ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಸ್ಯಾನಿಟೈಸರ್ ಮಾಡಲಾಯಿತು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ರಾಮಸಾಗರ ಹಟ್ಟಿ ಪ್ರೌಢಶಾಲೆಗೆ
ಸರ್ಕಾರದ ಆದೇಶದಂತೆ ಕೆಲವು ತರಗತಿಗಳನ್ನು ಪ್ರಾರಂಭ ಮಾಡಲು ಮುಂಜಾಗ್ರತಾ ಕ್ರಮವಾಗಿ ಶಾಲಾಮಕ್ಕಳಿಗೆ ಕರೋನವೈರಸ್ ಹರಡದಂತೆ ಕೆಲವು ತರಗತಿಯ ಕೊಠಡಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ. ಎಸ್ ಪಿ ಜಿಲಾನ್ ಸ್ಯಾನಿಟೈಸರ್ ಸಿಂಪರಣೆ ಮಾಡಿಸಿದರು. ಸಿಂಪರಣೆ ಮಾಡಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿಲಾನ್ ರವರು, ಈಗಾಗಲೇ ಸರ್ಕಾರ ಆದೇಶ ಮಾಡಿರುವುದರಿಂದ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯು ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಮಕ್ಕಳಿಗೆ ಕರೋನ ವೈರಾಣು ಹರಡದಂತೆ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳ ಕೊಠಡಿ ಗಳನ್ನು ಸ್ವಚ್ಛತೆ ಮಾಡಿಸಿ ಸ್ಯಾನಿಟೈಸರ್
ಮಾಡಿಸಲಾಗಿದೆ. ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೂ ಹಾಗೂ ಶಾಲೆ ಸಿಬ್ಬಂದಿಗಳಿಗೆ ಕೊರೋನಾ ಮೂರನೇ ಅಲೆ ವ್ಯಾಪಕವಾಗಿ ಹರಡುವುದರಿಂದ ಕರೋನಾ ನಿಯಮವನ್ನು ಪಾಲಿಸಿ.ನಿಮ್ಮ ಮಕ್ಕಳಿಗೆ ಶಾಲೆ ಪ್ರಾರಂಭವಾಗುತ್ತಿದ್ದಂತೆ ತಪ್ಪದೇ ಶಾಲೆಗೆ ಕಳುಹಿಸಿರಿ ಎಂದು ಹೇಳಿ, ತಪ್ಪದೇ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸುಖಾಸುಮ್ಮನೆ ಗುಂಪುಗುಂಪಾಗಿ ಸೇರುವುದು ಮಾಡಬೇಡಿ, ನೀವೆಲ್ಲರೂ ಕರೋನಾ ನಿಯಮವನ್ನು ಪಾಲಿಸಿ ಕರೋನವನ್ನು ಹೊಡೆದೋಡಿಸಲು ಸಹಕರಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು,ಸಿಬ್ಬಂದಿ ವರ್ಗ. ಶಾಲೆಯ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರುಗಳು ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು..

ವರದಿ. ಕೆ. ಎಸ್. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
