;

ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಓರ್ವನ ಸಾವು…!!!

ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಓರ್ವನ ಸಾವು

ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಶರಭನಗೌಡ ಜಮೀನು ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸುಮಾರು 6 ಗಂಟೆ 30 ನಿಮಿಷಕ್ಕೆ ನೆಡೆದಿರುವ ರ್ದುಘಟನೆ. ಮೂಲತ ಬಳ್ಳಾರಿಯ ಆದರ್ಶ ಕಾಲೋನಿಯ ವ್ಯಕ್ತಿಯಾದ ಮೋಹನ್(34) ಮೃತಪಟ್ಟ ದುರದೈವಿಯಾಗಿದ್ದಾನೆ ಪೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ ಸುಮಾರು ಎರಡು ತಿಂಗಳಿಂದ ತನ್ನ ಮಡದಿಯ ಊರಾದ ಹೊಳಗುಂದಿಯಲ್ಲಿ(ಆಂಧ್ರಪ್ರದೇಶ) ವಾಸವಿದ್ದನು ಕೆಲಸದ ನಿಮಿತ್ತ ಇಳಕಲ್ ಗೆ ಹೋಗಿ ಹೊಳಗುಂದಿಗೆ ಹಿಂತಿರುಗುತ್ತಿದ ಸಂದರ್ಭದಲ್ಲಿ ಸಿರುಗುಪ್ಪ ಮತ್ತು ಹಳೇಕೋಟೆ ಮಾರ್ಗ ಮದ್ಯೆ KA 34 B 7487 ನಂಬರಿನ ಲಾರಿ ಬಳ್ಳಾರಿ ಕಡೆಯಿಂದ ಬರುತ್ತಿತ್ತು.KA 34 K 1331 ನಂಬರಿನ ದ್ವಿಚಕ್ರ ವಾಹನ ಸಿರುಗುಪ್ಪ ಕಡೆಯಿಂದ ಬರುತ್ತಿದ್ದ ಸಮಯದಲ್ಲಿ ಭೀಕರ ಅಪಘಾತವಾದ ಪರಿಣಾಮ ದ್ವಿಚಕ್ರವಾಹನ ಸವಾರನ ತಲೆ ಮತ್ತು ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದರಿಂದ ರಕ್ತ ಸ್ರಾವ ಹೆಚ್ಚಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ತೆಕ್ಕಲಕೋಟೆ ಅರಕ್ಷಕರ ಠಾಣೆಯ ಪಿಎಸ್ಐ ಶಿವಕುಮಾರನಾಯ್ಕ್ ಮತ್ತು ಸಿಬ್ಬಂದಿ ವರ್ಗದವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ವ್ಯಕ್ತಿಯ ಕುಟುಂಬಕ್ಕೆ ಅಪಘಾತದ ಬಗ್ಗೆ ಮಾಹಿತಿ ನೀಡಿ ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದರು ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಕಾನೂನು ಚೌಕಟ್ಟಿನ ಅಡಿಯಲ್ಲಿ ಕ್ರಮಕೈಗೊಳ್ಳಲಿದ್ದಾರೆ…

ವರದಿ.ವಿರೇಶ್ ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;