ಮೇಲೆ ನಡೆದು ಹೋಗುತ್ತಾರೆ ಇದೆಲ್ಲ ಎಲ್ಲಿದೆ ಅಂತೀರಾ ಬನ್ನೇರುಘಟ್ಟ ಮುಖ್ಯರಸ್ತೆ IIMB ಅಪೋಲೊ ಆಸ್ಪತ್ರೆ ಇಂದ 300 ಮೀಟರ ಬೆಂಗಳೂರು ಕಡೆ ಬಂದರೆ ಕಾಣುವ ರಾಧಾ ಕೃಷ್ಣ ಟವರ್ ಎನ್ನುವ ಕಟ್ಟಡ ಮುಂಭಾಗ ಏರ್ಟೆಲ್ ಕಚೇರಿ ಮತ್ತು ಸಬ್ ವೆ ಎನ್ನುವ ಹೋಟಲ್ ಇದ್ದು ಇಲ್ಲಿಗೆ ಬರುವ ಗ್ರಾಹಕರು ಮತ್ತು ಇಲ್ಲಿನ ಉದ್ಯೋಗಿಗಳು ಪುಟ್ ಪಾತ್ ಮೇಲೆ ತಮ್ಮ ಬೈಕ್ ನಿಲ್ಲಿಸಿ ಹೋಗ್ತಾರೆ ಇಲ್ಲಿ ಪಾದಚಾರಿ ಗಳು ಬಂದ ತಕ್ಷಣ ಮುಖ್ಯ ರಸ್ತೆಗೆ ಇಳಿದು ಹಾದು ಹೋಗ್ತಾರೆ ಎದುರು ಬರುವ ವಾಹನಗಳು ಗುದ್ದಿ ಎಷ್ಟೋ ಸಣ್ಣಪುಟ್ಟ ಅಪಘಾತಗಳು ಈಗಾಗಲೆ ನಡೆದು ಹೋಗಿವೆ ಇದು ಮುಖ್ಯ ರಸ್ತೆ ಆಗಿದ್ದು ದಿನ ನಿತ್ಯ ಪೊಲೀಸರು ಈ ಕಡೆ ಇಂದ ಹಾದು ಹೋದ್ರು ಗೊತ್ತೇ ಇಲ್ಲ ಎಂಬಂತೆ ಹೋಗ್ತಾರೆ ಇದೆಲ್ಲ ನೋಡಿದ್ರೆ ಈ ಕಟ್ಟಡ ಮಾಲೀಕರಿಂದ ಏನಾದ್ರು ಮಾಮೂಲಿ ತಗೊಳ್ತಾರ ಎನ್ನುವ ಅನುಮಾನ ಸಾರ್ವಜನಿಕರನ್ನ ಕಾಡದೆ ಇರಲ್ಲ ಈಗಲಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪುಟ್ ಪಾತ್ ಮೇಲೆ ವಾಹನಗಳು ನಿಲ್ಲದಂತೆ ಸೂಕ್ತ ಕ್ರಮ ಜರುಗಿಸಿ ಪಾದಚಾರಿಗಳು ಸಂಚರಿಸಲು ಅನುಕೂಲ ಮಾಡಿಕೊಡುವಂತೆ ಮನವಿ….

ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;