ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಗೋಬಯ್ಯನಹಟ್ಟಿ ಗ್ರಾಮದಲ್ಲಿ ಇಂದು (ಅಗಸ್ಟ್-21) ಮಾದರಿ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಡಿ ಕೆ ಶಿವಕುಮಾರ್, ಸಂತೋಷ್ ಲಾಡ್, ಮತ್ತು ಡಾ.ಯೋಗೇಶ್ ಬಾಬು ರವರ ಪುತ್ತಳಿಗಳನು ನಿರ್ಮಿಸಲು ಭೂಮಿ ಪೂಜೆಯನ್ನು ಪರಮ ಪೂಜ್ಯ ವಿಜಯ ಮಹಂತೇಶ್ವರ ಶಾಖಾ ಮಠದ ಸಿದ್ದಯ್ಯನಬಕೋಟೆ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಬಸವಲಿಂಗ ಮಹಾ ಸ್ವಾಮಿಗಳವರ ಅಮೃತ ಹಸ್ತದಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಪಿ ಪಾಲಯ್ಯ, ಜಿ.ಎನ್ ಜಗದೀಶ್, ನಾಗೇಂದ್ರಪ್ಪ,
ರಾಮಾಂಜಿನೇಯ, ಮಲ್ಲಯ್ಯ, ಆನಂದ, ಮಹಂತೇಶ, ಗಾಯಕರು ಕೋನಸಾಗರ ಶಿವು, ಕೆ.ಪಿ ಶಿವಮೂರ್ತಿ, ಶಿವಣ್ಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
