ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನರ ಜೀವನಾಡಿಯಾಗಿರುವ ವೇದಾವತಿ ನದಿ, ರೈತರು ಜನಜಾನುವಾರುಗಳಿಗೆ ಅನುಕೂಲ ಕಲ್ಪಿಸಿದೆ.
ಮಾನ್ಯ ಶಾಸಕರಾದ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ವೇದಾವತಿ ನದಿಗೆ ಚೆಕ್ ಡ್ಯಾಮ್ ನಿರ್ಮಾಣ ಮಾಡಿ, ರೈತರ ಕೃಷಿ ಕಾರ್ಯಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಅನುಕೂಲ ಪಡೆದಿರುವ ರೈತರು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತಷ್ಟು ಬ್ಯಾರೇಜ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ
ಕರ್ನಾಟಕ ರಾಜ್ಯ ರೈತ ಸಂಘ ಚಳ್ಳಕೆರೆ ಶಾಖೆ ವತಿಯಿಂದ ಕೂಡಲ ಸಂಗಮ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ರೈತರ ಧರಣಿ ಸತ್ಯಾಗ್ರಹ ದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ಅವರು ಪಾಲ್ಗೊಂಡು, ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ವೇದಾವತಿ ನದಿಗೆ ಮೋದೂರು ಹತ್ತಿರ ಬ್ಯಾರೆಜ್ ನಿರ್ಮಾಣ ಹಾಗೂ ನಾಗಗೊಂಡನಹಳ್ಳಿಯಿಂದ ಗುಡಿಬಂಡೆವರೆಗಿನ ರಸ್ತೆ ಅಭಿವೃದ್ಧಿ ಪಡಿಸಿ ಡಾಂಬರೀಕರಣ ಮಾಡುವಂತೆ ಮಾನ್ಯ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರ ಮನವಿಗೆ ಸ್ಪಂದಿಸಿದ ಮಾನ್ಯ ಶಾಸಕರ ರೈತರ ಬೇಡಿಕೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಸಮಯದಲ್ಲಿ ತಹಸಿಲ್ದಾರ್ ಏನ್ ರಘುಮೂರ್ತಿ ರೈತ ಮುಖಂಡರಾದ ಭೂತಯ್ಯ ರವರು ಹೊರಕೆರೆಪ್ಪ ಮುಂತಾದವರು ಹಾಜರಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
